ಆನೆಗಳ ದಾಳಿ 
ದೇಶ

Kerala: ಪ್ರಸಿದ್ಧ ಮಣಕುಲಂಗರ ದೇವಸ್ಥಾನ ಉತ್ಸವದ ವೇಳೆ ರೊಚ್ಚಿಗೆದ್ದ ಆನೆಗಳು; 3 ಸಾವು, 12 ಜನರ ಸ್ಥಿತಿ ಗಂಭೀರ, Video!

ಈ ಪೈಕಿ 12 ಜನರ ಸ್ಥಿತಿ ಗಂಭೀರವಾಗಿದೆ. ಅವರನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ.

ಕೋಝಿಕ್ಕೋಡ್: ಕೇರಳ ದೇವಸ್ಥಾನದ ಉತ್ಸವದಲ್ಲಿ ಎರಡು ಆನೆಗಳು ರೊಚ್ಚಿಗೆದ್ದು ಓಡಾಡಿದ್ದರಿಂದ ಮೂವರು ಮೃತಪಟ್ಟಿದ್ದು 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೊಝಿಕೋಡ್‌ನ ಕೊಯಿಲಾಂಡಿಯ ಕುರುವಂಗಾಡ್‌ನಲ್ಲಿರುವ ಮಣಕುಲಂಗರ ದೇವಸ್ಥಾನದಲ್ಲಿ ಉತ್ಸವದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು ಕುರುವಂಗಾಡ್ ಮೂಲದ ಲೀಲಾ, ಅಮ್ಮುಕುಟ್ಟಿ ಮತ್ತು ರಾಜನ್ ಎಂದು ಗುರುತಿಸಲಾಗಿದ್ದು ಗಾಯಾಳುಗಳನ್ನು ಕೊಯಿಲಾಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಪೈಕಿ 12 ಜನರ ಸ್ಥಿತಿ ಗಂಭೀರವಾಗಿದೆ. ಅವರನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ. ಏಳು ಮಹಿಳೆಯರು, ಓರ್ವ ಹುಡುಗಿ ಮತ್ತು ನಾಲ್ವರು ಪುರುಷರನ್ನು ಕೋಝಿಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.

ಈ ಘಟನೆ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ. ದೊಡ್ಡ ಶಬ್ದದೊಂದಿಗೆ ಪಟಾಕಿಗಳನ್ನು ಸಿಡಿಸಿದಾಗ ಈ ಘಟನೆ ಸಂಭವಿಸಿದೆ. ಪೀತಾಂಬರನ್ ಮತ್ತು ಗೋಕುಲ್ ಎಂಬ ಆನೆಗಳಿಂದ ಈ ಘಟನೆ ನಡೆದಿದೆ. ಪಟಾಕಿ ಪ್ರದರ್ಶನದ ಸದ್ದಿಗೆ ಹತ್ತಿರದ ಕಟ್ಟಡಗಳ ಛಾವಣಿಗಳು ಸಹ ಅಲುಗಾಡಿದವು. ಅಷ್ಟರಲ್ಲಿ ಒಂದು ಆನೆ ಒಳಗೆ ಬಂತು. ಈ ಆನೆ ಹತ್ತಿರದಲ್ಲಿ ನಿಂತಿದ್ದ ಮತ್ತೊಂದು ಆನೆಯ ಮೇಲೆ ದಾಳಿ ಮಾಡಿತು. ಮತ್ತು ನಂತರ ಎರಡು ಆನೆಗಳು ಮುಖಾಮುಖಿಯಾದವು. ಈ ವೇಳೆ ಭಯಭೀತರಾದ ಜನರು ಓಡಲು ಪ್ರಾರಂಭಿಸಿದಾಗ ಕಾಲ್ತುಳಿತವಾಗಿದೆ. ಆನೆ ದಾಳಿಯಿಂದ ದೇವಸ್ವಂ ಕಚೇರಿಗೆ ಹಾನಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!