ಭೋಪಾಲ್: ಭೋಪಾಲ್‌ನ ನಿಷ್ಕ್ರಿಯಗೊಂಡಿರುವ ಯೂನಿಯನ್ ಕಾರ್ಬೈಡ್ ಸ್ಥಾವರದ 40 ವರ್ಷಗಳಷ್ಟು ಹಳೆಯದಾದ 358 ಮೆಟ್ರಿಕ್ ಟನ್ ವಿಷಕಾರಿ ತ್ಯಾಜ್ಯವನ್ನು ದಹಿಸುವುದನ್ನು ವಿರೋಧಿಸಿ ಧಾರ್ ಜಿಲ್ಲೆಯ ಪಿತಾಂಪುರ್ ಕೈಗಾರಿಕಾ ಪಟ್ಟಣದಲ್ಲಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಮಧ್ಯಪ್ರದೇಶ ಸರ್ಕಾರ ಪಶ್ಚಿಮ ಎಂಪಿ ಕೈಗಾರಿಕಾ ಪಟ್ಟಣದ ಆತಂಕಗಳು, ಕಳವಳಗಳನ್ನು ನ್ಯಾಯಾಲಯಕ್ಕೆ ತಿಳಿಸಲು ನಿರ್ಧರಿಸಿದೆ.
“ನಮ್ಮ ಸರ್ಕಾರ ಸಾರ್ವಜನಿಕ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ಕಳೆದ ತಿಂಗಳ ಹೈಕೋರ್ಟ್ ಆದೇಶದ ಅನ್ವಯ ಯೂನಿಯನ್ ಕಾರ್ಬೈಡ್ ಘಟಕದ ವಿಷಕಾರಿ ತ್ಯಾಜ್ಯವನ್ನು ಪಿತಾಂಪುರದ ತ್ಯಾಜ್ಯ ವಿಲೇವಾರಿ ಕೇಂದ್ರಕ್ಕೆ ಸಾಗಿಸಲಾಗಿದ್ದು, ನಾಲ್ಕು ವಾರಗಳಲ್ಲಿ ತ್ಯಾಜ್ಯವನ್ನು ಸುರಕ್ಷಿತವಾಗಿ ಪಿತಾಂಪುರದ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ.
ಮುಂದಿನ ವಿಚಾರಣೆಯ ದಿನಾಂಕ ಜನವರಿ 6. ಸಾರ್ವಜನಿಕ ಕಳವಳಗಳು ಮತ್ತು ಆತಂಕಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಮುಂದಿನ ನ್ಯಾಯಾಲಯದ ಆದೇಶದವರೆಗೆ ತ್ಯಾಜ್ಯವನ್ನು ಸುಡದಿರಲು ನಿರ್ಧರಿಸಿದ್ದೇವೆ. ಸರ್ಕಾರ ಯೋಜಿತ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಸ್ಥಳೀಯ ನಿವಾಸಿಗಳ ಸಂಪೂರ್ಣ ಕಾಳಜಿ, ಭಾವನೆಗಳು ಮತ್ತು ಆತಂಕಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸುತ್ತದೆ ಮತ್ತು ಮುಂದಿನ ಕ್ರಮಕ್ಕಾಗಿ ಮುಂದಿನ ನ್ಯಾಯಾಲಯದ ಆದೇಶಕ್ಕಾಗಿ ಕಾಯಲಿದೆ ಎಂದು ಮಧ್ಯಪ್ರದೇಶ ಸಿಎಂ ಡಾ. ಮೋಹನ್ ಯಾದವ್ ಶುಕ್ರವಾರ ತಡರಾತ್ರಿ ಭೋಪಾಲ್‌ನಲ್ಲಿ ಈ ವಿಷಯದ ಕುರಿತು ಸರ್ಕಾರದ ಉನ್ನತಾಧಿಕಾರಿಗಳೊಂದಿಗಿನ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಹೇಳಿದರು.
2004 ರ ಡಿಸೆಂಬರ್ 3 ರಂದು ಭೋಪಾಲ್‌ನಿಂದ (ಯೋಜಿತ ವಿಲೇವಾರಿಗಾಗಿ) ವಿಷಕಾರಿ ತ್ಯಾಜ್ಯವನ್ನು ನಾಲ್ಕು ವಾರಗಳಲ್ಲಿ ಸ್ಥಳಾಂತರಿಸಲು 2004 ರಲ್ಲಿ ರಾಜ್ಯ ಸರ್ಕಾರಕ್ಕೆ ನೀಡಿದ್ದ ಆದೇಶಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಮಧ್ಯಪ್ರದೇಶ ಹೈಕೋರ್ಟ್ ಜನವರಿ 6 ರಂದು ನಡೆಸಲಿದೆ.
ಭೋಪಾಲ್‌ನಲ್ಲಿ ಶುಕ್ರವಾರ ತಡರಾತ್ರಿ ತುರ್ತು ಸಭೆ ನಡೆದ ಸುಮಾರು 11 ಗಂಟೆಗಳ ನಂತರ, 358 ಟನ್ ವಿಷಕಾರಿ ತ್ಯಾಜ್ಯವಿರುವ ಸಂಸ್ಕರಣೆ-ಶೇಖರಣೆ-ವಿಲೇವಾರಿ ಸೌಲಭ್ಯದ (ಟಿಎಸ್‌ಡಿಎಫ್) ಹೊರಗೆ ಶನಿವಾರ ಬೆಳಗ್ಗೆ ಸ್ಥಳೀಯ ನಿವಾಸಿಗಳು ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ.