ಚೆನ್ನೈ ನಲ್ಲಿ ಮಣಿಪುರ ಮಹಿಳೆ ಬಂಧನ  online desk
ದೇಶ

Painkiller ಮಾರಾಟ: ಚೆನ್ನೈ ನಲ್ಲಿ ಮಣಿಪುರ ಮಹಿಳೆ ಬಂಧನ

ಮಹಿಳೆ ವುಂಗ್ಲಿಯಾಚಿಂಗ್ 'ಟ್ಯಾಪೆಂಟಾಡಾಲ್ ಹೈಡ್ರೋಕ್ಲೋರೈಡ್' ಮಾತ್ರೆಗಳನ್ನು ಹೊತ್ತೊಯ್ಯುತ್ತಿದ್ದರು.

ಚೆನ್ನೈ: ಚೆನ್ನೈನಲ್ಲಿ ಅಕ್ರಮವಾಗಿ ನೋವು ನಿವಾರಕ ಮಾತ್ರೆಗಳನ್ನು ಮಾರಾಟ ಮಾಡಿದ್ದಕ್ಕಾಗಿ ಮಣಿಪುರದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ನಡುವೆ ಕುಕಿ ಬುಡಕಟ್ಟು ಜನಾಂಗದವರು ಪ್ರಾಬಲ್ಯ ಹೊಂದಿರುವ ಚುರಾಚಂದ್‌ಪುರ ಜಿಲ್ಲೆಯ ಸಿಂಘಾಟ್ ನಿವಾಸಿ ವುಂಗ್ಲಿಯಾಚಿಂಗ್ ಅಲಿಯಾಸ್ ರೆಬೆಕ್ಕಾ (30) ಬಂಧಿತ ಮಹಿಳೆ ಎಂದು ಗುರುತಿಸಲಾಗಿದೆ. ಆರೋಪಿಯಿಂದ 8,100 ಮಾತ್ರೆಗಳು, 1,650 ರೂ. ನಗದು ಮತ್ತು ಐಫೋನ್ ಅನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಹಿಳೆ ವುಂಗ್ಲಿಯಾಚಿಂಗ್ 'ಟ್ಯಾಪೆಂಟಾಡಾಲ್ ಹೈಡ್ರೋಕ್ಲೋರೈಡ್' ಮಾತ್ರೆಗಳನ್ನು ಹೊತ್ತೊಯ್ಯುತ್ತಿದ್ದರು.

ಮಹಿಳೆಯ ಬಗ್ಗೆ ಮಾಹಿತಿ ಪಡೆದ ನಂತರ, ಚೆನ್ನೈನ ತಿರುವನ್ಮಿಯೂರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನೇತೃತ್ವದ ವಿಶೇಷ ತಂಡ ತಿರುವನ್ಮಿಯೂರ್ ಬಸ್ ನಿಲ್ದಾಣದ ಬಳಿ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಿತು. ಅಲ್ಲಿ ಆಕೆಯನ್ನು ಬಂಧಿಸಲಾಗಿದೆ.

ವುಂಗ್ಲಿಯಾಚಿಂಗ್ ಆನ್‌ಲೈನ್‌ನಲ್ಲಿ ಮಾತ್ರೆಗಳನ್ನು ಖರೀದಿಸಿ, ಕೊರಿಯರ್ ಮೂಲಕ ಪಡೆದುಕೊಂಡು ಚೆನ್ನೈನಾದ್ಯಂತ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಆಕೆಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಆಕೆಯನ್ನು ವಶಕ್ಕೆ ಪಡೆದಿದ್ದೇವೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT