ಹೈದರಾಬಾದ್: ಮತಾಂತರಕ್ಕಾಗಿ ಗ್ರಾಮಕ್ಕೆ ಬಂದ ಮಂದಿಗೆ ಗ್ರಾಮಸ್ಥರು ಸಗಣಿ ನೀರೆರಚಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ತೆಲಂಗಾಣದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು. ಶಿಲ್ಪಾ ಎನ್ನುವವರು ಈ ವಿಡಿಯೋವನ್ನು ತಮ್ಮ @shilpa_cn ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿರುವಂತೆ ಗೂಡ್ಸ್ ಆಟೋದಲ್ಲಿ ಪುರುಷರ ತಂಡವೊಂದು ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರನ್ನು ಮತಾಂತರ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಇದಕ್ಕೆ ಕೆಲ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ಮತಾಂತರಕ್ಕೆ ಬಂದವರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.
ನಂತರ ಕೆಲವರು ಮನೆಯ ಕೊಟ್ಟಿಗೆಗೆ ತೆರಳಿ ಅಲ್ಲಿದ್ದ ಹಸುವಿನ ಸಗಣಿ ತೆಗೆದುಕೊಂಡು ನೀರಿಗೆ ಹಾಕಿ ಆ ಸಗಣಿ ನೀರನ್ನು ಮತಾಂತರಕ್ಕೆ ಬಂದವರ ಮೇಲೆ ಮತ್ತು ವಾಹನದ ಮೇಲೆ ಎರಚಿದ್ದಾರೆ. ಅಲ್ಲದೆ ಮತಾಂತರ ಗೊಳ್ಳದಂತೆ ಗ್ರಾಮಸ್ಥರಿಗೆ ಮನವಿ ಮಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಘಟನೆ ತೆಲಂಗಾಣದ ಹಳ್ಳಿಯೊಂದರಲ್ಲಿ ನಡೆದಿದೆ ಎನ್ನಲಾಗಿದೆ. ಆದ್ರೆ ಯಾವ ಊರು ಅನ್ನೋದ್ರ ಬಗೆ ಮಾಹಿತಿ ಇಲ್ಲ. ಎಕ್ಸ್ ಬಳಕೆದಾರರು ವಿಡಿಯೋವನ್ನ ಶೇರ್ ಮಾಡಿದ್ದು, ಈ ವಿಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ. ನೆಟ್ಟಿಗರು ಕಮೆಂಟ್ಸ್ ಸುರಿಮಳೆಗೈದಿದ್ದಾರೆ.
ಓರ್ವ ಬಳಕೆದಾರ ಈ ವಿಡಿಯೋ ಆಂಧ್ರ ಪ್ರದೇಶದಲ್ಲಿ ನಡೆದಿದ್ದು, ಆಗ ಜಗನ್ ಮೋಹನ್ ರೆಡ್ಡಿ ಸಿಎಂ ಆಗಿದ್ದರು. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ ಒಂದು ವಾರದವರೆಗೆ ಅಜ್ಞಾತ ಸ್ಥಳದಲ್ಲಿರಿಸಲಾಗಿತ್ತು. ಈ ಘಟನೆಯಿಂದ ಅವರ ಕುಟುಂಬ ಸಾಕಷ್ಟು ತೊಂದರೆಗೊಳಗಾಗಿತ್ತು ಎಂದು ಕಮೆಂಟ್ ಮಾಡಿದ್ದಾರೆ.