ಸಾಂದರ್ಭಿಕ ಚಿತ್ರ 
ದೇಶ

ಅಮಾಯಕ ಗಂಡನ ಕಿಡ್ನಿ ಮಾರಿ, ಫೇಸ್`ಬುಕ್ Lover ಜೊತೆ ಮಹಿಳೆ ಪರಾರಿ! ನ್ಯಾಯ ಕೇಳಿದ್ದಕ್ಕೆ ಥಳಿಸಿದ ಕ್ರೂರಿ!

ಸಂತ್ರಸ್ತ ವ್ಯಕ್ತಿ ವೃತ್ತಿಯಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ ಈತನಿಗೆ ಓರ್ವ ಮಗಳು ಕೂಡ ಇದ್ದಳು.

ಕೋಲ್ಕತಾ: ಮಗಳ ವಿದ್ಯಾಭ್ಯಾಸಕ್ಕೆ ಹಣ ಸಾಕಾಗುತ್ತಿಲ್ಲ... ನಿನ್ನ ಕಿಡ್ನಿ ಮಾರು ಎಂದು ಒತ್ತಾಯಿಸುತ್ತಿದ್ದ ಮಹಿಳೆಯೊಬ್ಬಳು ಕಿಡ್ನಿ ಮಾರಿದ ಹಣ ಕೈಗೆ ಬರುತ್ತಲೇ ತನ್ನ ಫೇಸ್ ಬುಕ್ ಲವರ್ ಜೊತೆ ರಾತ್ರೋರಾತ್ರಿ ಪರಾರಿಯಾಗಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ.

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಚಾನ್‌ಕ್ರಿಲ್‌ನಲ್ಲಿ ಈ ಘಟನೆ ನಡೆದಿದ್ದು, ಬರೋಬ್ಬರಿ 10 ಲಕ್ಷಕ್ಕೆ ಕಿಡ್ನಿ ಮಾರಿದ ಪತಿ ಈಗ ತನ್ನ ಪತ್ನಿಯ ಕುಕೃತ್ಯದ ವಿರುದ್ಧ ಮನನೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಮೂಲಗಳ ಪ್ರಕಾರ ಸಂತ್ರಸ್ತ ವ್ಯಕ್ತಿ ವೃತ್ತಿಯಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ ಈತನಿಗೆ ಓರ್ವ ಮಗಳು ಕೂಡ ಇದ್ದಳು. ಮಗಳ ವಿದ್ಯಾಭ್ಯಾಸದ ವಿಚಾರ ಮುಂದಿಟ್ಟುಕೊಂಡು ಪತಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಮಹಿಳೆ, ನಿನ್ನ ಆದಾಯ ಸಾಲುತ್ತಿಲ್ಲ. ಮಗಳ ವಿದ್ಯಾಭ್ಯಾಸಕ್ಕೆ ಮತ್ತಷ್ಟು ಹಣ ಬೇಕು ಎಂದು ಒತ್ತಡ ಹೇರುತ್ತಿದ್ದಳು.

ಈಗ್ಗೇ ಕಿಡ್ನಿ ಮಾರಿದರೆ ಹಣ ಬರುತ್ತದೆ ಎಂಬ ವಿಚಾರ ಕೇಳಿ ತನ್ನ ಗಂಡನಿಗೆ ಕಿಡ್ನಿ ಮಾರುವಂತೆ ನಿತ್ಯ ಒತ್ತಡ ಹೇರುತ್ತಿದ್ದಳು. ಇವಳ ಹಿಂಸೆ ತಾಳಲಾರದೆ ಮತ್ತು ಮಗಳ ಭವಿಷ್ಯದ ನಿಟ್ಟಿನಲ್ಲಿ ಯೋಚಿಸಿ ಒಂದು ದಿನ ಗಂಡ ಕಿಡ್ನಿ ಮಾರುತ್ತೇನೆ ಎಂದು ಒಪ್ಪಿಕೊಂಡಿದ್ದ. ಬಳಿಕ ಒಂದು ತಿಂಗಳ ನಂತರ, ಒಂದು ಮೂತ್ರಪಿಂಡವನ್ನು 10 ಲಕ್ಷ ರೂ. ಗೆ ಮಾರಾಟ ಮಾಡಲಾಗಿತ್ತು. ಅದರಂತೆ ಸಂತ್ರಸ್ತ ವ್ಯಕ್ತಿಗೆ 10 ಲಕ್ಷ ರೂ ಹಣ ಕೂಡ ಸಂದಾಯವಾಗಿತ್ತು.

ಆದರೆ ಹಣ ಕೈ ಸೇರುತ್ತಿದ್ದಂತೆಯೇ ನಾಟಕ ಶುರು ಮಾಡಿಕೊಂಡಿದ್ದ ಕಿಲಾಡಿ ಹೆಂಡತಿ ಈ ಹಣವನ್ನು ಬೆಳಿಗ್ಗೆ ಬ್ಯಾಂಕಿಗೆ ಜಮಾ ಮಾಡುತ್ತೇನೆ ಎಂದು ಹೇಳಿ ತನ್ನ ಬಳಿ ಇರಿಸಿಕೊಂಡಿದ್ದಾಳೆ. ಬಳಿಕ ನಡು ರಾತ್ರಿ ಹಣದೊಂದಿಗೆ ಮನೆಬಿಟ್ಟು ತನ್ನ ಫೇಸ್ ಬುಕ್ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ.

ಕೊನೆಗೂ ಪತ್ನಿ ಪತ್ತೆ ಮಾಡಿದ ಪತಿಗೆ ಕಾದಿತ್ತು ಆಘಾತ

ಪತ್ನಿ ನಾಪತ್ತೆಯಾಗಿ ಹಲವು ದಿನಗಳೇ ಕಳೆದರೂ ಆಕೆಯ ಬಗ್ಗೆ ಯಾವುದೇ ಮಾಹಿತಿ ದೊರೆತಿರಲಿಲ್ಲ. ಆದರೆ ಇದೇ ಶುಕ್ರವಾರ, ತನ್ನ ಪತ್ನಿ ರವಿದಾಸ್ ಎಂಬ ವ್ಯಕ್ತಿಯೊಂದಿಗೆ ಬಾರೇಕ್‌ಪುರದ ಸುಭಾಷ್ ಕಾಲೋನಿಯಲ್ಲಿ ವಾಸಿಸುತ್ತಿರುವುದನ್ನು ತಿಳಿದ ಪತಿ ತಮ್ಮ ಕುಟುಂಬದೊಂದಿಗೆ ಅಲ್ಲಿಗೆ ಹೋಗಿದ್ದಾನೆ. ಆದರೆ ಅಲ್ಲಿ ಪತಿ ನೋಡಿ ಆಕ್ರೋಶಗೊಂಡ ಪಾಪಿ ಪತ್ನಿ, ಹೈಡ್ರಾಮಾ ಮಾಡಿದ್ದಾಳೆ.

ಆಕೆಯ ಮಾವ, ಅತ್ತೆ, ಗಂಡ ಮತ್ತು ಮಕ್ಕಳು ಎಷ್ಟೇ ಬೇಡಿಕೊಂಡರೂ, ಆಕೆ ಮಾತ್ರ ಯಾರಮನವೊಲಿಕೆಗೂ ಬಗ್ಗದೇ ತನ್ನ ಲವರ್ ಜೊತೆಯೇ ಇರುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ನಿನಗೆ ವಿಚ್ಛೇದನ ಕೊಡುವುದಾಗಿ ಗಂಡನಿಗೆ ಬೆದರಿಕೆ ಹಾಕಿ ಥಳಿಸಿದ್ದಾಳೆ. ಪತ್ನಿಯ ಈ ಮೃಗೀಯ ವರ್ತನೆ ಕಂಡು ಆಘಾತಗೊಂಡಿರುವ ವ್ಯಕ್ತಿ ಇದೀಗ ಪತಿ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಅಂದಹಾಗೆ 1994ರಿಂದ ಭಾರತದಲ್ಲಿ ಮಾನವ ಅಂಗಾಂಗಗಳ ಮಾರಾಟ ಕಾನೂನುಬಾಹಿರವಾಗಿದೆ. ಆದರೆ ದಾನಿಗಳ ಕೊರತೆಯಿಂದಾಗಿ ಅಂಗಾಂಗ ಮಾರಾಟ ದಂಧೆ ಮುಂದುವರೆದಿದೆ ಎಂದು ವೈದ್ಯರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT