ಮಾರ್ಕ್ ಝುಕರ್ಬರ್ಗ್- ಅಶ್ವಿನಿ ವೈಷ್ಣವ್ online desk
ದೇಶ

Facebook ಸ್ಥಾಪಕ ಝುಕರ್ಬರ್ಗ್ ಹೇಳಿಕೆಗೆ Ashwini Vaishnaw fact check; ಕೇಂದ್ರ ಸಚಿವರಿಂದ ಭರ್ಜರಿ ಕೌಂಟರ್!

ಈ ಮಾಹಿತಿಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ fact check ಮಾಡಿದ್ದು, ಝುಕರ್ಬರ್ಗ್ ನೀಡಿರುವ ಹೇಳಿಕೆ ವಾಸ್ತವಿಕವಾಗಿ ತಪ್ಪಾಗಿದೆ ಎಂದು ಭರ್ಜರಿ ಕೌಂಟರ್ ನೀಡಿದ್ದಾರೆ.

ನವದೆಹಲಿ: ಯಾವುದಾದರೂ ವೈರಲ್ ಸುದ್ದಿಯನ್ನು ನೀವು ಸಾಮಾಜಿಕ ಜಾಲತಣಾಗಳಲ್ಲಿ ಹಂಚಿಕೊಂಡು ಒಂದು ವೇಳೆ ಅದು ಸುಳ್ಳು ಎಂಬುದಾದರೆ facebook ಅದರ ಸತ್ಯಾಸತ್ಯತೆ ಪರಿಶೀಲಿಸುವ ವ್ಯವಸ್ಥೆಯನ್ನು ಹೊಂದಿದೆ. ಆದರೆ ಫೇಸ್ ಬುಕ್ ಸಂಸ್ಥಾಪಕರೇ ಸುಳ್ಳು ಸುದ್ದಿಯನ್ನು ನಂಬಿದ್ದರಾ? ಎಂಬ ಪ್ರಶ್ನೆ ಮೂಡುವಂತೆ ಮಾಡುತ್ತಿದೆ ಈ ಘಟನೆ

ಆಗಿದ್ದು ಇಷ್ಟು. ಕೊರೋನ ನಂತರದ ವರ್ಷಗಳಲ್ಲಿ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ 2024 ರಲ್ಲಿ ಅಧಿಕಾರದಲ್ಲಿದ್ದ ಪಕ್ಷಗಳು ಅಧಿಕಾರ ಕಳೆದುಕೊಂಡವು ಎಂದು ಮಾರ್ಕ್ ಝುಕರ್ಬರ್ಗ್ ಹೇಳಿದ್ದರು.

ಈ ಮಾಹಿತಿಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ fact check ಮಾಡಿದ್ದು, ಝುಕರ್ಬರ್ಗ್ ನೀಡಿರುವ ಹೇಳಿಕೆ ವಾಸ್ತವಿಕವಾಗಿ ತಪ್ಪಾಗಿದೆ ಎಂದು ಭರ್ಜರಿ ಕೌಂಟರ್ ನೀಡಿದ್ದಾರೆ.

X ನಲ್ಲಿ ಪೋಸ್ಟ್ ಮಾಡಿರುವ ವೈಷ್ಣವ್, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ 2024 ರ ಸಾರ್ವತ್ರಿಕ ಚುನಾವಣೆಯನ್ನು 640 ಮಿಲಿಯನ್ (64 ಕೋಟಿ) ಕ್ಕೂ ಹೆಚ್ಚು ಮತದಾರರೊಂದಿಗೆ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ NDA ಯಲ್ಲಿ ನಂಬಿಕೆ ಹೊಂದಿರುವುದಾಗಿ ಭಾರತದ ಜನರು 2024 ರಲ್ಲಿ ತೀರ್ಪು ನೀಡಿದ್ದಾರೆ ಎಂದು ಅಶ್ವಿನಿ ವೈಷ್ಣವ್ ವಾಸ್ತವಾಂಶವನ್ನು ಬಿಚ್ಚಿಟ್ಟಿದ್ದಾರೆ.

"2024 ರ ಚುನಾವಣೆಗಳಲ್ಲಿ ಭಾರತ ಸೇರಿದಂತೆ ಹೆಚ್ಚಿನ ಅಧಿಕಾರದಲ್ಲಿರುವ ಸರ್ಕಾರಗಳು ಕೋವಿಡ್ ನಂತರ ಸೋತವು ಎಂಬ ಶ್ರೀ ಜುಕರ್‌ಬರ್ಗ್ ಅವರ ಹೇಳಿಕೆ ವಾಸ್ತವಿಕವಾಗಿ ತಪ್ಪಾಗಿದೆ" ಎಂದು ಮಾಹಿತಿ ಮತ್ತು ಪ್ರಸಾರ ಸಚಿವರು ಗಮನಿಸಿದರು.

"800 ಮಿಲಿಯನ್‌ಗೆ ಉಚಿತ ಆಹಾರ, 2.2 ಬಿಲಿಯನ್ ಉಚಿತ ಲಸಿಕೆಗಳು ಮತ್ತು ಕೋವಿಡ್ ಸಮಯದಲ್ಲಿ ವಿಶ್ವಾದ್ಯಂತ ರಾಷ್ಟ್ರಗಳಿಗೆ ಸಹಾಯದಿಂದ ಹಿಡಿದು, ಭಾರತವನ್ನು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುನ್ನಡೆಸುವವರೆಗೆ, ಪ್ರಧಾನಿ ಮೋದಿಯವರ ನಿರ್ಣಾಯಕ 3 ನೇ ಅವಧಿಯ ಗೆಲುವು ಉತ್ತಮ ಆಡಳಿತ ಮತ್ತು ಸಾರ್ವಜನಿಕ ನಂಬಿಕೆಗೆ ಸಾಕ್ಷಿಯಾಗಿದೆ" ಎಂದು ವೈಷ್ಣವ್ ಪ್ರತಿಪಾದಿಸಿದರು.

ಮೆಟಾವನ್ನು ಟ್ಯಾಗ್ ಮಾಡಿದ ಅವರು, ಜುಕರ್‌ಬರ್ಗ್ ಅವರಿಂದಲೇ ತಪ್ಪು ಮಾಹಿತಿಯನ್ನು ನೋಡುವುದು "ನಿರಾಶಾದಾಯಕ" ಎಂದು ಕುಟುಕಿದ್ದಾರೆ. "ಸತ್ಯಗಳು ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯೋಣ" ಎಂದು ವೈಷ್ಣವ್ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT