ನವದೆಹಲಿ: ವಿಚ್ಚೇದನದ ಬಳಿಕವೂ ಜೀವನಾಂಶ ಸಿಗಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ಕೋರ್ಟ್ ಹಾಲ್ ನಲ್ಲೇ ತಮ್ಮ ವಿಚ್ಛೇದಿತ ಪತಿಗೆ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ವಿಚ್ಛೇದನ ವಿಚಾರಣೆಯ ನಂತರ ಕುಟುಂಬ ನ್ಯಾಯಾಲಯದ ಹೊರಗೆ ಮಹಿಳೆಯೊಬ್ಬರು ತನ್ನ ಮಾಜಿ ಪತಿಯ ಮೇಲೆ ಹಲ್ಲೆ ಮಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಪ್ರಕರಣದ ಅಂತಿಮ ತೀರ್ಪಿನ ಮೊದಲು ಆಕೆಯ ಪತಿ ತನ್ನ ಎಲ್ಲಾ ಆಸ್ತಿಗಳನ್ನು ಆಕೆಯ ತಾಯಿಯ ಹೆಸರಿಗೆ ವರ್ಗಾಯಿಸಿದ್ದರಿಂದ ಮಹಿಳೆಯ ಜೀವನಾಂಶದ ವಿನಂತಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಇದರಿಂದ ಕೋಪಗೊಂಡ ಮಹಿಳೆ, ನ್ಯಾಯಾಲಯದ ಆವರಣದಲ್ಲಿ ಎಲ್ಲರ ಮುಂದೆ ತನ್ನ ಪತಿಯನ್ನು ತಳ್ಳಿ ಕಪಾಳಮೋಕ್ಷ ಮಾಡುವ ಮೂಲಕ ತನ್ನ ಕೋಪವನ್ನು ವ್ಯಕ್ತಪಡಿಸಿದ್ದಾಳೆ.
The Forgotten ‘Man’ ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಜೀವನಾಂಶ ಸಿಗದ ಹತಾಶೆಯಲ್ಲಿ ಮಹಿಳೆ ತಮ್ಮ ಪತಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ಅಡಿಬರಹ ಬರೆಯಲಾಗಿದೆ.
ಮೂಲಗಳ ಪ್ರಕಾರ ಪತಿ ತನ್ನ ವಿಚ್ಛೇದನದ ತೀರ್ಪು ಹೊರ ಬೀಳುವ ಮುನ್ನವೇ ತನ್ನ ಹೆಸರಿನಲ್ಲಿದ್ದ ಆಸ್ತಿಯನ್ನೆಲ್ಲಾ ತನ್ನ ತಾಯಿ ಹೆಸರಿಗೆ ವರ್ಗಾಯಿಸಿದ್ದಾನೆ ಎಂದು ಹೇಳಲಾಗಿದ್ದು, ಇದೇ ಕಾರಣಕ್ಕೆ ಆತನ ಪತ್ನಿಗೆ ನ್ಯಾಯಾಲಯದ ವತಿಯಿಂದ ಜೀವನಾಂಶ ಸಿಕಿಲ್ಲ ಎಂದು ಹೇಳಲಾಗಿದೆ.
ಹೀಗಾಗಿ ಇದರಿಂದ ಆಕ್ರೋಶಗೊಂಡ ಪತ್ನಿ ನ್ಯಾಯಾಲಯದ ಆವರಣದಲ್ಲೇ ತನ್ನ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಅಲ್ಲಿಯೇ ಇದ್ದ ಸ್ಥಳೀಯರೊಬ್ಬರು ಇದನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ತರಹೇವಾರಿ ಕಮೆಂಟ್ ಗಳು
ಇನ್ನು ಈ ವಿಡಿಯೋ ವ್ಯಾಪಕ ವೈರಲ್ ಆಗಿರುವಂತೆಯೇ ಈ ವಿಡಿಯೋಗೆ ವ್ಯಾಪಕ ಕಮೆಂಟ್ ಗಳು ಕೂಡ ಹರಿದುಬರುತ್ತಿವೆ. ಒಬ್ಬ ಬಳಕೆದಾರರು, 'ನ್ಯಾಯಾಲಯವು ವೀಡಿಯೊವನ್ನು ಗಮನದಲ್ಲಿಟ್ಟುಕೊಂಡು ಅಪರಾಧಿಯನ್ನು ಶಿಕ್ಷಿಸಬೇಕು' ಎಂದು ಕಾಮೆಂಟ್ ಮಾಡಿದ್ದಾರೆ.
“ಬುದ್ಧಿವಂತ ನಿರ್ಧಾರ. ಭಾರತದ ಪ್ರತಿಯೊಬ್ಬ ಪುರುಷನು ಅವನಿಂದ ಕಲಿಯಬೇಕು" ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ. ಇನ್ನೊಬ್ಬರು, 'ನಿಮ್ಮ ಪ್ಲಾನ್ ಎ ಹಿಮ್ಮುಖವಾಗಿದ್ದಾಗ ಮತ್ತು ಪ್ಲಾನ್ ಬಿ ಇಲ್ಲದಿದ್ದಾಗ' ಹೀಗೆ ಆಗೋದು' ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು 'ಇದಕ್ಕಾಗಿ ಅವಳನ್ನು ಜೈಲಿಗೆ ಹಾಕಬೇಕು, ಸಮಾಜವಾಗಿ ನಾವು ಇದನ್ನು ಸಾಮಾನ್ಯಗೊಳಿಸಬಾರದು! ಕಾನೂನುಗಳಲ್ಲಿ ಸಮಾನತೆ ಎಲ್ಲಿದೆ," ಎಂದು ಪ್ರಶ್ನಿಸಿದ್ದಾರೆ.