ಜೈಪುರ: ಈ ವರ್ಷಾಂತ್ಯದಲ್ಲಿ 2026ರ ಹೊಸ ವರ್ಷ ಆರಂಭದಲ್ಲಿ ಗಾಂಧಿ-ವಾದ್ರಾ ಕುಟುಂಬದ ಆಗಮನದಿಂದ ರಾಜಸ್ಥಾನದ ಸವಾಯಿ ಮಾಧೋಪುರ್‌ನಲ್ಲಿ ವರ್ಷದ ಕೊನೆಗೆ ಚಳಿಗಾಲದ ಶಾಂತತೆಯಲ್ಲಿ ಸ್ವಲ್ಪ ಮಟ್ಟಿಗೆ ಸದ್ದಾಗುತ್ತಿದೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕುಟುಂಬ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಖಾಸಗಿ ಭೇಟಿ ನೀಡಿದ್ದಾರೆ. ದೆಹಲಿಯ ರಾಜಕೀಯ ಗದ್ದಲದಿಂದ ದೂರವಾಗಿ ಅವರು ಜನವರಿ 2 ರವರೆಗೆ ಶೇರ್ ಬಾಗ್ ಹೋಟೆಲ್‌ನಲ್ಲಿ ಹೊಸ ವರ್ಷವನ್ನು ಸ್ವಾಗತಿಸಲಿದ್ದಾರೆ. ಈ ಭೇಟಿ ಸಂಪೂರ್ಣವಾಗಿ ಖಾಸಗಿಯಾಗಿದೆ. ಯಾವುದೇ ಸಭೆಗಳಿಲ್ಲ. ಯಾವುದೇ ರಾಜಕೀಯವಿಲ್ಲ. ಕೇವಲ ಕುಟುಂಬದ ಸಮಯ, ಗೌಪ್ಯತೆ ಮತ್ತು ಅರಣ್ಯದಲ್ಲಿ ಖಾಸಗಿಯಾಗಿ ಕಳೆಯುವ ಸಮಯವಾಗಿರುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸೋನಿಯಾ ಗಾಂಧಿ ಈ ಪ್ರವಾಸದಲ್ಲಿ ಕುಟುಂಬದವರ ಜೊತೆ ಸೇರುವ ನಿರೀಕ್ಷೆಯಿಲ್ಲ.
ಗಮನ ಸೆಳೆಯಲಿರುವ ಭೇಟಿ
ಆದರೆ ವಾದ್ರಾ-ಗಾಂಧಿ ಕುಟುಂಬದ ಈ ಭೇಟಿ ಸಾಕಷ್ಟು ಗಮನ ಸೆಳೆದಿದೆ. ಪ್ರಿಯಾಂಕಾ ಗಾಂಧಿಯವರ ಮಗ ರೈಹಾನ್ ವಾದ್ರಾ ಗೆಳತಿ ಅವಿವಾ ಬೇಗ್ ಮತ್ತು ಆಕೆಯ ಕುಟುಂಬಸ್ಥರು ಈ ಸಂದರ್ಭದಲ್ಲಿ ಜೊತೆಯಾಗಿರುತ್ತಾರೆ. ರೈಹಾನ್ ಮತ್ತು ಅವಿವಾ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿಯೂ ಇದೆ. ಎರಡೂ ಕುಟುಂಬಗಳಿಂದ ಇದುವರೆಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ರೈಹಾನ್‌ಗೆ, ರಣಥಂಬೋರ್ ಭೇಟಿ ತೀರಾ ವೈಯಕ್ತಿಕ. ವನ್ಯಜೀವಿ ಆಸಕ್ತಿ ಇದೆ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವನ್ಯಜೀವಿಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ರಣಥಂಬೋರ್‌ನ ಹುಲಿಗಳನ್ನು ಪ್ರದರ್ಶಿಸುವ ಪ್ರದರ್ಶನವನ್ನು ಈ ಹಿಂದೆ ಮಾಡಿದ್ದರು. ಅಂತಹ ಕ್ಷಣಕ್ಕೆ ಸ್ಥಳವನ್ನು ಆಯ್ಕೆಮಾಡುವಲ್ಲಿ ಭಾವನಾತ್ಮಕ ಬಂಧವು ಒಂದು ಪಾತ್ರವನ್ನು ವಹಿಸಿರಬಹುದು ಎಂದು ಮೂಲಗಳು ಹೇಳುತ್ತವೆ.
ರೈಹಾನ್ ಮತ್ತು ಅವಿವಾ ಬಾಲ್ಯದಿಂದಲೂ ಪರಸ್ಪರ ಪರಿಚಿತರು. ದೆಹಲಿಯಲ್ಲಿ ನೆಲೆಸಿರುವ ಅವಿವಾ ವೃತ್ತಿಪರ ಛಾಯಾಗ್ರಾಹಕಿ.
ರಾಜಸ್ಥಾನವು ಯಾವಾಗಲೂ ಗಾಂಧಿ ಕುಟುಂಬಕ್ಕೆ ಆಕರ್ಷಣೀಯ ಸ್ಥಳ. ಕೆಲವೊಮ್ಮೆ ಖುಷಿಯ ಸಂತೋಷದ ವಿನೋದದ ವಿಚಾರಕ್ಕಾಗಿ ಆದರೆ ಇನ್ನು ಕೆಲವೊಮ್ಮೆ ವಿವಾದಕ್ಕಾಗಿ. ಸಾರಿಸ್ಕಾ ಹುಲಿ ಮೀಸಲು ಪ್ರದೇಶದಲ್ಲಿ ಸಚಿವ ಸಂಪುಟ ಸಭೆಯನ್ನು ಆಯೋಜಿಸಿದ್ದಕ್ಕಾಗಿ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಟೀಕೆಗಳನ್ನು ಎದುರಿಸಿದ್ದರು.