ಅರವಿಂದ್ ಕೇಜ್ರಿವಾಲ್ 
ದೇಶ

ದೇಶದ ಮುಂದಿನ ಬಜೆಟ್ ಅನ್ನು ಮಧ್ಯಮ ವರ್ಗಕ್ಕೆ ಮೀಸಲಿಡಿ: ಕೇಂದ್ರಕ್ಕೆ ಕೇಜ್ರಿವಾಲ್ ಆಗ್ರಹ

ಸಂಸತ್ತಿನಲ್ಲಿ ಬಜೆಟ್ ಅಧಿವೇಶನಕ್ಕೂ ಮುನ್ನ ಕೇಂದ್ರ ಸರ್ಕಾರದ ಮುಂದೆ ಏಳು ಬೇಡಿಕೆಗಳನ್ನು ಪಟ್ಟಿ ಮಾಡಿದ ಕೇಜ್ರಿವಾಲ್, ಮಧ್ಯಮ ವರ್ಗವು ತೆರಿಗೆ ಭಯೋತ್ಪಾದನೆಯ ಬಲಿಪಶುವಾಗಿದೆ ಎಂದು ವಾದಿಸಿದರು.

ನವದೆಹಲಿ: ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ದೇಶದ ಮಧ್ಯಮ ವರ್ಗಕ್ಕಾಗಿ ಕೇಂದ್ರ ಸರ್ಕಾರದ ಮುಂದೆ ಏಳು ಬೇಡಿಕೆಗಳ "ಪಟ್ಟಿಯನ್ನು" ಇಟ್ಟಿದ್ದಾರೆ.

ಮಧ್ಯಮ ವರ್ಗದ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ದೆಹಲಿ ಮಾಜಿ ಸಿಎಂ, ಮಧ್ಯಮ ವರ್ಗವನ್ನು ಎಲ್ಲಾ ಸರ್ಕಾರಗಳು ನಿರ್ಲಕ್ಷಿಸಿವೆ ಮತ್ತು ಅವರು "ತೆರಿಗೆ ಭಯೋತ್ಪಾದನೆ"ಯ ನಿಜವಾದ ಬಲಿಪಶುಗಳಾಗಿದ್ದಾರೆ ಎಂದು ಹೇಳಿದ್ದಾರೆ.

ಸಂಸತ್ತಿನಲ್ಲಿ ಬಜೆಟ್ ಅಧಿವೇಶನಕ್ಕೂ ಮುನ್ನ ಕೇಂದ್ರ ಸರ್ಕಾರದ ಮುಂದೆ ಏಳು ಬೇಡಿಕೆಗಳನ್ನು ಪಟ್ಟಿ ಮಾಡಿದ ಕೇಜ್ರಿವಾಲ್, ಮಧ್ಯಮ ವರ್ಗವು ತೆರಿಗೆ ಭಯೋತ್ಪಾದನೆಯ ಬಲಿಪಶುವಾಗಿದೆ ಎಂದು ವಾದಿಸಿದರು.

"ಕೆಲವು ಪಕ್ಷಗಳು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ತಮ್ಮ ಮತಬ್ಯಾಂಕ್ ಅನ್ನು ಸೃಷ್ಟಿಸಿವೆ ಮತ್ತು ಅವರು ಕೆಲವು ಕೈಗಾರಿಕೋದ್ಯಮಿಗಳಿಗೆ ಹಣವನ್ನು ದಾನ ಮಾಡಲು ಭರವಸೆ ನೀಡುತ್ತಾರೆ. ಈ ನೋಟ್‌ಬ್ಯಾಂಕ್ (ಕೈಗಾರಿಕಾ ಉದ್ಯಮಿಗಳು) ಮತ್ತು ಮತಬ್ಯಾಂಕ್ (ಇತರರು) ನಡುವೆ, ಮಧ್ಯಮ ವರ್ಗ ಎಲ್ಲಿಯೂ ಕಾಣುವುದಿಲ್ಲ. ಮಧ್ಯಮ ವರ್ಗವನ್ನು ಅವುಗಳ ನಡುವೆ ಪುಡಿಪುಡಿ ಮಾಡಲಾಗಿದೆ. ಭಾರತದ ಮಧ್ಯಮ ವರ್ಗವು ಸರ್ಕಾರದ ಎಟಿಎಂ ಆಗಿ ಮಾರ್ಪಟ್ಟಿದೆ. ಭಾರತೀಯ ಮಧ್ಯಮ ವರ್ಗವು ತೆರಿಗೆ ಭಯೋತ್ಪಾದನೆಯ ಬಲಿಪಶುವಾಗಿದೆ ಎಂಬುದು ಸತ್ಯ" ಎಂದು ಕೇಜ್ರಿವಾಲ್ ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಇದರಿಂದಾಗಿ ಅನೇಕ ಜನರು ದೇಶವನ್ನು ತೊರೆಯುತ್ತಿದ್ದಾರೆ. "2023 ರಲ್ಲಿಯೇ(ಸರಿಸುಮಾರು) 2.16 ಲಕ್ಷ ಜನರು ದೇಶವನ್ನು ತೊರೆದಿದ್ದಾರೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ.

"ನಾವು ಮಧ್ಯಮ ವರ್ಗದವರಿಗೆ ಶಿಕ್ಷಣ ಬಜೆಟ್ ಅನ್ನು ಹೆಚ್ಚಿಸಿದ್ದೇವೆ, ವಿದ್ಯುತ್ ಮತ್ತು ನೀರಿನ ಬಿಲ್‌ಗಳನ್ನು ಕಡಿಮೆ ಮಾಡಿದ್ದೇವೆ, ಚುನಾವಣೆಯ ನಂತರ ವೃದ್ಧರಿಗೆ ಉಚಿತ ಚಿಕಿತ್ಸೆಗಾಗಿ ಸಂಜೀವನಿ ಯೋಜನೆಯನ್ನು ಜಾರಿಗೆ ತರುತ್ತೇವೆ" ಎಂದು ಹೇಳಿದರು.

ಎಎಪಿ ಮಧ್ಯಮ ವರ್ಗದ ಧ್ವನಿಯಾಗಲಿದೆ ಎಂದು ಭರವಸೆ ನೀಡಿದ ಕೇಜ್ರಿವಾಲ್, ಎರಡು ವಾರಗಳ ನಂತರ ನಡೆಯಲಿರುವ ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದಲ್ಲಿ ತಮ್ಮ ಪಕ್ಷವು ಮಧ್ಯಮ ವರ್ಗದ ಸಮಸ್ಯೆಗಳನ್ನು ಎತ್ತಲಿದೆ ಎಂದು ಹೇಳಿದರು.

ಬಜೆಟ್ ಅಧಿವೇಶನಕ್ಕೂ ಮುನ್ನ ಕೇಜ್ರಿವಾಲ್ ಕೇಂದ್ರ ಸರ್ಕಾರದ ಮುಂದೆ ಏಳು ಬೇಡಿಕೆಗಳನ್ನು ಇಟ್ಟಿದ್ದು, ಮುಂದಿನ ಬಜೆಟ್ ಅಧಿವೇಶನವನ್ನು ಮಧ್ಯಮ ವರ್ಗಕ್ಕೆ ಮೀಸಲಿಡಬೇಕು ಎಂದು ಆಗ್ರಹಿಸಿದ್ದಾರೆ.

"ದೇಶದ ಮುಂದಿನ ಬಜೆಟ್ ಅನ್ನು ಮಧ್ಯಮ ವರ್ಗಕ್ಕೆ ಮೀಸಲಿಡಬೇಕೆಂದು ನಾವು ಒತ್ತಾಯಿಸುತ್ತೇವೆ. ಇಂದು ನಾನು ಕೇಂದ್ರ ಸರ್ಕಾರದ ಮುಂದೆ ಏಳು ಬೇಡಿಕೆಗಳನ್ನು ಪಟ್ಟಿ ಮಾಡಿದ್ದೇನೆ. ಅವರು ಶಿಕ್ಷಣ ಬಜೆಟ್ ಅನ್ನು ಶೇಕಡಾ ಎರಡರಿಂದ ಶೇಕಡಾ 10 ಕ್ಕೆ ಹೆಚ್ಚಿಸಬೇಕು. ಖಾಸಗಿ ಶಾಲೆಗಳಲ್ಲಿನ ಶುಲ್ಕವನ್ನು ನಿಯಂತ್ರಿಸಬೇಕು" ಎಂದು ದೆಹಲಿಯ ಮಾಜಿ ಸಿಎಂ ಒತ್ತಾಯಿಸಿದ್ದಾರೆ.

ಉನ್ನತ ಶಿಕ್ಷಣಕ್ಕಾಗಿ ಸಬ್ಸಿಡಿ ನೀಡಬೇಕು ಮತ್ತು ವಿದ್ಯಾರ್ಥಿವೇತನ ಒದಗಿಸಬೇಕು. ಆರೋಗ್ಯ ಬಜೆಟ್ ಹೆಚ್ಚಿಸುವ ಅಗತ್ಯತೆಯ ಬಗ್ಗೆ ಕೇಜ್ರಿವಾಲ್ ಗಮನಹರಿಸಿದ್ದು, ಅದನ್ನು ಶೇಕಡಾ 10 ಕ್ಕೆ ಹೆಚ್ಚಿಸಬೇಕು ಮತ್ತು ಆರೋಗ್ಯ ವಿಮೆಯ ಮೇಲಿನ ತೆರಿಗೆಯನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT