ಕುಂಭಮೇಳದಲ್ಲಿ ಅಮೃತ ಸ್ನಾನ online desk
ದೇಶ

Maha Kumbh 2025: ಕಾಲ್ತುಳಿತಕ್ಕೆ ಭಕ್ತಾದಿಗಳು ಡೋಂಟ್ ಕೇರ್; 5.71 ಕೋಟಿ ಮಂದಿಯಿಂದ ಅಮೃತ ಸ್ನಾನ!; 20 ಕೋಟಿ ದಾಟಿದ ಒಟ್ಟು ಸಂಖ್ಯೆ!

ಕಾಲ್ತುಳಿತದ ಹಿನ್ನೆಲೆಯಲ್ಲಿ ಸ್ವಲ್ಪ ಸಮಯ ಅಮೃತ ಸ್ನಾನಕ್ಕೆ ತಡೆಯೊಡ್ಡಲಾಗಿತ್ತು. ಆದರೆ ಈಗ ಪವಿತ್ರ ಸ್ನಾನ ಪ್ರಕ್ರಿಯೆ ಮುಂದುವರೆದಿದ್ದು, ಮಧ್ಯಾಹ್ನ 12 ಗಂಟೆ ವರೆಗೂ 4.24 ಕೋಟಿ ಭಕ್ತಾದಿಗಳು ಅಮೃತ ಸ್ನಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಯಾಗ್ ರಾಜ್: ಮಹಾಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯಂದು ಅಮೃತಸ್ನಾನಕ್ಕಾಗಿ ಭಕ್ತಾದಿಗಳು ಮುಗಿಬಿದ್ದು ಮಧ್ಯರಾತ್ರಿ ವೇಳೆ ಕಾಲ್ತುಳಿತ ಉಂತಾಗಿತ್ತು.

ಕಾಲ್ತುಳಿತದ ಹಿನ್ನೆಲೆಯಲ್ಲಿ ಸ್ವಲ್ಪ ಸಮಯ ಅಮೃತ ಸ್ನಾನಕ್ಕೆ ತಡೆಯೊಡ್ಡಲಾಗಿತ್ತು. ಆದರೆ ಈಗ ಪವಿತ್ರ ಸ್ನಾನ ಪ್ರಕ್ರಿಯೆ ಮುಂದುವರೆದಿದ್ದು, ಸಂಜೆ 5 ಗಂಟೆ ವರೆಗೂ 5.71 ಕೋಟಿ ಭಕ್ತಾದಿಗಳು ಅಮೃತ ಸ್ನಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕಾಲ್ತುಳಿತ ಉಂಟಾದ ಹಿನ್ನೆಲೆಯಲ್ಲಿ ಹೆಚ್ಚು ಸಮಸ್ಯೆಯಾಗದಂತೆ ಎಚ್ಚರ ವಹಿಸಲು ಸಾಧುಗಳು ಸಣ್ಣ ಪ್ರಮಾಣದ ಮೆರವಣಿಗೆಯಲ್ಲಿ ಆಗಮಿಸುತ್ತಿದ್ದಾರೆ. ಕುಂಭಮೇಳ ಆರಂಭವಾದಾಗಿನಿಂದಲೂ ಇಂದಿನವರೆಗೆ ಪವಿತ್ರ ಸ್ನಾನ ಮಾಡಿದ ಒಟ್ಟು ಭಕ್ತರ ಸಂಖ್ಯೆ 20 ಕೋಟಿ ದಾಟಿದೆ. ಮಹಾಕುಂಭದ ಸಮಯದಲ್ಲಿ ತ್ರಿವೇಣಿ ಸಂಗಮದಲ್ಲಿ ನಡೆಯುವ ಎರಡನೇ 'ಅಮೃತ ಸ್ನಾನ'ದಲ್ಲಿ ಒಬ್ಬ ಸಾಧು , ಮಾತನಾಡಿದ್ದು "ಈ ಪವಿತ್ರ ಸಂದರ್ಭದಲ್ಲಿ ಎಲ್ಲರೂ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಬೇಕು. ಕೆಲವು ದುರದೃಷ್ಟಕರ ಘಟನೆಗಳು ನಡೆದಿವೆ ಆದರೆ ಎಲ್ಲರೂ ಆರೋಗ್ಯವಾಗಿರಬೇಕು" ಎಂದು ಹೇಳಿದ್ದಾರೆ.

ಮೌನಿ ಅಮವಾಸ್ಯೆಯ 'ಅಮೃತ ಸ್ನಾನ'ದ ನಂತರ, ಪಂಚಾಯತ್ ನಿರಂಜನಿ ಅಖಾರದ ದಿಗಂಬರ ನಾಗ ಬಾಬಾ ಚಿದಾನಂದ್ ಪುರಿ, "ಇಂದು ಅನಿರೀಕ್ಷಿತ ಘಟನೆಯಿಂದಾಗಿ, ನಮ್ಮ (ಅಖರ) ಶೋಭಾ ಯಾತ್ರೆಯನ್ನು ಹೊರಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ನಾವು ಈಗ ಕಡಿಮೆ ಸಂಖ್ಯೆಯಲ್ಲಿ ಪವಿತ್ರ ಸ್ನಾನ ಮಾಡಲು ಬರುತ್ತಿದ್ದೇವೆ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!