ಸಿಂಧೂರ ಡೆಲಿವರಿ ಮಾಡಿದ ಬ್ಲಿಂಕಿಟ್ 
ದೇಶ

ನಿಂತು ಹೋಗಬೇಕಿದ್ದ ಮದುವೆ, ಸರಿಯಾದ ಸಮಯಕ್ಕೆ ನೆರವು ನೀಡಿದ Blinkit

ಬ್ಲಿಂಕಿಟ್ ಡೆಲಿವರಿ ಸೇವಾ ಸಂಸ್ಥೆ ನಿಲ್ಲಬೇಕಿದ್ದ ಮದುವೆ(Marriage)ಯನ್ನು ಸರಾಗವಾಗಿ ನಡೆಯುವಂತೆ ಮಾಡಿದೆ. ಅದೂ ಕೂಡ ಸಮಯಕ್ಕೆ ಸರಿಯಾಗಿ ಸೇವೆ ನೀಡುವ ಮೂಲಕ.

ನವದೆಹಲಿ: ಮನೆ ಮಂದಿಯ ಗೊಂದಲದಿಂದಾಗಿ ಬಹುತೇಕ ನಿಂತೇ ಹೋಗಿದ್ದ ಮದುವೆಯನ್ನು Blinkit ಡೆಲಿವರಿ ಸೇವೆ ಸರಿಯಾದ ಸಮಯಕ್ಕೆ ನಡೆಯುವಂತೆ ಮಾಡಿರುವ ಅಪರೂಪದ ಘಟನೆ ದೆಹಲಿಯಲ್ಲಿ ವರದಿಯಾಗಿದೆ.

ಹೌದು.. ಬ್ಲಿಂಕಿಟ್ ಡೆಲಿವರಿ ಸೇವಾ ಸಂಸ್ಥೆ ನಿಲ್ಲಬೇಕಿದ್ದ ಮದುವೆ(Marriage)ಯನ್ನು ಸರಾಗವಾಗಿ ನಡೆಯುವಂತೆ ಮಾಡಿದೆ. ಅದೂ ಕೂಡ ಸಮಯಕ್ಕೆ ಸರಿಯಾಗಿ ಸೇವೆ ನೀಡುವ ಮೂಲಕ.

ಅಚ್ಚರಿಯಾದರೂ ಇದು ಸತ್ಯ.. ದೆಹಲಿಯಲ್ಲಿ ಮದುವೆ ಸಮಾರಂಭವೊಂದು ನಡೆಯುತ್ತಿತ್ತು, ಎಲ್ಲಾ ವಿಧಿ ವಿಧಾನಗಳು ನಡೆಯುತ್ತಿದ್ದವು. ಇನ್ನೇನು ವರ ವಧುವಿಗೆ ಸಿಂಧೂರ ಹಚ್ಚಬೇಕು ಎನ್ನುವಷ್ಟರಲ್ಲಿ ತಾವು ಸಿಂಧೂರವನ್ನು ತಂದೇ ಇಲ್ಲ ಎಂಬುದು ಕುಟುಂಬಕ್ಕೆ ನೆನಪಾಗಿದೆ.

ಸಪ್ತಪದಿ ಮುಗಿದಿತ್ತು, ಪತ್ನಿ ಹಣೆಗೆ ಸಿಂಧೂರವಿಡಬೇಕು ಎನ್ನುವಷ್ಟರಲ್ಲಿ ಸಿಂಧೂರವಿರಲಿಲ್ಲ. ಹೀಗಾಗಿ ಉಭಯ ಕುಟುಂಬಗಳು ಗೊಂದಲಕ್ಕೀಡಾದವು.

ನೆರವಿಗೆ ಬಂದ ಬ್ಲಿಂಕಿಟ್

ಸಿಂಧೂರವಿಲ್ಲದ ಕಾರಣ ಮದುವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಅಲ್ಲಿಂದ ಹೊರಗೆ ಹೋಗಿ ಯಾರದರೂ ತರಬೇಕು ಎಂದರೆ ಅಷ್ಟರಲ್ಲಿ ಮಹೂರ್ತ ಮುಗಿದು ಹೋಗುತ್ತದೆ. ಹೀಗಾಗಿ ಕುಟುಂಬಸ್ಥರು ಹೊರಗಿನ ನೆರವಿಗೆ ಎದುರು ನೋಡುತ್ತಿದ್ದರು. ಇದೇ ಸಂರ್ಭದಲ್ಲಿ ನೆನಪಾಗಿದ್ದೇ ಬ್ಲಿಂಕಿಟ್..

ಗೊಂದಲಮಯ ಸ್ಥಿತಿಯಲ್ಲಿ ಭಯಭೀತರಾಗುವ ಅಥವಾ ಅಂಗಡಿಯನ್ನು ಹುಡುಕಲು ಕುಟುಂಬ ಸದಸ್ಯರನ್ನು ಕಳುಹಿಸುವ ಬದಲು, ಅವರು ಬ್ಲಿಂಕಿಟ್‌ನಲ್ಲಿ ತುರ್ತು ಆರ್ಡರ್ ಮಾಡಿದ್ದರು. ಅದರಂತೆ ಬ್ಲಿಂಕಿಟ್ ಸೇವಾ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಸಿಂಧೂರವನ್ನು ಮದುವೆ ಮನೆಗೆ ತಲುಪಿಸಿದ್ದಾರೆ.

ಈ ವೇಳೆ ಅಲ್ಲಿ ನೆರೆದಿದ್ದ ಅತಿಥಿಗಳು ಚಪ್ಪಾಳೆ ಮತ್ತು ಹರ್ಷೋದ್ಗಾರದ ನಡುವೆ ವರನು ಮದುವೆ ಆಚರಣೆಯನ್ನು ಮುಗಿಸುತ್ತಾರೆ. ಬ್ಲಿಂಕಿಟ್ ಡೆಲಿವರಿ ಬಾಯ್​ನನ್ನು ಸೈಲೆಂಟ್ ಸೂಪರ್ ಹೀರೋ ಎಂದು ಕರೆದಿದ್ದಾರೆ.

ಅನಧಿಕೃತ ಮನೆಗಳ ತೆರವು: ಕೋಗಿಲು ಲೇಔಟ್​​ಗೆ ಡಿ.ಕೆ ಶಿವಕುಮಾರ್ ಭೇಟಿ; ಡಿಸಿಎಂ ಹೇಳಿದ್ದೇನು? Video

ಬೆಂಗಳೂರು: ಕಿರುತೆರೆ ನಟಿ ನಂದಿನಿ ಆತ್ಮಹತ್ಯೆಗೆ ಶರಣು

ಲಂಕಾ ಹನಿಮೂನ್ ನಲ್ಲಿ 'ಹಳೇ ಲವರ್' ವಿಚಾರಕ್ಕೆ ಜಗಳ! ನವ ದಂಪತಿ ಸೂಸೈಡ್ ಗೆ ಕಾರಣನಾ? ಕಣ್ಣೀರಿನಲ್ಲಿ ಮುಳುಗಿದ ಕುಟುಂಬ!

'ಅವನನ್ನು ಗಲ್ಲಿಗೇರಿಸುವವರೆಗೂ ಹೋರಾಟ': ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ

ಭಾರತೀಯ ಸೇನೆಗೆ 79,000 ಕೋಟಿ ರೂ. ಮೌಲ್ಯದ 'ಆಧುನಿಕ ಶಸ್ತ್ರಾಸ್ತ್ರ' ಖರೀದಿಗೆ DAC ಅನುಮೋದನೆ!

SCROLL FOR NEXT