ರಾಹುಲ್ ಗಾಂಧಿ 
ದೇಶ

'ಯಮುನಾ ನದಿ ನೀರು ಕುಡಿಯಿರಿ, ನಿಮ್ಮನ್ನು ಆಸ್ಪತ್ರೆಯಲ್ಲಿ ಭೇಟಿಯಾಗುತ್ತೇನೆ': ರಾಹುಲ್ ಗಾಂಧಿ

ಮನೀಶ್ ಸಿಸೋಡಿಯಾ, ಅತಿಶಿ, ಸಂಜಯ್ ಸಿಂಗ್, ರಾಘವ್ ಚಡ್ಡಾ, ಸತ್ಯೇಂದ್ರ ಜೈನ್ ಮತ್ತು ಇತರರು ಸೇರಿದಂತೆ ಎಎಪಿಯ 9 ಜನರ 'ಕೋರ್ ಟೀಂ' ಅನ್ನು ಟೀಕಿಸಿದ ಅವರು, ಇವರೆಲ್ಲರೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೋಲುತ್ತಾರೆ ಎಂದರು.

ನವದೆಹಲಿ: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಯಮುನಾ ನದಿಯನ್ನು ಸ್ವಚ್ಛಗೊಳಿಸುವ ದೆಹಲಿಯ ಮಾಜಿ ಮುಖ್ಯಮಂತ್ರಿಯ ಹಿಂದಿನ ಭರವಸೆಯನ್ನು ಎತ್ತಿ ತೋರಿಸಿದ್ದಾರೆ.

ಯಮುನಾ ನದಿ ನೀರನ್ನು ಕುಡಿಯಿರಿ, ನಂತರ ನಾನು ನಿಮ್ಮನ್ನು ಆಸ್ಪತ್ರೆಯಲ್ಲಿ ಭೇಟಿಯಾಗುತ್ತೇನೆ ಎಂದು ತಿಳಿಸಿದರು.

'ಅರವಿಂದ ಕೇಜ್ರಿವಾಲ್ ಅವರು ಹೊಸ ರಾಜಕೀಯ ವ್ಯವಸ್ಥೆಯನ್ನು ತರುತ್ತೇನೆ, ಭ್ರಷ್ಟಾಚಾರವನ್ನು ಕೊನೆಗಾಣಿಸುತ್ತೇನೆ, ಮುಂದಿನ 5 ವರ್ಷಗಳಲ್ಲಿ ಯಮುನಾ ನದಿ ನೀರನ್ನು ಸ್ವಚ್ಛಗೊಳಿಸುತ್ತೇನೆ ಎಂದಿದ್ದರು. ಆದರೆ, ಯಮುನಾ ನದಿ ಇಂದಿಗೂ ಹಾಗೆಯೇ ಉಳಿದಿದೆ. ಹೀಗಾಗಿ, ಮೊದಲು ಅವರಿಗೆ ಯಮುನಾ ನದಿ ನೀರನ್ನು ಕುಡಿಯಲು ಹೇಳಿ, ನಂತರ ನಾನು ಆಸ್ಪತ್ರೆಯಲ್ಲಿ ಅವರನ್ನು ಭೇಟಿಯಾಗುತ್ತೇನೆ' ಹೌಜ್ ಖಾಜಿ ಚೌಕ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಹೇಳಿದರು.

ಮನೀಶ್ ಸಿಸೋಡಿಯಾ, ಅತಿಶಿ, ಸಂಜಯ್ ಸಿಂಗ್, ರಾಘವ್ ಚಡ್ಡಾ, ಸತ್ಯೇಂದ್ರ ಜೈನ್ ಮತ್ತು ಇತರರು ಸೇರಿದಂತೆ ಎಎಪಿಯ 9 ಜನರ 'ಕೋರ್ ಟೀಂ' ಅನ್ನು ಟೀಕಿಸಿದ ಅವರು, ಇವರೆಲ್ಲರೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೋಲುತ್ತಾರೆ ಎಂದರು.

ಎಎಪಿಯ ನಾಯಕರ ಮುಖವಿರುವ ಕರಪತ್ರವನ್ನು ಹಿಡಿದ ಅವರು, 'ಈ 9 ಜನರು ಕೇಜ್ರಿವಾಲ್ ಅವರ ಪ್ರಮುಖ ತಂಡವಾಗಿದ್ದಾರೆ. ಇದರಲ್ಲಿ ಸಿಸೋಡಿಯಾ, ಅತಿಶಿ, ಸಂಜಯ್ ಸಿಂಗ್, ರಾಘವ್ ಚಡ್ಡಾ, ಸಂದೀಪ್ ಪಾಠಕ್, ಸತೇಂದ್ರ ಜೈನ್, ಅವದ್ ಓಜಾ ಇದ್ದಾರೆ. ಇವರಲ್ಲಿ ಯಾರೊಬ್ಬರೂ ದಲಿತ, OBC ಅಥವಾ ಮುಸ್ಲಿಂ ಸಮುದಾಯದವರು ಇಲ್ಲ. ಅವರು ತಮ್ಮ ತಂಡವನ್ನು ರಚಿಸುತ್ತಾರೆ ಮತ್ತು ಎಲ್ಲಿಯಾದರೂ ಗಲಭೆಯಾದಾಗ ಅವರು ಕಣ್ಮರೆಯಾಗುತ್ತಾರೆ' ಎಂದು ಆರೋಪಿಸಿದರು.

'ಕೇಜ್ರಿವಾಲ್ ಮತ್ತು ಮೋದಿ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಮೋದಿ ಬಹಿರಂಗವಾಗಿ ಮಾತನಾಡುತ್ತಾರೆ, ಕೇಜ್ರಿವಾಲ್ ಮೌನವಾಗಿದ್ದಾರೆ ಮತ್ತು ಅಗತ್ಯವಿದ್ದಾಗ ಬರುವುದಿಲ್ಲ. ಹೋರಾಟವು ವಾಸ್ತವದಲ್ಲಿ ಕೇವಲ ಎರಡು ಸಿದ್ಧಾಂತಗಳ ನಡುವೆ ಇದೆ. ಅದುವೇ 'ಏಕತೆ' ಮತ್ತು 'ದ್ವೇಷ' ಎಂದರು.

ಎರಡು ಪಕ್ಷಗಳ ನಡುವೆ ಹೋರಾಟ ಇದಾಗಿದೆ. ಎರಡು ಪಕ್ಷಗಳು ಒಂದೊಂದು ಸಿದ್ಧಾಂತವನ್ನು ಹೊಂದಿವೆ. ಒಂದು ದ್ವೇಷದ ಸಿದ್ಧಾಂತವಾದ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಇನ್ನೊಂದು ಏಕತೆಯ ಸಿದ್ಧಾಂತವಾದ ಕಾಂಗ್ರೆಸ್. ನರೇಂದ್ರ ಮೋದಿ ಇಂದು ಪ್ರಧಾನಿಯಾಗಿದ್ದಾರೆ. ಆದರೆ, ಅವರು ಅಧಿಕಾರದಿಂದ ಕೆಳಗಿಳಿಯುವ ದಿನ, ಯಾರೊಬ್ಬರೂ ಅವರನ್ನು ನೆನಪಿಸಿಕೊಳ್ಳುವುದಿಲ್ಲ. ಈ ದೇಶದಲ್ಲಿ ಇಬ್ಬರು ಇದ್ದರು. ಒಂದು ಮಹಾತ್ಮ ಗಾಂಧಿ ಮತ್ತೊಂದು ಗೋಡ್ಸೆ. ಆದರೆ, ಯಾರೂ ಗೋಡ್ಸೆಯನ್ನು ನೆನಪಿಸಿಕೊಳ್ಳುವುದಿಲ್ಲ' ಎಂದು ಹೇಳಿದರು.

ಫೆಬ್ರುವರಿ 5 ರಂದು ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಫೆಬ್ರುವರಿ 8 ರಂದು ಮತ ಎಣಿಕೆ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT