ಬಿಜೆಪಿ  online desk
ದೇಶ

Uttar Pradesh Bypoll Results: Ayodhya ಪಕ್ಕದ Milkipur ಕ್ಷೇತ್ರದಲ್ಲಿ BJP ಭಾರಿ ಮುನ್ನಡೆ; ಲೋಕಸಭಾ ಚುನಾವಣೆ ಸೋಲಿಗೆ ಪ್ರತೀಕಾರ!

2024 ರ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆ ಒಳಪಡುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಮಾಜವಾದಿ ಪಕ್ಷದ ಅಭ್ಯರ್ಥಿ ವಿರುದ್ಧ ಸೋಲು ಕಂಡಿತ್ತು.

ಲಖನೌ: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದೊಂದಿಗೆ ಉತ್ತರ ಪ್ರದೇಶದ ವಿಧಾನಸಭೆಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ.

ಮಿಲ್ಕಿಪುರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಾರಿ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಈ ಕ್ಷೇತ್ರ ಅಯೋಧ್ಯೆಯ ನೆರೆಯ ಕ್ಷೇತ್ರವಾಗಿದ್ದು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿತ್ತು. 2024 ರ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆ ಒಳಪಡುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಮಾಜವಾದಿ ಪಕ್ಷದ ಅಭ್ಯರ್ಥಿ ವಿರುದ್ಧ ಸೋಲು ಕಂಡಿತ್ತು.

ಈಗ ವಿಧಾನಸಭಾ ಉಪಚುನಾವಣೆಯಲ್ಲಿ ಅಯೋಧ್ಯೆ ಪಕ್ಕದ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಫೈಜಾಬಾದ್ ಲೋಕಸಭ ಕ್ಷೇತ್ರದಲ್ಲಿನ ಸೋಲಿಗೆ ಬಿಜೆಪಿ ಪ್ರತೀಕಾರ ಪಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಿಲ್ಕಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಭಾನು ಪಾಸ್ವಾನ್ ಎಸ್ ಪಿ ಅಭ್ಯರ್ಥಿ ವಿರುದ್ಧ 50,000 ಮತಗಳ ಅಂತರದ ಮುನ್ನಡೆ ದಾಖಲಿಸಿದ್ದಾರೆ.

ಇನ್ನು ತಮಿಳುನಾಡಿನ ಈರೋಡ್​ ಉಪಚುನಾವಣೆಯಲ್ಲಿ ಡಿಎಂಕೆ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

CEC 'ಮತ ಕಳ್ಳರ ರಕ್ಷಕ'; ಕರ್ನಾಟಕದ ಆಳಂದ ಕ್ಷೇತ್ರದಲ್ಲಿ 6,000 ಮತದಾರರ ಹೆಸರು ಡಿಲೀಟ್: ರಾಹುಲ್ ಗಾಂಧಿ ಆರೋಪ; Video

Onlineನಲ್ಲಿ ಮತ ಅಳಿಸಲು ಸಾಧ್ಯವಿಲ್ಲ, ರಾಹುಲ್ ಗಾಂಧಿ ಮತಗಳ್ಳತನ ಆರೋಪ ಆಧಾರರಹಿತ: ಚುನಾವಣಾ ಆಯೋಗ

ವೋಟ್ ಚೋರಿ ಬಗ್ಗೆ CID ಚುನಾವಣಾ ಆಯೋಗಕ್ಕೆ 18 ಪತ್ರ ಬರೆದಿದೆ, ಯಾವುದಕ್ಕೂ ಉತ್ತರ ಇಲ್ಲ: ಖರ್ಗೆ

ಮತದಾರರನ್ನು 'ಸಾಮೂಹಿಕವಾಗಿ' ಡಿಲೀಟ್ ಮಾಡಲು ಬಿಜೆಪಿಯಿಂದ ಫಾರ್ಮ್ 7 'ದುರುಪಯೋಗ': ಪ್ರಿಯಾಂಕ್ ಖರ್ಗೆ

ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡದಲ್ಲಿ ಪತ್ತೆಯಾದ ಬಹುತೇಕ ಮಾನವ ಅವಶೇಷಗಳು ಪುರುಷರದ್ದು, ಇತ್ತೀಚಿನವುಗಳು! Video

SCROLL FOR NEXT