ಸಂಗ್ರಹ ಚಿತ್ರ 
ದೇಶ

ಮಹಾಕುಂಭಮೇಳಕ್ಕೆ ಹೋಗಲು ಆಗದಿದ್ರೆ ಮನೆಯಲ್ಲೇ ಮಾಡಿ ಕುಂಭ ಸ್ನಾನ: ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್, ಹೇಗೆ ಸಾಧ್ಯ ಅಂತೀರಾ!

'Dip From Home' ಸೇವೆಯನ್ನು ಪ್ರಚಾರ ಮಾಡುವ ವಿಚಿತ್ರ ಪೋಸ್ಟರ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ನವದೆಹಲಿ: ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕೋಟ್ಯಾಂತರ ಹಿಂದೂಗಳು ಕುಂಭ ಸ್ನಾನ ಮಾಡಿದ್ದಾರೆ. ಇನ್ನು ಅಪಾರ ಸಂಖ್ಯೆಯಲ್ಲಿ ಜನರು ಕುಂಭ ಸ್ನಾನ ಮಾಡಲು ಪ್ರಯಾಗ್ ರಾಜ್ ಗೆ ತೆರಳುತ್ತಿದ್ದಾರೆ. ಇನ್ನು ಅಲ್ಲಿಗೆ ಹೋಗಲು ಸಾಧ್ಯವಾಗದೇ ಭಕ್ತರು ತವಣಿಸುತ್ತಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ವೈರಲ್ ಆಗಿದೆ. ಅದು ಲಕ್ಷಾಂತರ ಹಿಂದೂಗಳಿಗೆ ಆಶಾಭಾವ ಮೂಡಿಸಿದೆ.

ಹೌದು... 'Dip From Home' ಸೇವೆಯನ್ನು ಪ್ರಚಾರ ಮಾಡುವ ವಿಚಿತ್ರ ಪೋಸ್ಟರ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಜನದಟ್ಟಣೆಯ ಪ್ರಯಾಗ್‌ರಾಜ್ ನಗರಕ್ಕೆ ಪ್ರಯಾಣಿಸದೆಯೇ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಬಹುದು ಎಂದು ಜಾಹೀರಾತು ಸೂಚಿಸುತ್ತದೆ. ಹಾಗಂತ ಸಂಗಮದ ಪವಿತ್ರ ಜಲವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲ್ಲ.

ವೈರಲ್ ಆಗಿರುವ ಜಾಹೀರಾತಿನ ಪ್ರಕಾರ, ಈ ಸೇವೆ 500 ರೂ. ಶುಲ್ಕದಲ್ಲಿ ಲಭ್ಯವಿದೆ. ಈ ಸೇವೆಯಲ್ಲಿ ಆಸಕ್ತಿ ಹೊಂದಿರುವ ಭಕ್ತರು ತಮ್ಮ ಫೋಟೋವನ್ನು ವಾಟ್ಸಾಪ್ ಮೂಲಕ ಕಳುಹಿಸಬೇಕು. ನಂತರ ಅವರ ಫೋಟೋವನ್ನು ಪ್ರಿಂಟ್ ಹಾಕಿಸಿ ತ್ರಿವೇಣಿ ಸಂಗಮದ ಪವಿತ್ರ ನೀರಿನಲ್ಲಿ ಮುಳುಗಿಸಲಾಗುತ್ತದೆ ಎಂದು ಬರೆಯಲಾಗಿದೆ. ಈ ಮಹಾ ಕುಂಭ ಮೇಳವು 144 ವರ್ಷಗಳಿಗೊಮ್ಮೆ ನಡೆಯುವ ಅಪರೂಪದ ಕಾರ್ಯಕ್ರಮ ಎಂದು ಪೋಸ್ಟರ್‌ನಲ್ಲಿ ಒತ್ತಿ ಹೇಳಲಾಗಿದ್ದು, ಭಕ್ತರು ಈ ದೈವಿಕ ಆಚರಣೆಯಲ್ಲಿ ಭಾಗವಹಿಸಲು ಇದು 'ಕೊನೆಯ ಅವಕಾಶ' ಎಂದು ಬಣ್ಣಿಸಲಾಗಿದೆ. ಈ ಅವಕಾಶವನ್ನು ಕಳೆದುಕೊಳ್ಳದಂತೆ ಜನರನ್ನು ಪ್ರೋತ್ಸಾಹಿಸಲಾಗಿದೆ.

ಸಂದೇಹಗಳ ಹೊರತಾಗಿಯೂ, ಈ ವಿಶಿಷ್ಟ ಪರಿಕಲ್ಪನೆಯು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಗಮನ ಸೆಳೆದಿದೆ. ಈ ಅಸಾಂಪ್ರದಾಯಿಕ ಪರಿಕಲ್ಪನೆಯು ಜನರನ್ನು ವಿಭಜಿಸಿದೆ. ಕೆಲವರು ಇದನ್ನು ತಮಾಷೆಯೆಂದು ಹೇಳಿದರೆ, ಇನ್ನು ಕೆಲವರು ಅದರ ಸಿಂಧುತ್ವ ಮತ್ತು ಧಾರ್ಮಿಕ ಮಹತ್ವವನ್ನು ಪ್ರಶ್ನಿಸಿದರು. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಚಾರವನ್ನು ಅಪಹಾಸ್ಯ ಮಾಡಿ, ಅದನ್ನು 'ಮನೆಯಿಂದ ಕೆಲಸ' ಸಂಸ್ಕೃತಿಗೆ ಹೋಲಿಸಿದರು. ಆದರೆ ಇತರರು ಫೋಟೋಗಳನ್ನು ಡಿಪ್ ಮಾಡುವುದು ನಿಜವಾಗಿಯೂ ವೈಯಕ್ತಿಕ ಸಭೆಗೆ ಪರ್ಯಾಯವಾಗಬಹುದೇ ಎಂದು ಚರ್ಚಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

SCROLL FOR NEXT