ವಿರುಧುನಗರ: ಸತ್ತೂರು ಸಮೀಪದ ಬೊಮ್ಮಯ್ಯಪುರಂ ಗ್ರಾಮದಲ್ಲಿ ಶನಿವಾರ ಪಟಾಕಿ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ಸಾಯಿನಾಥ್ ಪಟಾಕಿ ಘಟಕದಲ್ಲಿ ಬೆಳಗ್ಗೆ ಕಾರ್ಮಿಕರು ಪಟಾಕಿ ತಯಾರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಮಾಹಿತಿ ಮೇರೆಗೆ ವಿರುಧುನಗರ, ಸತ್ತೂರು ಮತ್ತು ಅರುಪ್ಪುಕೊಟ್ಟೈನಿಂದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಪ್ರಸ್ತುತ, ಆರು ಪುರುಷರ ಶವಗಳನ್ನು ಹೊರತೆರೆಯಲಾಗಿದ್ದು ಅವರ ಗುರುತು ಇನ್ನೂ ಪತ್ತೆಯಾಗಿಲ್ಲ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿರುಧುನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ರಕ್ಷಣಾ ಸೇವೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಈ ವರ್ಷ ಸಂಭವಿಸಿದ ಮೊದಲ ಪಟಾಕಿ ಅವಘಡ ಇದಾಗಿದೆ.