ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಬಿಐ ಪಬ್ಲಿಕ್ ಪ್ರಾಸಿಕ್ಯೂಟರ್ ಶೇಖ್ ಆದಿಲ್ ನಬಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ವೇಗವಾಗಿ ಬಂದ ವಾಹನವು ಸಿಬಿಐ ಪ್ರಾಸಿಕ್ಯೂಟರ್ ಅವರ ಕಾರಿಗೆ ಡಿಕ್ಕಿ ಹೊಡೆದಿತ್ತು. ರಾಂಬನ್‌ನ ಬನಿಹಾಲ್ ರೈಲು ನಿಲ್ದಾಣದ ಬಳಿ ನಡೆದ ಅಪಘಾತದಲ್ಲಿ ಶೇಖ್ ಆದಿಲ್ ನಬಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಶೇಖ್ ಆದಿಲ್ ಚಂಡೀಗಢದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ)ದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು. ಅಪಘಾತದಲ್ಲಿ ಭಾಗಿಯಾದ ಆರೋಪಿಯನ್ನು ರಾಂಬನ್ ಪೊಲೀಸರು ಬಂಧಿಸಿದ್ದಾರೆ.
35 ವರ್ಷದ ಶೇಖ್ ಆದಿಲ್ ಬನಿಹಾಲ್‌ನಿಂದ ಕಾಶ್ಮೀರದ ಕಡೆಗೆ ಆಲ್ಟೋ ಕಾರನ್ನು ಚಲಾಯಿಸುತ್ತಿದ್ದಾಗ ರೈಲ್ವೆ ಕ್ರಾಸಿಂಗ್ ಬಳಿ ಅವರ ಕಾರಿಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆದಿತ್ತು. ಶೇಖ್ ಆದಿಲ್ ಇತ್ತೀಚೆಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಚಂಡೀಗಢದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ)ದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕೆಲಸ ಪ್ರಾರಂಭಿಸಿದ್ದರು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೇಖ್ ಆದಿಲ್ ಅವರನ್ನು ತಕ್ಷಣವೇ ಬನಿಹಾಲ್‌ನ ಉಪ-ಜಿಲ್ಲಾ ಆಸ್ಪತ್ರೆಗೆ (SDH) ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಅವರನ್ನು ಅನಂತನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜು (GMC) ಗೆ ಕರೆದೊಯ್ಯಲಾಯಿತು. ನಂತರ ಉತ್ತಮ ಚಿಕಿತ್ಸೆಗಾಗಿ SKIMS ಸೌರಾಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆದಿಲ್ ಮೃತಪಟ್ಟಿದ್ದಾರೆ.