ವಿದ್ಯಾರ್ಥಿಗಳೊಂದಿಗೆ ಮೋದಿ 
ದೇಶ

ಪರೀಕ್ಷಾ ಪೆ ಚರ್ಚಾ: ಸವಾಲು ಸ್ವೀಕಾರಿಸುವುದು, ಒತ್ತಡ ಕಡಿಮೆ ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ಮೋದಿ ಪಾಠ

ಈ ಬಾರಿ 'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮವನ್ನು ದೆಹಲಿಯ ಸುಂದರ್ ನರ್ಸರಿಯಲ್ಲಿ ಚಿತ್ರೀಕರಿಸಲಾಗಿದ್ದು, ಮೋದಿ ಸುಮಾರು 35 ವಿದ್ಯಾರ್ಥಿಗಳೊಂದಿಗೆ ಮುಕ್ತ ವಾತಾವರಣದಲ್ಲಿ ಸಂವಹನ ನಡೆಸಿದರು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಮ್ಮ ವಾರ್ಷಿಕ 'ಪರೀಕ್ಷಾ ಪೆ ಚರ್ಚಾ' ಪ್ರಸಾರದ ಎಂಟನೇ ಆವೃತ್ತಿಯ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ನಡೆಸಿದ ಸಂವಾದದಲ್ಲಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು.

ಈ ಬಾರಿ 'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮವನ್ನು ದೆಹಲಿಯ ಸುಂದರ್ ನರ್ಸರಿಯಲ್ಲಿ ಚಿತ್ರೀಕರಿಸಲಾಗಿದ್ದು, ಮೋದಿ ಸುಮಾರು 35 ವಿದ್ಯಾರ್ಥಿಗಳೊಂದಿಗೆ ಮುಕ್ತ ವಾತಾವರಣದಲ್ಲಿ ಸಂವಹನ ನಡೆಸಿದರು.

ವಿದ್ಯಾರ್ಥಿಗಳಿಗೆ 'ಜ್ಞಾನ' (ಜ್ಞಾನ) ಮತ್ತು ಪರೀಕ್ಷೆಗಳು ಎರಡು ವಿಭಿನ್ನ ವಿಷಯಗಳು ಎಂದು ಹೇಳಿದೆ ಪ್ರಧಾನಿ ಮೋದಿ, ಮೋದಿ ಮಕ್ಕಳ ಬೆಳವಣಿಗೆಗಾಗಿ ಅವರನ್ನು ಹೊರಗೆ ಕರೆದುಕೊಂಡು ಹೋಗುವುದು ಮುಖ್ಯ. ಅವರನ್ನು ಪುಸ್ತಕಗಳ ಸೆರೆಮನೆಯಲ್ಲಿ ಬಂಧಿಸಬಾರದು ಎಂದು ಹೇಳಿದರು.

'ನಿಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ, ನಿಮ್ಮ ಜೀವನವನ್ನು ಸದುಪಯೋಗಪಡಿಸಿಕೊಳ್ಳಿ, ಈ ಕ್ಷಣ ನಿಮ್ಮದು ಎಂದು ಜೀವಿಸಿ. ಸಕಾರಾತ್ಮಕ ಅಂಶಗಳನ್ನು ಕಂಡುಕೊಳ್ಳಿ ಎಂದು ಪ್ರಧಾನಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪೋಷಕರು ತಮ್ಮ ಮಕ್ಕಳನ್ನು ಪ್ರದರ್ಶನ ಮಾದರಿಗಳಾಗಿ ಬಳಸಬಾರದು. ಅವರನ್ನು ಇತರರೊಂದಿಗೆ ಹೋಲಿಸಬಾರದು ಮತ್ತು ಬದಲಿಗೆ ಅವರನ್ನು ಬೆಂಬಲಿಸಬೇಕು ಎಂದು ಮೋದಿ ಹೇಳಿದರು.

"ದುರದೃಷ್ಟವಶಾತ್ ಯಾರಾದರೂ 10 ಮತ್ತು 12 ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸದಿದ್ದರೆ, ಅವರ ಜೀವನ ಹಾಳಾಗುತ್ತದೆ ಎಂಬ ಸಾಮಾನ್ಯ ನಂಬಿಕೆ ಇದೆ. ನಮ್ಮ ಸಮಾಜವು ಕಡಿಮೆ ಅಂಕಗಳಿಗಾಗಿ ಮನೆಯಲ್ಲಿ ರಾದ್ಧಾಂತವನ್ನೇ ಸೃಷ್ಟಿಸುತ್ತದೆ. ನೀವು ಒತ್ತಡದಿಂದ ಹೊರಬರಬೇಕು. ಅದರ ಬಗ್ಗೆ ಚಿಂತಿಸದೆ ಸಿದ್ಧರಾಗಿ" ಎಂದು ಪ್ರಧಾನಿ ಹೇಳಿದರು.

ಇನ್ನು ಪರೀಕ್ಷಾ ಪೆ ಚರ್ಚಾ ಕಾರ್ತಕ್ರಮದಲ್ಲಿ ಬಿಹಾರದ ವಿದ್ಯಾರ್ಥಿಯೊಬ್ಬರು ಪ್ರಧಾನಿ ಮೋದಿಯವರಿಗೆ ನಾಯಕತ್ವಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಪ್ರಧಾನಿ ಮೋದಿ ತಮಾಷೆಯಾಗಿ, ಬಿಹಾರದ ವಿದ್ಯಾರ್ಥಿಯೊಬ್ಬರು ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಕೇಳದೇ ಇರಲು ಸಾಧ್ಯವಿಲ್ಲ ಎಂದು ಹೇಳಿದರು. ಅಲ್ಲದೇ, ಬಿಹಾರದ ಜನರನ್ನು ಪ್ರತಿಭಾನ್ವಿತರು ಎಂದು ಮೋದಿ ಬಣ್ಣಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ನಾಯಕತ್ವದ ಬಗ್ಗೆ ಮೋದಿ ಚರ್ಚಿಸಿ ನಿಮ್ಮ ನಂಬಿಕೆಯು ನಾಯಕತ್ವವನ್ನು ಬಲಪಡಿಸುತ್ತದೆ ಎಂದು ಹೇಳಿದರು.

ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆದ ಕೇರಳದ ವಿದ್ಯಾರ್ಥಿನಿ ಹಿಂದಿಯಲ್ಲಿ ಮಾತನಾಡಿ ಮೋದಿಗೆ ಅಚ್ಚರಿ ಮೂಡಿಸಿದರು. ಆ ಹುಡುಗಿ ತನಗೆ ಕವಿತೆ ಬರೆಯುವುದರಲ್ಲಿ ಆಸಕ್ತಿ ಇದೆ, ಹಿಂದಿಯಲ್ಲಿ ಕವಿತೆ ಬರೆಯುತ್ತೇನೆಂದು ಹೇಳಿದಳು.

ಆಹಾರ ಪದ್ಧತಿ ಮತ್ತು ಫಿಟ್‌ನೆಸ್ ಬಗ್ಗೆಯೂ ಮಾತನಾಡಿ ಮೋದಿ, ರಾಗಿಯ ಪ್ರಯೋಜನಗಳನ್ನು ಸಹ ಹೇಳಿದ ಮೋದಿ, ರೈತರ ಉದಾಹರಣೆಯನ್ನು ನೀಡುವ ಮೂಲಕ ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಗಮನವಹಿಸಬೇಕು ಎಂದು ಹೇಳಿದರು. ಅಲ್ಲದೇ, ಮಕ್ಕಳು ತಮ್ಮ ಆಹಾರವನ್ನು 32 ಬಾರಿ ಅಗಿಯಬೇಕು. ಏನು ತಿನ್ನಬೇಕು ಮತ್ತು ಯಾವಾಗ ತಿನ್ನಬೇಕು ಎಂಬುದನ್ನು ಸಹ ತಿಳಿದುಕೊಳ್ಳಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಳ್ಳಾರಿ ಬ್ಯಾನರ್ ಗಲಭೆ: ಶಾಸಕ ನಾರಾ ಭರತ್ ರೆಡ್ಡಿ ಸೇರಿ ಹಲವರ ವಿರುದ್ಧ FIR

ಬಳ್ಳಾರಿ ಗಲಾಟೆ: ಆರು ಸದಸ್ಯರ ಸತ್ಯಶೋಧನಾ ಸಮಿತಿ ರಚಿಸಿದ ಕಾಂಗ್ರೆಸ್

ನೈಸ್‌ ಯೋಜನೆ: ಡಿ.ಕೆ ಶಿವಕುಮಾರ್ ಆಕ್ಷೇಪ ಸ್ವಾಗತಾರ್ಹ; ಕ್ರಮ ಕೈಗೊಳ್ಳುತ್ತಾರೆಯೇ ಕಾದು ನೋಡೋಣ- ದೇವೇಗೌಡ

'Grok ರಚಿಸಿದ ಅಸಭ್ಯ, ಕಾನೂನುಬಾಹಿರ ವಿಷಯಗಳ ತೆಗೆದುಹಾಕಿ': Elon Musk ಎಕ್ಸ್‌ಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ!

Ramnath Goenka Sahithya Samman 2025: ಸಾಹಿತಿ ಚಂದ್ರಶೇಖರ ಕಂಬಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

SCROLL FOR NEXT