ಬಜರಂಗದಳದ ಪ್ರತಿಭಟನೆ 
ದೇಶ

'ಹಿಂದೂ ಭಾವನೆ' ಗಳಿಗೆ ಧಕ್ಕೆ: ಚರ್ಚ್‌ ಹೊರಗೆ ಬಜರಂಗದಳ ಪ್ರತಿಭಟನೆ, ಹನುಮಾನ್ ಚಾಲೀಸಾ ಪಠಣ! Video

ಚರ್ಚ್‌ನ ಮುಖ್ಯ ದ್ವಾರದ ಬಳಿ ಕುಳಿತ ಪ್ರತಿಭಟನಾಕಾರರು ಜೈ ಶ್ರೀ ರಾಮ್' ಮತ್ತು 'ಹರ್ ಹರ್ ಮಹಾದೇವ್' ಎಂದು ಘೋಷಣೆಗಳನ್ನು ಕೂಗಿದರು.

ಬರೇಲಿ: ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಹಿಂದೂ ಧರ್ಮ ಮತ್ತು ಸಮಾಜವನ್ನು ಆಕ್ಷೇಪಾರ್ಹವಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಬಜರಂಗದಳದ ಸದಸ್ಯರು ರಾಯ್ ಬರೇಲಿಯ ಸೇಂಟ್ ಅಲ್ಫೋನ್ಸ್ ಕ್ಯಾಥೆಡ್ರಲ್ ಚರ್ಚ್‌ನ ಹೊರಗೆ ಪ್ರತಿಭಟನೆ ನಡೆಸಿ ‘ಹನುಮಾನ್ ಚಾಲೀಸಾ’ ಪಠಿಸಿದರು.

ಚರ್ಚ್‌ನ ಮುಖ್ಯ ದ್ವಾರದ ಬಳಿ ಕುಳಿತ ಪ್ರತಿಭಟನಾಕಾರರು ಜೈ ಶ್ರೀ ರಾಮ್' ಮತ್ತು 'ಹರ್ ಹರ್ ಮಹಾದೇವ್' ಎಂದು ಘೋಷಣೆಗಳನ್ನು ಕೂಗಿದರು. ಕ್ರಿಸ್ಮಸ್ ಹಬ್ಬವು ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಅವರು ಆರೋಪಿಸಿದರು.

ಅಲ್ಲದೇ, ಪ್ರತಿಭಟನೆಯ ಸಮಯದಲ್ಲಿ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ ಬಗ್ಗೆ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ಧಾವಿಸಿದರು.

ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಬಜರಂಗದಳ ಕಾರ್ಯಕರ್ತರು ನಗರ ಸರ್ಕಲ್ ಇನ್ಸ್ ಪೆಕ್ಟರ್ ಅಶುತೋಷ್ ಶಿವಂ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿಕೆಶಿ-ಖರ್ಗೆ ಭೇಟಿ: ಮತ್ತೆ ಚಾಲ್ತಿಗೆ ಬಂದ ಸಿಎಂ ಬದಲಾವಣೆ ಊಹಾಪೋಹ, ಸಿಡಬ್ಲ್ಯುಸಿ ಸಭೆ ಕುರಿತು ಮಹತ್ವದ ಮಾತು! Video

ಸಿಎಂ ಬದಲಾವಣೆ ವದಂತಿ ನಡುವೆ ಡಿಕೆ ಸುರೇಶ್ 'ಮಾರ್ಮಿಕ ಪೋಸ್ಟ್' ವೈರಲ್!

'ಬಾಂಗ್ಲಾದೇಶ ಮುಸ್ಲಿಮರು, ಕ್ರಿಶ್ಚಿಯನ್ನರು, ಬೌದ್ಧರು, ಹಿಂದೂಗಳಿಗೆ ಸೇರಿದ್ದು': ಸ್ವದೇಶಕ್ಕೆ ಹಿಂದಿರುಗಿದ Tarique Rahman ಒಗ್ಗಟ್ಟಿನ ಕರೆ

'ರಾಷ್ಟ್ರೀಯ ಪ್ರೇರಣಾ ಸ್ಥಳ' ಲೋಕಾರ್ಪಣೆ: ಭಾರತದಲ್ಲಿ ಟೆಲಿಕಾಂ ಕ್ರಾಂತಿಯ ವೇಗ ಹೆಚ್ಚಿಸಿದ ಶ್ರೇಯಸ್ಸು ಅಟಲ್ ಜಿಗೆ ಸಲ್ಲುತ್ತದೆ- ಪ್ರಧಾನಿ ಮೋದಿ

ಚಿತ್ರದುರ್ಗ: ಖಾಸಗಿ ಬಸ್‌ಗೆ ಕಂಟೇನರ್​​ ಲಾರಿ ಡಿಕ್ಕಿ, ಬೆಂಕಿ​​​​; 9 ಮಂದಿ ಸಜೀವ ದಹನ, ಹಲವರಿಗೆ ಗಂಭೀರ ಗಾಯ; ತನಿಖೆಗೆ ಆದೇಶ; Video

SCROLL FOR NEXT