ಮಹಾಕುಂಭಮೇಳ. 
ದೇಶ

ಮಹಾ ಕುಂಭ ಮೇಳ: 3ನೇ ಪುಣ್ಯ ಸ್ನಾನ ಆರಂಭ; ಮಂತ್ರಗಳ ಪಠಣ, ‘ಹರ್ ಹರ್ ಮಹಾದೇವ್’ ಘೋಷಣೆ; ಪ್ರಯಾಗ್'ರಾಜ್'ನಲ್ಲಿ ಭಾರೀ ಕಟ್ಟೆಚ್ಚರ

ಮೌನಿ ಅಮಾವಾಸ್ಯೆಯಂದು ಮಹಾ ಕುಂಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 30 ಮಂದಿ ಸಾವನ್ನಪ್ಪಿದ್ದು, 90ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದ ಹಿನ್ನೆಲೆ ಇಂದು ನಡೆಯುತ್ತಿರುವ ಅಮೃತ ಸ್ನಾನದ ಮೇಲೆ ಉತ್ತರಪ್ರದೇಶ ಸರ್ಕಾರ ಹದ್ದಿನ ಕಣ್ಣು ಇರಿಸಿದೆ.

ಲಖನೌ: ಮಹಾಕುಂಭಮೇಳದ 21ನೇ ದಿನದ ಮೂರನೇ ಮತ್ತು ಅಂತಿಮ ಪುಣ್ಯ ಸ್ನಾನವು ಸೋಮವಾರ ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗಿದ್ದು, ಮಂತ್ರಗಳ ಪಠಣ-‘ಹರ್ ಹರ್ ಮಹಾದೇವ್’ ಘೋಷಣೆಗಳು ಮುಗಿಲು ಮುಟ್ಟಿದೆ.

ಭಾನುವಾರ ಬೆಳಿಗ್ಗೆ 9:44 ಕ್ಕೆ ಬಸಂತ್ ಪಂಚಮಿ ಆರಂಭವಾಗುತ್ತಿದ್ದಂತೆ, ಸಾಮಾನ್ಯ ಭಕ್ತರು ಅಮೃತ ಸ್ನಾನವನ್ನು ಪ್ರಾರಂಭಿಸಿದರು. ಇಂದು ಬೆಳಿಗ್ಗೆ 5 ಗಂಟೆಯಿಂದ ಸಾಧುಗಳು ಪುಣ್ಯ ಸ್ನಾನವನ್ನು ಆರಂಭಿಸಿದರು.

ಈ ನಡುವೆ ಮೌನಿ ಅಮಾವಾಸ್ಯೆಯಂದು ಮಹಾ ಕುಂಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 30 ಮಂದಿ ಸಾವನ್ನಪ್ಪಿದ್ದು, 90ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದ ಹಿನ್ನೆಲೆ ಇಂದು ನಡೆಯುತ್ತಿರುವ ಅಮೃತ ಸ್ನಾನದ ಮೇಲೆ ಉತ್ತರಪ್ರದೇಶ ಸರ್ಕಾರ ಹದ್ದಿನ ಕಣ್ಣು ಇರಿಸಿದೆ,

ತ್ರಿವೇಣಿ ಸಂಗಮದ ಘಾಟ್‌ಗಳ ಮೇಲೆ ನಿಗಾ ವಹಿಸಿರುವ ಪೊಲೀಸರು ಯಾವುದೇ ಅವಘಡಗಳಾಗದಂತೆ ಎಚ್ಚರಿಕೆ ವಹಿಸಿದ್ದಾರೆ.

ಮಹಾಕುಂಭದ ಎಲ್ಲಾ 25 ಸೆಕ್ಟರ್‌ಗಳು ಹಾಗೂ 30 ಪಾಂಟೂನ್ ಸೇತುವೆಗಳು ಮತ್ತು ಪ್ರಮುಖ ಬ್ಯಾರಿಕೇಡ್ ವಲಯಗಳ ಮೇಲ್ವಿಚಾರಣೆ ನಡೆಸಲಾಗಿದೆ. ಕಂಟ್ರೋಲ್ ರೂಂ ಮೂಲಕ ಕುಂಭ ಕಮಾಂಡ್ ತಂಡದಿಂದ ಮೇಲ್ವಿಚಾರಣೆ ನಡೆಸಲಾಗಿದೆ.

3,000ಕ್ಕೂ ಅಧಿಕ ಕ್ಯಾಮೆರಾ ಮೂಲಕ ನಿಗಾ ಇರಿಸಲಾಗಿದೆ. ಸ್ನಾನದ ನಂತರ ಘಾಟ್‌ಗಳಲ್ಲಿ ಕಾಲಹರಣ ಮಾಡದಂತೆ, ಊಟೋಪಚಾರ ಮಾಡದಂತೆ ಸರ್ಕಾರದಿಂದ ಮನವಿ ಮಾಡಲಾಗಿದೆ. ಸ್ನಾನದ ಬಳಿಕ ಘಾಟ್‌ನಿಂದ ನಿರ್ಗಮಿಸಿ ಗೊತ್ತುಪಡಿಸಿದ ಸ್ಥಳಗಳಲ್ಲಿ ಊಟೊಪಚಾರಕ್ಕೆ ಸಲಹೆ ನೀಡಲಾಗಿದೆ.

ಈಗಾಗಲೇ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಸಭೆ ನಡೆಸಿದ್ದಾರೆ. ಈ ಹಿಂದೆ ಯಶಸ್ವಿ ಕುಂಭಮೇಳ ನಿಭಾಯಿಸಿದ್ದ ಇಬ್ಬರು ಅಧಿಕಾರಿಗಳಿಗೆ ವಿಶೇಷ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿದುಬಂದಿದೆ.

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಸಂತ ಪಂಚಮಿಯ 'ಅಮೃತ ಸ್ನಾನ'ದ ಕುರಿತು ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದು, ಬೆಳಿಗ್ಗೆ 3.30 ರಿಂದ ತಮ್ಮ ಅಧಿಕೃತ ನಿವಾಸದ ವಾರ್ ರೂಮಿನಲ್ಲಿ ಡಿಜಿಪಿ, ಗೃಹ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡುತ್ತಿದ್ದಾರೆಂದು ತಿಳಿದುಬಂದಿದೆ.

ಮಹಾಕುಂಭ ಮೇಳದಲ್ಲಿ ನಡೆಯುವ ಪವಿತ್ರ ಶಾಹಿಸ್ನಾನಗಳಲ್ಲಿ ವಸಂತ ಪಂಚಮಿ ಪ್ರಮುಖವಾಗಿದೆ. ಫೆ.12ರಂದು ಮಾಫ ಪೂರ್ಣಿಮೆ ಮತ್ತು ಫೆ.26ರಂದು ಮಹಾಶಿವರಾತ್ರಿಯ ದಿನ ಕೊನೆ ಪುಣ್ಯ ಸ್ನಾನ ನೆರವೇರಲಿವೆ. ಜ.13ರಂದು ಆರಂಭವಾದ ಕುಂಭಮೇಳಕ್ಕೆ ಇದೂವರೆಗೆ 33 ಕೋಟಿ ಭಕ್ತರು ಭೇಟಿ ನೀಡಿದ್ದಾರೆಂದು ವರದಿಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ