ದೆಹಲಿಯ ಅಕ್ಬರ್ 
ದೇಶ

'24 ಅಕ್ಬರ್ ರಸ್ತೆ' ಇನ್ನು ಇತಿಹಾಸ: ದೆಹಲಿಯಲ್ಲಿ ನೂತನ ಕಾಂಗ್ರೆಸ್ ಪ್ರಧಾನ ಕಚೇರಿ ಇಂದು ಉದ್ಘಾಟನೆ

ಈ ಕ್ಷಣವು ಪಕ್ಷದ ಇತಿಹಾಸದಲ್ಲಿ ಮಹತ್ವದ ಕ್ಷಣಗಳನ್ನು ನೆನಪಿಸುತ್ತದೆ. ನಲವತ್ತೇಳು ವರ್ಷಗಳ ಹಿಂದೆ, ತುರ್ತು ಪರಿಸ್ಥಿತಿಯ ನಂತರ ಇಂದಿರಾ ಗಾಂಧಿಯವರ ಜೊತೆ ನಿಂತಿದ್ದ ಕೆಲವೇ ಕೆಲವು ನಿಷ್ಠಾವಂತರು ಸರ್ಕಾರಿ ವಸತಿಗೃಹ ಅಕ್ಬರ್ ರಸ್ತೆಯಲ್ಲಿರುವ ಟೈಪ್ VII ಬಂಗಲೆಗೆ ವರ್ಗಾವಣೆಗೊಂಡಿದ್ದರು.

ನವದೆಹಲಿ: ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ನ ಹೊಸ ಪ್ರಧಾನ ಕಚೇರಿ ಇಂದು ಬುಧವಾರ ದೆಹಲಿಯ ಕೋಟ್ಲಾ ರಸ್ತೆಯಲ್ಲಿರುವ ಇಂದಿರಾ ಗಾಂಧಿ ಭವನಕ್ಕೆ ಸ್ಥಳಾಂತರಗೊಳ್ಳುತ್ತಿದ್ದಂತೆ ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗುತ್ತಿದೆ.

ಈ ಕ್ಷಣವು ಪಕ್ಷದ ಇತಿಹಾಸದಲ್ಲಿ ಮಹತ್ವದ ಕ್ಷಣಗಳನ್ನು ನೆನಪಿಸುತ್ತದೆ. ನಲವತ್ತೇಳು ವರ್ಷಗಳ ಹಿಂದೆ, ತುರ್ತು ಪರಿಸ್ಥಿತಿಯ ನಂತರ ಇಂದಿರಾ ಗಾಂಧಿಯವರ ಜೊತೆ ನಿಂತಿದ್ದ ಕೆಲವೇ ಕೆಲವು ನಿಷ್ಠಾವಂತರು ಸರ್ಕಾರಿ ವಸತಿಗೃಹ ಅಕ್ಬರ್ ರಸ್ತೆಯಲ್ಲಿರುವ ಟೈಪ್ VII ಬಂಗಲೆಗೆ ವರ್ಗಾವಣೆಗೊಂಡಿದ್ದರು.

ನಂತರದ ವರ್ಷಗಳಲ್ಲಿ, ಈ ಬ್ರಿಟಿಷ್ ಯುಗದ ಆಸ್ತಿ ಕಾಂಗ್ರೆಸ್ ಪಕ್ಷದ ಉತ್ತುಂಗ ಮತ್ತು ಪತನಕ್ಕೆ ಸಾಕ್ಷಿಯಾಗಿದೆ. ಇದು ಕಾಂಗ್ರೆಸ್‌ನ ಪುನರುತ್ಥಾನ, ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೆ ಬಂದಿದ್ದು, ಅವರ ಮಗ ಸಂಜಯ್ ಗಾಂಧಿಯ ಸಾವು, ಇಂದಿರಾ ಗಾಂಧಿ ಹತ್ಯೆ, ರಾಜೀವ್ ಗಾಂಧಿ ಚಿಕ್ಕ ವಯಸ್ಸಿನಲ್ಲಿಯೇ ಪ್ರಧಾನಿ ಹುದ್ದೆಗೆ ಕಾಲಿಟ್ಟಿದ್ದು, ನಂತರ ಅವರ ಹತ್ಯೆ ಮತ್ತು 1991, 2004 ಮತ್ತು 2009 ರಲ್ಲಿ ಮೈತ್ರಿ ಸರ್ಕಾರಗಳನ್ನು ಮುನ್ನಡೆಸಿದ್ದರಿಂದ ನಂತರದ ವರ್ಷಗಳಲ್ಲಿ ಕಾಂಗ್ರೆಸ್ ಕ್ರಮೇಣ ತನ್ನ ನೆಲೆಯನ್ನು ಮರಳಿ ಪಡೆದಿದ್ದು ಹೀಗೆ ಐತಿಹಾಸಿಕ ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿತ್ತು.

ಈ ಆಸ್ತಿ ಸುಮಾರು 100 ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಸ್ವಾತಂತ್ರ್ಯದ ಮೊದಲು, ವೈಸರಾಯ್ ಲಾರ್ಡ್ ಲಿನ್ಲಿತ್‌ಗೋ ಅವರ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಸರ್ ರೆಜಿನಾಲ್ಡ್ ಮ್ಯಾಕ್ಸ್‌ವೆಲ್ ಇಲ್ಲಿ ವಾಸಿಸುತ್ತಿದ್ದರು.

1960 ರ ದಶಕದಲ್ಲಿ, ಈ ಬಂಗಲೆ ಬರ್ಮಾದ ರಾಯಭಾರಿಯ ನಿವಾಸ ಆಗಿತ್ತು, ಅಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆಂಗ್ ಸಾನ್ ಸೂ ಕಿ ತಮ್ಮ ಹದಿಹರೆಯದ ಆರಂಭಿಕ ವರ್ಷಗಳನ್ನು ಕಳೆದರು. ಅವರ ತಾಯಿ ಡಾ ಖಿನ್ ಕಿ ಅವರನ್ನು ಭಾರತಕ್ಕೆ ಬರ್ಮಾ ರಾಯಭಾರಿಯಾಗಿ ನೇಮಿಸಲಾಯಿತು.

ಪತ್ರಕರ್ತ ಮತ್ತು ರಾಜಕೀಯ ನಿರೂಪಕ ರಶೀದ್ ಕಿದ್ವಾಯಿ ಅವರು ತಮ್ಮ ಪುಸ್ತಕ 24, ಅಕ್ಬರ್ ರೋಡ್: ಎ ಶಾರ್ಟ್ ಹಿಸ್ಟರಿ ಆಫ್ ದಿ ಪೀಪಲ್ ಬಿಹೈಂಡ್ ದಿ ರೈಸ್ ಅಂಡ್ ಫಾಲ್ ಆಫ್ ಕಾಂಗ್ರೆಸ್‌ನಲ್ಲಿ, ಬಂಗಲೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಒಂದು ಐಕಾನಿಕ್ ಸ್ಥಳವಾಗಿ ಹೇಗೆ ಆಯ್ಕೆ ಮಾಡಲಾಯಿತು ಮತ್ತು ಅಲ್ಲಿ ನಡೆದ ಮಹತ್ವದ ಘಟನೆಗಳನ್ನು ವಿವರಿಸುತ್ತಾರೆ.

ದೆಹಲಿಯ ಅಕ್ಬರ್ ರಸ್ತೆಯ ಆಸ್ತಿಯನ್ನು ಆಂಧ್ರಪ್ರದೇಶದ ರಾಜ್ಯಸಭಾ ಸಂಸದ ಜಿ. ವೆಂಕಟಸ್ವಾಮಿಗೆ ನೀಡಲಾಯಿತು, ಅವರು 1977 ರ ಚುನಾವಣೆಯ ನಂತರ ಇಂದಿರಾ ಗಾಂಧಿಯವರೊಂದಿಗೆ ಇರಲು ಆಯ್ಕೆ ಮಾಡಿಕೊಂಡರು, ಆಗ ಅವರ ಹೆಚ್ಚಿನ ಸಹೋದ್ಯೋಗಿಗಳು ಅವರನ್ನು ಬಿಟ್ಟು ಹೋದರು.

ಸಂಪನ್ಮೂಲಗಳು ಮತ್ತು ಕಚೇರಿ ಸ್ಥಳವಿಲ್ಲದೆ ಉಳಿದುಕೊಂಡ ಇಂದಿರಾ ಗಾಂಧಿಯವರು, ತಮ್ಮ ಪಕ್ಷದ ಕಚೇರಿಯನ್ನು ಅಂದಿನ ಅವ್ಯವಸ್ಥ ಸ್ಥಿತಿಯಲ್ಲಿಯೇ ಮುನ್ನಡೆಸಿದರು. ಭಾರತೀಯ ವಾಯುಪಡೆಯ ಮುಖ್ಯಸ್ಥರ ನಿವಾಸ ಮತ್ತು ಗುಪ್ತಚರ ಬ್ಯೂರೋದ ರಾಜಕೀಯ ಕಣ್ಗಾವಲು ಘಟಕ (ಇದು ಇನ್ನೂ ಅಸ್ತಿತ್ವದಲ್ಲಿದೆ) ಎದುರು, ಇದು ಐದು ಸುಸಜ್ಜಿತ ಮಲಗುವ ಕೋಣೆಗಳು, ಒಂದು ವಾಸದ ಕೋಣೆ, ಒಂದು ಊಟದ ಹಾಲ್ ಮತ್ತು ಅತಿಥಿ ಕೋಣೆಯನ್ನು ಒಳಗೊಂಡಿತ್ತು.

ಬಿಹಾರದ ಕಟಿಹಾರ್‌ನ ಕಾಂಗ್ರೆಸ್ ಸಂಸದ ತರೀಕ್ ಅನ್ವರ್ ಆರಂಭಿಕ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಕಾಂಗ್ರೆಸ್ ವಿಭಜನೆಯ ನಂತರ, 24, ಅಕ್ಬರ್ ರಸ್ತೆಯನ್ನು ತಾತ್ಕಾಲಿಕ ಕಚೇರಿಯಾಗಿ ಪ್ರಾರಂಭಿಸಲಾಗಿತ್ತು, ಗಾಂಧಿ ಕುಟುಂಬದ ನಾಲ್ಕು ತಲೆಮಾರುಗಳೊಂದಿಗೆ ಕೆಲಸ ಮಾಡಿದ ಅನ್ವರ್, ಇಂದಿರಾ ಗಾಂಧಿ ನಿಯಮಿತವಾಗಿ ಕಚೇರಿಗೆ ಬರುತ್ತಿದ್ದರು. ನಾನು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಕೆಲಸ ಮಾಡಿದ್ದೇನೆ. ಇಂದಿರಾ ಗಾಂಧಿಯವರು ಯಾವಾಗಲೂ ಯುವ ನಾಯಕರಿಗೆ ಪ್ರಾಮುಖ್ಯತೆ ನೀಡುತ್ತಿದ್ದರು. 1980 ರಲ್ಲಿ ಅವರು ಪ್ರಧಾನಿಯಾದ ನಂತರ, ಸಂಸದನಾದ ನಂತರ ಅವರೊಂದಿಗೆ ಸಂವಹನ ನಡೆಸಲು ನನಗೆ ಹೆಚ್ಚಿನ ಅವಕಾಶಗಳು ಸಿಕ್ಕವು. 24, ಅಕ್ಬರ್ ರಸ್ತೆಯಲ್ಲಿ ಪಕ್ಷದ ಕಚೇರಿಯಲ್ಲಿ ಅನೇಕ ಏರಿಳಿತಗಳನ್ನು ನಾನು ನೋಡಿದ್ದೇನೆ ಕಚೇರಿಗೆ ಸಾಕಷ್ಟು ನೆನಪುಗಳಿವೆ.

ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ, ಪಕ್ಷದ ಪ್ರಧಾನ ಕಚೇರಿಯನ್ನು ಡಾ. ರಾಜೇಂದ್ರ ಪ್ರಸಾದ್ ರಸ್ತೆಯಲ್ಲಿರುವ ಆಧುನಿಕ ಕಚೇರಿಗೆ ಸ್ಥಳಾಂತರಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು ಎಂದು ಕಿದ್ವಾಯ್ ಅವರ ಪುಸ್ತಕವು ಮತ್ತಷ್ಟು ಉಲ್ಲೇಖಿಸುತ್ತದೆ.

1991 ರಲ್ಲಿ ರಾಜೀವ್ ಗಾಂಧಿಯವರ ಹಠಾತ್ ಮರಣದ ನಂತರ ಈ ಯೋಜನೆ ಎಂದಿಗೂ ಕಾರ್ಯರೂಪಕ್ಕೆ ಬರಲಿಲ್ಲ. ನಂತರದ ವರ್ಷಗಳಲ್ಲಿ, ಬೆಳೆಯುತ್ತಿರುವ ಪಕ್ಷದ ಕಾರ್ಯಕರ್ತರಿಗೆ ವಸತಿ ಕಲ್ಪಿಸಲು ಆಸ್ತಿಗೆ ಹಲವಾರು ಸೇರ್ಪಡೆಗಳನ್ನು ಮಾಡಲಾಯಿತು. ಇಂದು, 24 ಅಕ್ಬರ್ ರಸ್ತೆಯ ಕಾಂಗ್ರೆಸ್ ಕಚೇರಿ ಸುಮಾರು 30 ಕೊಠಡಿಗಳನ್ನು ಹೊಂದಿದ್ದು, ಅವುಗಳನ್ನು ಮೂಲ ರಚನೆಯ ಹಿಂದೆ ಸೇರಿಸಲಾಗಿದೆ.

ದೆಹಲಿಯ ಚಾಂದನಿ ಚೌಕ್‌ನ ಮಾಜಿ ಸಂಸದ ಮತ್ತು ಯುವ ಕಾಂಗ್ರೆಸ್ ಪದಾಧಿಕಾರಿ ಜೈ ಪ್ರಕಾಶ್ ಅಗರ್ವಾಲ್ ಅವರು ಪ್ರಧಾನ ಕಚೇರಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದೆ ಎಂದು ನೆನಪಿಸಿಕೊಳ್ಳುತ್ತಾರೆ. ಕಾಲಾನಂತರದಲ್ಲಿ ಕಾಂಗ್ರೆಸ್‌ನ ಅದೃಷ್ಟ ಸುಧಾರಿಸಿದಂತೆ, ಪಕ್ಷವು ವಿಸ್ತರಿಸಿತು. ಆಸ್ತಿಯಲ್ಲಿ ಅನೇಕ ಬದಲಾವಣೆಗಳಾದವು. ಮುಖ್ಯ ಕಟ್ಟಡವು ಕಾಂಗ್ರೆಸ್ ಅಧ್ಯಕ್ಷರು ಮತ್ತು ಹಿರಿಯ ಕಾರ್ಯಕರ್ತರ ಕಚೇರಿಯನ್ನು ಹೊಂದಿದೆ. ಹಿಂಭಾಗದಲ್ಲಿರುವ ಕೊಠಡಿಗಳನ್ನು ಈಗ ಇತರ ಪದಾಧಿಕಾರಿಗಳಿಗೆ ನೀಡಲಾಗಿದೆ.

ಇಂದು ಕೋಟ್ಲಾ ರಸ್ತೆಯಲ್ಲಿರುವ ಹೊಸ ಪಕ್ಷದ ಕಚೇರಿಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಉದ್ಘಾಟಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT