ಇಂಟಿಗ್ರೇಟೆಡ್ ಕಂಟ್ರೋಲ್ ಕಮಾಂಡ್ ಸೆಂಟರ್ 
ದೇಶ

Maha Kumbh Mela 2025: ಕೋಟ್ಯಂತರ ಜನ ಸೇರಿದರೂ ಸುಗಮ ಜನದಟ್ಟಣೆ ನಿರ್ವಹಣೆ! ಇದೇ ಕಾರಣ

ಇದೇ ಮೊದಲ ಬಾರಿಗೆ ಜನದಟ್ಟಣೆ ನಿರ್ವಹಣೆ AI ಆಧಾರಿತ ತಂತ್ರಜ್ಞಾನ ಜನ ದಟ್ಟಣೆ ನಿರ್ವಹಣೆ ಮಾಡಲಾಗುತ್ತಿದೆ ಎಂದು ಐಸಿಸಿಸಿ ಉಸ್ತುವಾರಿ ಪೊಲೀಸ್ ಅಧೀಕ್ಷಕ ಅಮಿತ್ ಕುಮಾರ್ ತಿಳಿಸಿದರು.

ಮಹಾಕುಂಭ ನಗರ: 10,000 ಎಕರೆಗಳಷ್ಟು ವಿಸ್ತಾರವಾದ ತಾತ್ಕಾಲಿಕ ನಗರದಲ್ಲಿ ಒಂದು ಕೋಟಿಗೂ ಅಧಿಕ ಯಾತ್ರಿಕರು, ಸ್ವಾಮೀಜಿಗಳು ತಂಗಿದ್ದು, ಸುಮಾರು 20 ಲಕ್ಷ ಜನರು ಪ್ರತಿದಿನ ಭೇಟಿ ನೀಡುತ್ತಿದ್ದಾರೆ. ಇಲ್ಲಿನ ಇಂಟಿಗ್ರೇಟೆಡ್ ಕಂಟ್ರೋಲ್ ಕಮಾಂಡ್ ಸೆಂಟರ್ ((ICCI)) ನಿರಂತರ ನಿಗಾ ವಹಿಸುವ ಮೂಲಕ ಸುಗಮ ಜನದಟ್ಟಣೆ ನಿರ್ವಹಣೆ ಖಾತ್ರಿಗೆ ಹದ್ದಿನ ಕಣ್ಣಿಟ್ಟಿದೆ.

3,000 ಕ್ಕೂ ಹೆಚ್ಚು ಕ್ಯಾಮೆರಾಗಳು: ನಾಲ್ಕು ಇಂಟಿಗ್ರೇಟೆಡ್ ಕಂಟ್ರೋಲ್ ಕಮಾಂಡ್ ಸೆಂಟರ್‌ಗಳಲ್ಲಿ (ICCI) ತಲಾ 400 ಕ್ಕೂ ಹೆಚ್ಚು ಜನರು ನೇರಾ ದೃಶಾವಳಿ ಪ್ರದರ್ಶನದ (Displaying Live Footage) ದೊಡ್ಡ ಪರದೆಗಳು ಮತ್ತು ಹಾಟ್ ಸ್ಪಾಟ್ ಗಳಿಂದ ಮಾಹಿತಿಯನ್ನು ಸದಾ ವೀಕ್ಷಿಸುತ್ತಾ, ಜನದಟ್ಟಣೆ ಮತ್ತು ಬರುವ ಯಾತ್ರಿಗಳ ಕುರಿತು ಸಿಬ್ಬಂದಿಗೆ ಮಾಹಿತಿ ನೀಡುತ್ತಾರೆ. 3,000 ಕ್ಕೂ ಹೆಚ್ಚು ಕ್ಯಾಮೆರಾಗಳು, ನೀರೊಳಗಿನ ಡ್ರೋನ್‌ಗಳ ಮೂಲಕ ವಿಶೇಷ ನಿಗಾ ವಹಿಸಲಾಗಿದೆ.

ಏಳು ಕೋಟಿಗೂ ಹೆಚ್ಚು ಭಕ್ತರ ಸ್ನಾನ: ಪ್ರತಿ 12 ವರ್ಷಗಳಿಗೊಮ್ಮೆ ಆಯೋಜಿಸುವ ಬೃಹತ್ ಧಾರ್ಮಿಕ ಕಾರ್ಯಕ್ರಮ ಜನವರಿ 13 ರಿಂದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದ್ದು, 45 ದಿನಗಳವರೆಗೆ ಮುಂದುವರಿಯುತ್ತದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ಸಂಗಮದಲ್ಲಿ ಇದುವರೆಗೆ ಏಳು ಕೋಟಿಗೂ ಹೆಚ್ಚು ಯಾತ್ರಿಕರು ಪವಿತ್ರ ಸ್ನಾನ ಮಾಡಿದ್ದಾರೆ.

AI ಆಧಾರಿತ ತಂತ್ರಜ್ಞಾನ: ಪಿಟಿಐ ಸುದ್ದಿಸಂಸ್ಥೆಯ ವರದಿಗಾರರೊಬ್ಬರು ಪ್ರಮುಖ ICCI ನಲ್ಲಿ ಒಂದು ದಿನ ಒಂದು ದಿನ ಕಳೆದಿದ್ದು, ಭದ್ರತೆ, ಜನದಟ್ಟಣೆ ನಿರ್ವಹಣೆ, ಅಪರಾಧ ತಡೆಗಟ್ಟುವಿಕೆಗೆ ನಿಗಾ ವಹಿಸುವುದು ಸೇರಿದಂತೆ ಅದರ ಆಂತರಿಕ ಕಾರ್ಯಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಜನದಟ್ಟಣೆ ನಿರ್ವಹಣೆ AI ಆಧಾರಿತ ತಂತ್ರಜ್ಞಾನ ಜನ ದಟ್ಟಣೆ ನಿರ್ವಹಣೆ ಮಾಡಲಾಗುತ್ತಿದೆ ಎಂದು ಐಸಿಸಿಸಿ ಉಸ್ತುವಾರಿ ಪೊಲೀಸ್ ಅಧೀಕ್ಷಕ ಅಮಿತ್ ಕುಮಾರ್ ತಿಳಿಸಿದರು.

ಪ್ರಯಾಗ್ ರಾಜ್ ನಗರದಾದ್ಯಂತ 3,000 ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ. ಅದರಲ್ಲಿ 1,800 AI ಆಧಾರಿತ ಕ್ಯಾಮರಾಗಳಾಗಿವೆ. ಊಹೆ ಮೇಲೆ ಯಾವುದೇ ಕೆಲಸ ಮಾಡುತ್ತಿಲ್ಲ. ಎಲ್ಲಾವೂ ನೈಜ ಸಮಯದ ಮಾಹಿತಿಯನ್ನು ಸೆರೆಹಿಡಿಯುತ್ತಿವೆ. ಒಂದು ನಿರ್ದಿಷ್ಟ ಜಾಗದಲ್ಲಿ ಜನಸಂದಣಿಯು ಮಿತಿಗಿಂತ ಹೆಚ್ಚಾದಾಗ ಪರದೆ ಮೇಲೆ ಎಚ್ಚರಿಕೆಯ ಸಂದೇಶ ಬರುತ್ತದೆ. ಮಾಹಿತಿಯನ್ನು ವೈರ್‌ಲೆಸ್ ಗ್ರಿಡ್‌ಗಳಿಗೆ ತಿಳಿಸಲಾಗುತ್ತದೆ. ಈ ಹಂತದಲ್ಲಿ ಮೈದಾನದಲ್ಲಿರುವ ತಂಡಗಳು ಕಾರ್ಯಪ್ರವೃತ್ತವಾಗುತ್ತವೆ ಎಂದು ಅವರು ಹೇಳಿದರು.

ಸಹಾಯವಾಣಿ ಮೂಲಕ ದೂರು-ಮಾಹಿತಿ: ಜನದಟ್ಟಣೆ ಮಿತಿ ಮೀರಿದಾಗ ಅಥವಾ ಬೆಂಕಿ ಉಂಟಾದಾಗಲೂ ಎಚ್ಚರಿಕೆ ಸಂಕೇತ ಬರುತ್ತದೆ. ನಿರಂತರವಾಗಿ ಜನರ ಮೇಲೆ ಮೇಲ್ವಿಚಾರಣೆ ಮಾಡಲು ತಲಾ 10-ಗಂಟೆಗಳ ಪಾಳಿಯಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಸಹಾಯವಾಣಿಯಲ್ಲಿ ಹಾಜರಾಗಿ ಯಾತ್ರಾರ್ಥಿಗಳಿಂದ ದೂರುಗಳು ಮತ್ತು ಮಾಹಿತಿಯನ್ನು ನೀಡಲಾಗುತ್ತಿದೆ. ಸಹಾಯವಾಣಿಯನ್ನು ಪೊಲೀಸ್ ಸಹಾಯವಾಣಿ, ಮಹಿಳಾ ಸಹಾಯವಾಣಿ, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಗಳೊಂದಿಗೆ ಸಂಯೋಜಿಸಲಾಗಿದೆ ಎಂದು ICCI ನಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ತಿಳಿಸಿದರು.

56 ಪೊಲೀಸ್ ಠಾಣೆ, 60,000 ಪೊಲೀಸರ ನಿಯೋಜನೆ: ಮಹಾ ಕುಂಭದಲ್ಲಿ ನಾಲ್ಕು ICCCಗಳು ಕಾರ್ಯನಿರ್ವಹಿಸುತ್ತಿವೆ. ಸುರಕ್ಷತೆಗಾಗಿ 60,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು 56 ಪೊಲೀಸ್ ಠಾಣೆಗಳು ಸ್ಥಾಪಿಸಲಾಗಿದೆ. ಕುಂಭ ಮೇಳ ಆವರಣದಲ್ಲಿನ ಘಾಟ್ ಗಳು ಮತ್ತಿತರ ಪ್ರದೇಶ ಅಲ್ಲದೇ 30 ತೇಲುವ ಸೇತುಗಳು, ಆಗಮನ ಮತ್ತು ನಿರ್ಗಮನ ಗೇಟ್ ಗಳ ಮೇಲೂ ಕ್ಯಾಮರಾದ ಮೂಲಕ ನಿಗಾ ವಹಿಸಲಾಗಿದೆ.

ರೈಲ್ವೆ ಮತ್ತು ರಸ್ತೆ ಮೂಲಕ ಬರುವ ಯಾತ್ರಿಕರ ಬಗ್ಗೆ ಮಾಹಿತಿ ಪಡೆಯಲು ಸಂಬಂಧಿತ ಆಡಳಿತದೊಂದಿಗೆ ನಿರಂತರ ಸಂಪರ್ಕ ಹೊಂದಿದೆ. ಉತ್ತರ ಪ್ರದೇಶ ಸರ್ಕಾರದ ಅಂದಾಜಿನ ಪ್ರಕಾರ, ಈ ಬಾರಿ 45 ಕೋಟಿಗೂ ಹೆಚ್ಚು ಜನರು ಮಹಾ ಕುಂಭದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಹೀಗಾಗಿ ಜನ ದಟ್ಟಣೆ ನಿರ್ವಹಣೆ ಅತ್ಯಂತ ಸವಾಲಾಗಿದ್ದು, ಸುಗಮ ನಿರ್ವಹಣೆಗೆ AI ತಂತ್ರಜ್ಞಾನ ನೆರವಾಗಿದೆ ಎಂದು ಮಹಾಕುಂಭ ನಗರ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿವೇಕ್ ಚತುರ್ವೇದಿ ಹೇಳಿದರು.

1954 ರಲ್ಲಿ ಮಹಾ ಕುಂಭ ಮೇಳದಲ್ಲಿ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. 2013 ರಲ್ಲಿ ಕನಿಷ್ಠ 36 ಜನರು ಸಾವನ್ನಪ್ಪಿದರು. ಇದು ಕೊನೆಯ ಬಾರಿಗೆ ಪ್ರಯಾಗರಾಜ್‌ನಲ್ಲಿ ನಡೆದ ಕುಂಭ ಮೇಳವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT