ಬಾವಿಗೆ ಬಿದ್ದ ಹುಲಿ ಮತ್ತು ಕಾಡುಹಂದಿ 
ದೇಶ

video: ಎಡವಟ್ಟು ಬೇಟೆ, ಒಂದೇ ಬಾವಿಗೆ ಬಿದ್ದ ಹುಲಿ-ಕಾಡು ಹಂದಿ!

ಬಾವಿಯಿಂದ ಹುಲಿ ಮತ್ತು ಕಾಡುಹಂದಿಯ ಚೀರಾಟ ಕೇಳಿದ ಗ್ರಾಮಸ್ಥರು ಬಂದು ನೋಡಿದಾಗ ಹುಲಿ ಮತ್ತು ಕಾಡುಹಂದಿ ಬಿದ್ದಿರುವ ವಿಚಾರ ತಿಳಿದಿದೆ.

ಸಿಯೋನಿ: ಕಾಡುಹಂದಿಯನ್ನು ಅಟ್ಟಿಸಿಕೊಂಡು ಬಂದ ಹುಲಿಯೊಂದು ಹಂದಿ ಜೊತೆಗೇ ಬಾವಿಗೆ ಬಿದ್ದಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಾಡು ಹಂದಿಯನ್ನು ಬೇಟೆಯಾಡುವ ರಭಸದಲ್ಲಿ ಹುಲಿಯೊಂದು ಹಂದಿ ಜೊತೆಗೇ ಬಾವಿಗೆ ಬಿದ್ದಿರುವ ಅಪರೂಪದ ಘಟನೆ ನಡೆದಿದೆ.

ಬಾವಿಯಿಂದ ಹುಲಿ ಮತ್ತು ಕಾಡುಹಂದಿಯ ಚೀರಾಟ ಕೇಳಿದ ಗ್ರಾಮಸ್ಥರು ಬಂದು ನೋಡಿದಾಗ ಹುಲಿ ಮತ್ತು ಕಾಡುಹಂದಿ ಬಿದ್ದಿರುವ ವಿಚಾರ ತಿಳಿದಿದೆ. ನೋಡ ನೋಡುತ್ತಲೇ ನೂರಾರು ಗ್ರಾಮಸ್ಥರು ಆಘಾತ ಮತ್ತು ವಿಸ್ಮಯದಿಂದ ಬಾವಿಯ ಸುತ್ತಲೂ ಜಮಾಯಿಸಿ ಹುಲಿ ಮತ್ತು ಹಂದಿಯ ಜುಗಲ್ ಬಂದಿ ನೋಡುತ್ತಿದ್ದರು.

ಬಾವಿಯಲ್ಲಿ ಕಾಡು ಹಂದಿ ಪಕ್ಕದಲ್ಲೇ ಈಜುತ್ತಿದ್ದರೂ ಹುಲಿರಾಯ ಮಾತ್ರ ಅದನ್ನೂ ಏನೂ ಮಾಡದೇ ಬಾವಿಯಿಂದ ಮೇಲೇರುವ ಪ್ರಯತ್ನ ಮಾಡುತ್ತಿತ್ತು. ಅಂತೆಯೇ ಮೊದಲ ಬಾರಿಗೆ ಎನ್ನುವಂತೆ ಹಂದಿ ಕೂಡ ಹುಲಿಗೆ ಹೆದರದೆ ತನ್ನ ಜೀವ ಉಳಿಸಿಕೊಳ್ಳಲು ತಾನೂ ಕೂಡ ಮೇಲೇರಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಇನ್ನು ವಿಚಾರ ತಿಳಿದ ಕೂಡಲೇ ಅರಣ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಬಳಿಕ ವನ್ಯಜೀವಿ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕರೆಸಿದ್ದಾರೆ. ಗ್ರಾಮಸ್ಥರ ನೆರವಿನೊಂದಿಗೆ ಎರಡೂ ಪ್ರಾಣಿಗಳನ್ನು ಬಾವಿಯಿಂದ ಹೊರತೆಗೆಯುವ ಪ್ರಯತ್ನ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್