ಮುಂಬೈ: ಜನವರಿ 15 ರಂದು ನಡೆಯಲಿರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ನವ ನಿರ್ಮಾಣ ಸೇನಾ (MNS) ಮುಖ್ಯಸ್ಥ ರಾಜ್ ಠಾಕ್ರೆ ಬುಧವಾರ ಮೈತ್ರಿ ಘೋಷಿಸಿದರು. ಈ ಮೂಲಕ ಒಂದು ತಿಂಗಳಿನಿಂದ ನಡೆಯುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಉದ್ಧವ್ ಠಾಕ್ರೆ, ಎರಡು ಪಕ್ಷಗಳು ಒಟ್ಟಿಗೆ ಇರಲು ಜಂಟಿಯಾಗಿ ಚುನಾವಣೆ ಎದುರಿಸುತ್ತಿರುವುದಾಗಿ ತಿಳಿಸಿದರು.
ಆದಾಗ್ಯೂ, ಬಹು ನಿರೀಕ್ಷಿತ ಬಿಎಂಸಿ ಚುನಾವಣೆಯ ಸ್ಥಾನ ಹೊಂದಾಣಿಕೆ ಕುರಿತು ರಾಜ್ ಠಾಕ್ರೆ ಯಾವುದೇ ವಿವರ ಹಂಚಿಕೊಳ್ಳಲಿಲ್ಲ. ಮುಂಬೈನ ಮೇಯರ್ ಮರಾಠಿ ಮತ್ತು ನಮ್ಮವರೇ ಆಗಿರುತ್ತಾರೆ" ಎಂದು ರಾಜ್ ಠಾಕ್ರೆ ಹೇಳಿದರು.
ಜನವರಿ 15 ರಂದು ಮುಂಬೈ ಜೊತೆಗೆ ನಡೆಯಲಿರುವ ನಾಸಿಕ್ ಮುನ್ಸಿಪಲ್ ಕಾರ್ಪೊರೇಶನ್ ಮತ್ತಿತರ ರಾಜ್ಯದ 27 ಮಹಾನಗರ ಪಾಲಿಕೆ ಚುನಾವಣೆಗೆ ಪಕ್ಷದ ಸೀಟು ಹೊಂದಾಣಿಕೆ ಅಂತಿಮಗೊಂಡಿದೆ. ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಉಭಯ ಪಕ್ಷಗಳ ನಡುವೆ ಮೈತ್ರಿಗೆ ಮಾತುಕತೆ ನಡೆಯುತ್ತಿದೆ. ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆ ಸಹಿಸದವರು ನಮ್ಮೊಂದಿಗೆ ಬರಬಹುದು ಎಂದು ಉದ್ಧವ್ ಹೇಳಿದರು.