ನವದೆಹಲಿ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವನ್ನು 'ಮೃತ್ಯುಕುಂಭ' ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಮಧ್ಯೆ ಉತ್ತರಾಖಂಡದ ಜ್ಯೋತಿರ್ಮಠದ ಅವಿಮುಕ್ತೇಶ್ವರಾನಂದ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ, ಮಮತಾ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಮಹಾ ಕುಂಭಮೇಳದಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.
ANI ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸ್ವಾಮೀಜಿ, 300 ಕಿಲೋಮೀಟರ್‌ಗಳಷ್ಟು ದಟ್ಟಣೆ ಕಂಡುಬರುತ್ತಿದೆ. ಇದನ್ನು ಅವ್ಯವಸ್ಥೆ ಎನ್ನದೇ ಇನ್ನೇನು ಅಂತಾ ಕರೆಯಬೇಕು? ಎಂದು ಪ್ರಶ್ನಿಸಿದ್ದಾರೆ.
ಜನರು ತಮ್ಮ ಲಗ್ಗೇಜುಗಳೊಂದಿಗೆ 25-30 ಕಿಲೋ ಮೀಟರ್ ನಡೆದು ಹೋಗುತ್ತಿದ್ದಾರೆ. ತ್ರಿವೇಣಿ ಸಂಗಮದ ಪವಿತ್ರ ಸ್ನಾನದ ಜಾಗದಲ್ಲಿ, ಕೊಳಚೆ ಮತ್ತು ಒಳಚರಂಡಿ ನೀರು ಹರಿದು ಬರುತ್ತಿದೆ. ಅದು ಸ್ನಾನ ಮಾಡಲು ಯೋಗ್ಯವಲ್ಲಾ ಅಂತಾ ವಿಜ್ಞಾನಿಗಳು ಹೇಳುತ್ತಿದ್ದಾರೆ. ಆದಾಗ್ಯೂ, ಅಲ್ಲಿಯೇ ಸ್ನಾನ ಮಾಡುವಂತೆ ಕೋಟ್ಯಂತರ ಜನರನ್ನು ಒತ್ತಾಯಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಮೌನಿ ಅಮವ್ಯಾಸೆ ದಿನದಂದು ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಒಟ್ಟಾರೇ ಸಂಖ್ಯೆಯನ್ನು ಮುಚ್ಚಿಡಲು ಸರ್ಕಾರ ಪ್ರಯತ್ನಿಸುತ್ತಿದೆ. ದಟ್ಟಣೆ ನಿರ್ವಹಣೆ ಹಾಗೂ ಅತಿಥ್ಯ ನಿಯಮಗಳನ್ನು ಪಾಲಿಸಿಲ್ಲ.ಜನರು ಸಾಯುತ್ತಿದ್ದರೂ ಅದನ್ನು ಮುಚ್ಚಿಸಲು ಸರ್ಕಾರ ಪ್ರಯತ್ನಿಸಿದೆ. ಇದೊಂದು ಘೋರ ಅಪರಾಧವಾಗಿದೆ. ಇಂತಹ ಸಂದರ್ಭದಲ್ಲಿಯಾರಾದರೂ ಮಹಾ ಕುಂಭ ಮೇಳದ ವ್ಯವಸ್ಥೆಯನ್ನು ಟೀಕಿಸಿದರೆ ಅದನ್ನು ನಾವು ವಿರೋಧಿಸಲು ಸಾಧ್ಯವಿಲ್ಲ ಎಂದು ಶಂಕರಾಚಾರ್ಯ ಹೇಳಿದ್ದಾರೆ.