ಮಹಾಕುಂಭ ಮೇಳದ ಚಿತ್ರ 
ದೇಶ

ಮಹಾಕುಂಭ 2025 ಯಶಸ್ಸು: 45 ದಿನಗಳಲ್ಲಿ 66 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ

ಕಳೆದ 45 ಪವಿತ್ರ ದಿನಗಳಲ್ಲಿ ಸಾಧು, ಸಂತರು ಸೇರಿದಂತೆ 66 ಕೋಟಿಗೂ ಅಧಿಕ ಭಕ್ತರು ಪವಿತ್ರ ತ್ರಿವೇಣಿಯಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.

ಪ್ರಯಾಗ್ ರಾಜ್: ಮಹಾಕುಂಭ 2025 ರ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಳೆದ 45 ಪವಿತ್ರ ದಿನಗಳಲ್ಲಿ 66 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿಯಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಫೋಸ್ಟ್ ಮಾಡಿದ್ದು, ಪ್ರಧಾನಮಂತ್ರಿಗಳೇ, ನಿಮ್ಮ ಯಶಸ್ವಿ ಮಾರ್ಗದರ್ಶನದ ಫಲವಾಗಿ ಭಕ್ತಿ ವೈಭವ್ಯ, ಭದ್ರತೆ, ಶುಚಿತ್ವ ಮತ್ತು ಉತ್ತಮ ಭದ್ರತೆ ನಿರ್ವಹಣೆಯ ಹೊಸ ಮಾನದಂಡಗಳ ಮೂಲಕ ‘ಏಕತೆ, ಸಮಾನತೆ, ಸಾಮರಸ್ಯದ ಮಹಾ ಯಾಗ’ ಮಹಾ ಕುಂಭ-2025 ಮುಕ್ತಾಯಗೊಂಡಿದೆ ಎಂದು ಹೇಳಿದ್ದಾರೆ.

ಕಳೆದ 45 ಪವಿತ್ರ ದಿನಗಳಲ್ಲಿ ಸಾಧು, ಸಂತರು ಸೇರಿದಂತೆ 66 ಕೋಟಿಗೂ ಅಧಿಕ ಭಕ್ತರು ಪವಿತ್ರ ತ್ರಿವೇಣಿಯಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

‘ಎಲ್ಲರೂ ಒಂದೇ’ಎಂಬ ಪವಿತ್ರ ಸಂದೇಶವನ್ನು ಇಡೀ ಜಗತ್ತಿಗೆ ಸಾರುವ ಈ ಮಾನವೀಯತೆಯ ಹಬ್ಬವು ‘ವಸುಧೈವ ಕುಟುಂಬಕಂ’ ಎಂಬ ಪವಿತ್ರ ಭಾವನೆಯೊಂದಿಗೆ ಇಡೀ ಜಗತ್ತನ್ನು ಒಂದುಗೂಡಿಸಿದೆ.

ನಿಮ್ಮ ಮಾರ್ಗದರ್ಶನ ಮತ್ತು ಶುಭ ಹಾರೈಕೆಗಳು ನಮಗೆಲ್ಲರಿಗೂ ಸದಾ ಹೊಸ ಚೈತನ್ಯವನ್ನು ನೀಡುತ್ತಿರಲಿ ಎಂದು ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ್ದಾರೆ. ಪ್ರಯಾಗ್ ರಾಜ್ ನಲ್ಲಿ 45 ದಿನಗಳಿಂದ ನಡೆದ ಮಹಾ ಕುಂಭ ಮೇಳ ಏಕತೆಯ ಮಹಾಯಜ್ಞ ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವರ್ಣಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ