ಕರ್ತವ್ಯಪಥದಲ್ಲಿ ನಡೆಯುತ್ತಿರುವ ಪರೇಡ್  
ದೇಶ

76ನೇ ಗಣರಾಜ್ಯೋತ್ಸವ ಸಂಭ್ರಮ: ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಕರ್ತವ್ಯ ಪಥದಲ್ಲಿ ಪರೇಡ್ ಆರಂಭ

ಧ್ವಜಾರೋಹಣದ ಬೆನ್ನಲ್ಲೇ ರಾಷ್ಟ್ರಪತಿಗಳಿಗೆ 21 ತೋಪಿನ ಸನ್ಮಾನ ನೀಡಿ ಗೌರವಿಸಲಾಯಿತು. ಬಳಿಕ ಗಣರಾಜ್ಯೋತ್ಸವದ ಪರೇಡ್‌ ಆರಂಭವಾಯಿತು.

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 76ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಸಾಥ್‌ ನೀಡಿದರು. ನಂತರ ಭವ್ಯ ಮೆರವಣಿಗೆ ಪ್ರಾರಂಭವಾಯಿತು. ಸಮಾರಂಭದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ.

ಧ್ವಜಾರೋಹಣದ ಬೆನ್ನಲ್ಲೇ ರಾಷ್ಟ್ರಪತಿಗಳಿಗೆ 21 ತೋಪಿನ ಸನ್ಮಾನ ನೀಡಿ ಗೌರವಿಸಲಾಯಿತು. ಬಳಿಕ ಗಣರಾಜ್ಯೋತ್ಸವದ ಪರೇಡ್‌ ಆರಂಭವಾಯಿತು. ರಾಜಪಥ್‌ ಕರ್ತವ್ಯಪಥ ಎಂದು ಮರುನಾಮಕರಣಗೊಂಡ ಬಳಿಕ ನಡೆಯುತ್ತಿರುವ 3ನೇ ಗಣರಾಜ್ಯೋತ್ಸವ ಇದಾಗಿದ್ದು, ಪರೇಡ್‌ ಮೂಲಕ ವಿಶ್ವದ ಮುಂದೆ ದೇಶದ ಶಕ್ತಿ ಕರ್ತವ್ಯಪಥದಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಾಗುತ್ತಿದೆ.

ಈ ಬಾರಿಯ ಗಣರಾಜ್ಯೋತ್ಸವ ಜನ್ ಭಾಗಿದರಿ (ಜನರ ಭಾಗವಹಿಸುವಿಕೆ) ವಿಷಯದ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಸಾವಿರಾರು ಜನಸಾಮಾನ್ಯರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದು, 10 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆ.

ಸಮಾರಂಭದ ಮುಖ್ಯ ಮೆರವಣಿಗೆ ಬೆಳಿಗ್ಗೆ 10.30ಕ್ಕೆ ಆರಂಭವಾಗಿದ್ದು, ವಿಜಯ್ ಚೌಕ್ ನಲ್ಲಿ ಪ್ರಾರಂಭವಾಗಿ, ಕರ್ತವ್ಯ ಪಥದಲ್ಲಿ ಮುಂದುವರೆದಿದೆ. ಬಳಿಕ ಇಂಡಿಯಾ ಗೇಟ್ ಮೂಲಕ ಹಾದುಹಾಗಿ, ಕೆಂಪುಕೋಟೆಯಲ್ಲಿ ಮುಕ್ತಾಯಗೊಳ್ಳಲಿದೆ.

ಈ ಬಾರಿಯ ಪರೇಡ್ ನ ವಿಷಯವೆಂದರೆ ಸ್ವರ್ಣಿಮ್ ಭಾರತ್: ವಿರಾಸತ್ ಔರ್ ವಿಕಾಸ್ (ಸುವರ್ಣ ಭಾರತ; ಪರಂಪರೆ ಮತ್ತು ಅಭಿವೃದ್ಧಿ). ಭಾರತೀಯ ಸಂವಿಧಾನ ಜಾರಿಗೆ ಬಂದ 75 ವರ್ಷಗಳು ಪೂರ್ಣಗೊಂಡ ನಿಮಿತ್ತ ಈ ಹೆಸರಿಡಲಾಗಿದೆ.

ಈ ಬಾರಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಿದ್ದು, ಒಟ್ಟು 31 ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯುತ್ತಿದೆ.

ಸೇನಾ ಪರೇಡ್ ನಲ್ಲಿ ಇಬ್ಬರು ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರು, ಕಾರ್ಗಿರ್ ಯುದ್ಧ ವೀರರು ಹಾಗೂ ಒಬ್ಬ ಅಶೋಕ ಚಕ್ರ ಪುರಸ್ಕೃತರು ಪರೇಡ್ ನಲ್ಲಿ ಭಾಗಿಯಾಗಿದ್ದಾರೆ.

130ಜೆ ಸೂಪರ್ ಹರ್ಕ'ಯುಲಸ್, ಸಿ-275, ಸಿ-17 ಗ್ರೋಬ್ ಮಾಸ್ಟರ್, ಪಿ-8ಐ, ಮಿಗ್-29 ಮತ್ತು ಸುಖೋಯ್-30, ಇತರ ವಿಮಾನಗಳ ಪ್ರದರ್ಶನ ನಡೆಯುತ್ತಿಪೆ. ಫ್ಲೈಪಾಸ್ಟ್ ನಲ್ಲಿ ವಾಯುಪಡೆಯ 40 ವಿಮಾನಗಲು ಮತ್ತು 3 ಡಾರ್ನಿಯರ್ ವಿಮಾನಗಳು ಭಾಗಿಯಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Karnataka Survey: ತಾಂತ್ರಿಕ ದೋಷ, ಸರ್ವರ್ ಸಮಸ್ಯೆ ನಡುವೆಯೂ ಜಾತಿ 'ಸಮೀಕ್ಷೆ', ಗಣತಿದಾರರ ಪ್ರತಿಭಟನೆ!

'Ukraine war ನ ಪ್ರಾಥಮಿಕ ಹೂಡಿಕೆದಾರರು'.. ರಷ್ಯಾ ಇಂಧನ ಖರೀದಿ ಕೂಡಲೇ ನಿಲ್ಲಿಸಿ': ಭಾರತ, ಚೀನಾ ವಿರುದ್ಧ ಮತ್ತೆ Donald Trump ಕಿಡಿ!

Shreyas Iyer ದಿಢೀರ್‌ ರಾಜೀನಾಮೆ; BCCI ಗೆ ಪತ್ರ..! ಇಷ್ಟಕ್ಕೂ ಆಗಿದ್ದೇನು?

Bengaluru: 'ನನ್ ಗಂಡ ನಪುಂಸಕ.. 2 ಕೋಟಿ ರೂ ಕೊಡ್ಸಿ...'; ನವ ವಿವಾಹಿತೆ ಬೇಡಿಕೆ! ಆದ್ರೆ ಗಂಡನಿಂದಲೇ FIR

ಮೋಹನ್ ಲಾಲ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ; SRK, ವಿಕ್ರಾಂತ್ ಮಾಸ್ಸೆ ಹಾಗೂ ರಾಣಿ ಮುಖರ್ಜಿಗೆ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪ್ರದಾನ!

SCROLL FOR NEXT