ಕುಂಭ ಮೇಳ 
ದೇಶ

Maha Kumbh: ಮಾಘ ಪೂರ್ಣಿಮಾ ಹಿನ್ನೆಲೆ ತ್ರಿವೇಣಿ ಸಂಗಮದಲ್ಲಿ ಭಕ್ತ ಸಾಗರ, 73 ಲಕ್ಷ ಮಂದಿ ಪುಣ್ಯಸ್ನಾನ

ಕುಂಭ ಮೇಳದ ಒಟ್ಟು 6 ಪುಣ್ಯ ಸ್ನಾನಗಳ ಪೈಕಿ ಮಾಘಿ ಪೂರ್ಣಿಮೆಯಂದು ನಡೆಯುವ ಪುಣ್ಯ ಸ್ನಾನ 5ನೆಯದ್ದಾಗಿದೆ. 6ನೇ ಪುಣ್ಯಸ್ನಾನ ಫೆ.26ರ ಮಹಾಶಿವರಾತ್ರಿಯಂದು ನಡೆಯಲಿದೆ.

ಮಹಾಕುಂಭಗ ನಗರ: ಮಹಾಕುಂಭ ಮೇಳದಲ್ಲ ಮಾಘಿ ಪೂರ್ಣಿಮೆ ನಿಮಿತ್ತ ಬುಧವಾರ ಪುಣ್ಯ ಸ್ನಾನ ನಡೆಯುತ್ತಿದ್ದು, ಬೆಳಿಗ್ಗೆ 6 ಗಂಟೆಯವರೆಗೆ ತ್ರಿವೇಣಿ ಸಂಗಮದಲ್ಲಿ 73 ಲಕ್ಷಕ್ಕೂ ಹೆಚ್ಚು ಜನರು ಪುಣ್ಯ ಸ್ನಾನ ಮಾಡಿದ್ದಾರೆ.

ಬೆಳಗಿನ ಜಾವದಿಂದಲೇ ಪುಣ್ಯ ಸ್ನಾನ ಆರಂಭವಾಗಿದ್ದು, ತ್ರಿವೇಣಿ ಸಂಗಮದಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದೆ. ಈ ನಡುವೆ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಖನೌದಿಂದಲ ಅವಲೋಕನ ನಡೆಯುತ್ತಿದ್ದಾರೆ.

ಮುಖ್ಯಮಂತ್ರಿ ಆದಿತ್ಯನಾಥ್ ಅವರು ಲಖನೌದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿರುವ ವಾರ್ ರೂಮ್‌ನಲ್ಲಿ ಬೆಳಿಗ್ಗೆ 4 ಗಂಟೆಯಿಂದ ಮಾಘಿ ಪೂರ್ಣಿಮಾ ಸ್ನಾನವನ್ನು ವೀಕ್ಷಣೆ ಮಾಡುತ್ತಿದ್ದಾರೆ.

ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್, ಪ್ರಧಾನ ಕಾರ್ಯದರ್ಶಿ (ಗೃಹ) ಸಂಜಯ್ ಪ್ರಸಾದ್ ಮತ್ತು ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳು ಕೂಡ ವಾರ್ ರೂಮ್‌ನಲ್ಲಿ ಮುಖ್ಯಮಂತ್ರಿಗಳಿಗ ಸಾಥ್ ನೀಡಿದ್ದಾರೆ.

ಭಕ್ತರ ಸಂಚಾರ ಸುಗಮವಾಗಿ ನಡೆಯುತ್ತಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಹಿಂದಿನ ವಸಂತ ಪಂಚಮಿಯ 'ಸ್ನಾನ'ದ ಸಮಯದಲ್ಲಿಯೂ ಸೂಕ್ತ ವ್ಯವಸ್ಥೆಗಳನ್ನು ಮಾಡಿದ್ದೆವು. ಈ ಬಾರಿ ವ್ಯವಸ್ಥೆಗಳನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ಎಸ್‌ಎಸ್‌ಪಿ ರಾಜೇಶ್ ದ್ವಿವೇದಿ ಅವರು ಹೇಳಿದ್ದಾರೆ.

ಏತನ್ಮಧ್ಯೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಜನತೆಗೆ ಮಾಫಿ ಪೂರ್ಣಿಮೆ ದಿನದ ಶುಭಾಶಯಗಳನ್ನು ಕೋರಿದ್ದಾರೆ.

ಪ್ರಯಾಗರಾಜ್‌ನ ಮಹಾ ಕುಂಭ-2025 ರಲ್ಲಿ ಪವಿತ್ರ ತ್ರಿವೇಣಿಯಲ್ಲಿ ಪವಿತ್ರ ಸ್ನಾನಕ್ಕೆ ಬಂದಿರುವ ಎಲ್ಲಾ ಸಂತರು, ಧಾರ್ಮಿಕ ಮುಖಂಡರು, ಕಲ್ಪವಾಸಿಗಳು ಮತ್ತು ಭಕ್ತರಿಗೆ ಶುಭಾಶಯಗಳು. ಹರಿಯ ಕೃಪೆಯಿಂದ ಎಲ್ಲರ ಜೀವನವು ಸಂತೋಷ, ಸಮೃದ್ಧಿ ಮತ್ತು ಅದೃಷ್ಟದಿಂದ ತುಂಬಿರಲಿ. ಮಾತೆ ಗಂಗಾ, ಯಮುನಾ ಮತ್ತು ಸರಸ್ವತಿ ಎಲ್ಲರ ಆಶಯಗಳನ್ನು ಈಡೇರಿಸಲಿ ಎಂದು ಹೇಳಿದ್ದಾರೆ.

ಕುಂಭ ಮೇಳದ ಒಟ್ಟು 6 ಪುಣ್ಯ ಸ್ನಾನಗಳ ಪೈಕಿ ಮಾಘಿ ಪೂರ್ಣಿಮೆಯಂದು ನಡೆಯುವ ಪುಣ್ಯ ಸ್ನಾನ 5ನೆಯದ್ದಾಗಿದೆ. 6ನೇ ಪುಣ್ಯಸ್ನಾನ ಫೆ.26ರ ಮಹಾಶಿವರಾತ್ರಿಯಂದು ನಡೆಯಲಿದೆ.

ತ್ರಿವೇಣ ಸಂಗಮಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಉತ್ತರಪ್ರದೇಶ ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಂಡಿದೆ.

ಮಂಗಳವಾರ ಮುಂಜಾನೆ 4 ಗಂಟೆಯಿಂದಲೇ ಕುಂಭ ಸ್ಥಳವನ್ನು ವಾಹನ ರಹಿತ ವಲಯ ಎಂದು ಘೋಷಣೆ ಮಾಡಿದ್ದುಸ, ಸಂಜೆ 5ರಿಂದ ನಿಯಮ ಜಾರಿಯಾಗಿದೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿರುವುದಾಗಿ ಸರ್ಕಾರ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Mysuru Dasara: ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ; ಜಂಬೂ ಸವಾರಿಗೆ ಸಿಎಂ ಚಾಲನೆ

ಅಂಬೇಡ್ಕರ್ ಸಿದ್ಧಾಂತದಂತೆ ಬದುಕಿದ್ದೇವೆ: RSS ಕಾರ್ಯಕ್ರಮಕ್ಕೆ ಹೋಗಲ್ಲ- CJI ಗವಾಯಿ ತಾಯಿ

Asia Cup 2025: 'ಪಾಕಿಗಳ ನೋಡಿದ್ರೆ ಅವನ ರಕ್ತ ಕುದಿಯುತ್ತಿತ್ತು'; ಟೀಂ ಇಂಡಿಯಾ 'Hero' ಕೋಚ್ Kapil Dev Pandey ಮಾತು!

1st Test: ಮೊದಲ ದಿನದಾಟ ಅಂತ್ಯ, ವಿಂಡೀಸ್ ವಿರುದ್ಧ ಭಾರತ ಮೇಲುಗೈ, 41 ರನ್ ಹಿನ್ನಡೆ!

'RSS-BJP' ಸೈದ್ಧಾಂತಿಕತೆಯ ಹೃದಯದಲ್ಲಿ ಹೇಡಿತನವಿದೆ: ಕೊಲಂಬಿಯಾದಲ್ಲಿ ಗುಡುಗಿದ ರಾಹುಲ್ ಗಾಂಧಿ!

SCROLL FOR NEXT