ಮಮತಾ ಕುಲಕರ್ಣಿ 
ದೇಶ

ಕಿನ್ನರ್ ಅಖಾಡ ಮುಖ್ಯಸ್ಥರಾಗಿ ಮಮತಾ ಕುಲಕರ್ಣಿ ಪಟ್ಟಾಭಿಷೇಕ! ಭುಗಿಲೆದ್ದ ವಿವಾದ

ಸಾಮಾಜಿಕ ಮಾಧ್ಯಮದಲ್ಲಿ ಇಂದು ನಿನ್ನೆಯ ಪತ್ರವೊಂದನ್ನು ಫೋಸ್ಟ್ ಮಾಡಿರುವ ಅಜಯ್ ದಾಸ್, ಕಿನ್ನರ ಅಖಾಡದ ಮಹಾಮಂಡಳೇಶ್ವರ ಆಗಿ ಮಾಡಿರುವುದರಿಂದ ತ್ರಿಪಾಠಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಲಖನೌ: ಕಿನ್ನರ ಅಖಾಡದ ಸ್ಥಾಪಕ ಸದಸ್ಯ ಎಂದು ಹೇಳಿಕೊಳ್ಳುವ ರಿಷಿ ಅಜಯ್ ದಾಸ್ ಅವರು ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಡಾ. ಲಕ್ಷ್ಮೀ ನಾರಾಯಣ ತ್ರಿಪಾಠಿ ಅವರನ್ನು ಉಚ್ಚಾಟಿಸಿದ್ದಾರೆ.

ಬಾಲಿವುಡ್ ಮಾಜಿ ನಟಿ ಮಮತಾ ಕುಲಕರ್ಣಿ ಅವರನ್ನು ಕಿನ್ನರ್ ಅಖಾಡದ ಮಹಾಮಂಡಲೇಶ್ವರ ಎಂದು ಪಟ್ಟಾಭಿಷೇಕ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಇದಾದ ಬೆನ್ನಲ್ಲೇ ವಾಗ್ದಾಳಿ ನಡೆಸಿರುವ ತ್ರಿಪಾಠಿ, ಅಜಯ್ ದಾಸ್ ಅಖಾಡದ ಸದಸ್ಯತ್ವ ಕೂಡಾ ಪಡೆದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಇಂದು ನಿನ್ನೆಯ ಪತ್ರವೊಂದನ್ನು ಫೋಸ್ಟ್ ಮಾಡಿರುವ ಅಜಯ್ ದಾಸ್, ನಟಿಯನ್ನು ಕಿನ್ನರ್ ಅಖಾಡದ ಮಹಾಮಂಡಳೇಶ್ವರ ಆಗಿ ಮಾಡಿರುವುದರಿಂದ ತ್ರಿಪಾಠಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕಿನ್ನರ ಅಖಾಡದ ಮಹತ್ವವನ್ನು ಎತ್ತಿಹಿಡಿಯುವ ಯಾವುದೇ ಕೆಲಸವನ್ನು ತ್ರಿಪಾಠಿ ಮಾಡಲಿಲ್ಲ, ಬದಲಿಗೆ ದೇಶದ್ರೋಹ ಆರೋಪದ ಮೇರೆಗೆ ದೇಶ ತೊರೆದಿದ್ದ ಬಾಲಿವುಡ್ ನಟಿಯನ್ನು ಮಹಾಮಂಡಲೇಶ್ವರಿಯನ್ನಾಗಿ ಮಾಡಲಾಗಿದೆ ಎಂದು ತ್ರಿಪಾಠಿ ವಿರುದ್ಧ ರಿಷಿ ಅಜಯ್ ದಾಸ್ ವಾಗ್ದಾಳಿ ನಡೆಸಿದ್ದಾರೆ.

ಈ ಹೇಳಿಕೆ ಕುರಿತು ಪ್ರತ್ರಿಕ್ರಿಯಿಸಿರುವ ತ್ರಿಪಾಠಿ, ಅಜಯ್ ದಾಸ್ ಅಖಾಡದ ಸದಸ್ಯರೂ ಕೂಡಾ ಆಗಿಲ್ಲ. ಅಖಾಡ ನನ್ನಿಂದ ನೋಂದಣಿಯಾಗಿದೆ. ಅವರು ನೀಡಿರುವ ಪತ್ರ ಕಸಕ್ಕೆ ಸಮಾನವಾಗಿದೆ. ಕಿನ್ನರ ಅಖಾಡದ ಪರವಾಗಿ ಪತ್ರ ನೀಡಲು ದಾಸ್ ಅವರಿಗೆ ಯಾವುದೇ ಹಕ್ಕಿಲ್ಲ ಎಂದು ತ್ರಿಪಾಠಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT