ಸಿಡಬ್ಲ್ಯುಸಿ ಸಭೆಗೆ ಕಾಂಗ್ರೆಸ್ ನಾಯಕರ ಆಗಮನ  
ದೇಶ

CWC meet: 2026 ರ ಚುನಾವಣೆ ಕಾರ್ಯತಂತ್ರ, G-RAM G ಕಾನೂನು ಚರ್ಚೆ, ಇಂದಿನ ಸಭೆಯ ಅಜೆಂಡಾ...

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005 ನ್ನು ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ (VB-G RAM G)

ಮುಂದಿನ ವರ್ಷ ನಡೆಯಲಿರುವ ಬಹು-ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಮುನ್ನ ರಾಜಕೀಯ ಪರಿಸ್ಥಿತಿಯನ್ನು ಚರ್ಚಿಸಲು ಮತ್ತು ಯುಪಿಎ ಸರ್ಕಾರದ ಆಡಳಿತದಲ್ಲಿ ಜಾರಿಗೆ ಬಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ MGNREGA ಯನ್ನು ಇಂದಿನ ಕೇಂದ್ರ ಸರ್ಕಾರ ಹೆಸರು ರದ್ದುಗೊಳಿಸಿ ಕೆಲವು ಮಾರ್ಪಾಡುಗಳನ್ನು ಮಾಡಿರುವ ಬಗ್ಗೆ ಚರ್ಚಿಸಲು ಇಂದು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ನಿರ್ಣಾಯಕ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005 ನ್ನು ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ (VB-G RAM G) ಎಂದು ವಿಕ ಭಾರತ ಗ್ಯಾರಂಟಿ ಯೋಜನೆಗೆ ಬದಲಾಯಿಸಿರುವ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಇಂದಿನ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆದಿದೆ.

ಇಂದಿನ ಸಿಡಬ್ಲ್ಯುಸಿ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿಗಳ (PCC) ಅಧ್ಯಕ್ಷರು ಸಹ ಉಪಸ್ಥಿತರಿದ್ದರು.

ಮುಂದಿನ ವರ್ಷ ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಈ ಸಭೆ ನಡೆಯುತ್ತಿದ್ದು, ಪಕ್ಷದ ಚುನಾವಣಾ ಕಾರ್ಯತಂತ್ರದ ಕುರಿತು ನಾಯಕರು ಚರ್ಚಿಸುತ್ತಿದ್ದಾರೆ.

ಹೊಸ ಮಸೂದೆಯಲ್ಲಿ ಏನಿದೆ?

ಎಂಜಿಎನ್‌ಆರ್‌ಇಜಿಎ ರದ್ದುಗೊಳಿಸಿದ ನಂತರ ಸರ್ಕಾರವನ್ನು ಎದುರಿಸಲು ಕಾಂಗ್ರೆಸ್ ತನ್ನ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಲು ಸಜ್ಜಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ VB-G RAM G ಮಸೂದೆಯನ್ನು ಅಂಗೀಕರಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಮಸೂದೆಗೆ ಅಂಕಿತ ಹಾಕಿದ್ದಾರೆ.

ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವುದು ಅವರ ಪರಂಪರೆಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಹೊಸ ಕಾನೂನನ್ನು ತೀವ್ರವಾಗಿ ಆಕ್ಷೇಪಿಸಿವೆ.

ಹೊಸ ಕಾನೂನಿನಡಿಯಲ್ಲಿ, ಗ್ರಾಮೀಣ ಕುಟುಂಬಗಳಿಗೆ ಕೌಶಲ್ಯರಹಿತ ದೈಹಿಕ ಕೆಲಸವನ್ನು ಕೈಗೊಳ್ಳಲು ಇಚ್ಛಿಸುವ ವಯಸ್ಕರಿಗೆ ಹಣಕಾಸು ವರ್ಷದಲ್ಲಿ 125 ದಿನಗಳ ಕೂಲಿ ಉದ್ಯೋಗವನ್ನು ಖಾತರಿಪಡಿಸಲಾಗುತ್ತದೆ. ಹಿಂದಿನ ಕೇಂದ್ರ ಯೋಜನೆಗಿಂತ ಭಿನ್ನವಾಗಿ, ಈ ಕಾರ್ಯಕ್ರಮವನ್ನು ಈಗ ಕೇಂದ್ರ ಮತ್ತು ರಾಜ್ಯಗಳು ಜಂಟಿಯಾಗಿ 60:40 ಅನುಪಾತದಲ್ಲಿ ಹಣಕಾಸು ಒದಗಿಸುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಹಿರಂಗವಾಗಿ BJP- RSS ಹೊಗಳಿ, 'ವಿವಾದದ ಕಿಡಿ' ಹೊತ್ತಿಸಿದ ದಿಗ್ವಿಜಯ್ ಸಿಂಗ್!

Kogilu layout Demolition: ಅಕ್ರಮ ತೆರವು ಮಾಡಿಲ್ಲ, ವಲಸಿಗರಾದ್ರೂ ಅವರಿಗೂ ಬೇರೆಡೆ ಜಾಗ ಕೋಡ್ತೀವಿ: ಸಿದ್ದರಾಮಯ್ಯ

ಐಪಿಎಲ್ ಆರಂಭಕ್ಕೂ ಮುನ್ನವೇ RCBಗೆ ಆಘಾತ, ತಂಡದ ಸ್ಟಾರ್ ಆಲ್ರೌಂಡರ್ ಗಾಯ, ಟೂರ್ನಿ ಆಡೋದೇ ಡೌಟ್!

ಅನಧಿಕೃತ ಮನೆ ಕಳೆದುಕೊಂಡ ಮುಸ್ಲಿಂ ಜನರಿಗಾಗಿ ಮಿಡಿದ ಕೇರಳ ಸರ್ಕಾರ, ಬೆಂಗಳೂರಿನ ಕೋಗಿಲು ಲೇಔಟ್‌ಗೆ ಭೇಟಿ ಕೊಟ್ಟ MP ಎಎ ರಹೀಮ್!

ಆಪರೇಷನ್ ಆಘಾತ್ 3.0: ಹೊಸ ವರ್ಷಾಚರಣೆಗೂ ಮುನ್ನ ಪೊಲೀಸ್ ಕಾರ್ಯಾಚರಣೆ, 24 ಗಂಟೆಗಳಲ್ಲಿ 660 ಮಂದಿ ಬಂಧನ!

SCROLL FOR NEXT