ಸುನೀತಾ ಸಾವಂತ್ PTI
ದೇಶ

ಇದೇ ಮೊದಲು, ವೈರ್‌ಲೆಸ್‌ ಮೂಲಕ ವರ್ಗಾವಣೆ ಆದೇಶ: ಬಜರಂಗದಳದ ಕುರಿತು ಮಾಹಿತಿ ಸಂಗ್ರಹಕ್ಕೆ ಮುಂದಾದ ಎಸ್‌ಪಿ ಸುನೀತಾ ಸಾವಂತ್ ಎತ್ತಂಗಡಿ!

ಕ್ಯಾಲಂಗುಟ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ತೆಗೆದುಹಾಕುವುದರ ವಿರುದ್ಧ ಮೊದಲ ಬಾರಿಗೆ ಬಜರಂಗದಳ ಬಹಿರಂಗ ಪ್ರತಿಭಟನೆ ಮಾಡಿತ್ತು.

ಪಣಜಿ: ದಕ್ಷಿಣ ಗೋವಾದ ಎಸ್‌ಪಿ ಸುನೀತಾ ಸಾವಂತ್ ಅವರನ್ನು ಸೋಮವಾರ ತಡರಾತ್ರಿ ವರ್ಗಾವಣೆ ಮಾಡಲಾಗಿದೆ. ಹಿಂದೂ ಸಂಘಟನೆ ಭಜರಂಗದಳದ ಹಿರಿಯ ಅಧಿಕಾರಿಗಳು ಮತ್ತು ಸದಸ್ಯರ ಬಗ್ಗೆ ಮಾಹಿತಿ ಸಂಗ್ರಹಿಸಲು ಅವರು ವೈರ್‌ಲೆಸ್ ಸಂದೇಶವನ್ನು ಕಳುಹಿಸಿದ್ದರು. ನಂತರ ಅದೇ ವೈರ್‌ಲೆಸ್ ಸಂದೇಶದ ಮೂಲಕ ಸುನೀತಾ ಸಾವಂತ್ ಅವರನ್ನು ವರ್ಗಾವಣೆ ಮಾಡಿದ್ದಾಗಿ ತಿಳಿಸಲಾಗಿದೆ. ಸಾಮಾನ್ಯವಾಗಿ, ಎಸ್‌ಪಿ ಮಟ್ಟದ ವರ್ಗಾವಣೆ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸುತ್ತದೆ, ಆದರೆ ಈ ಸಂದರ್ಭದಲ್ಲಿ, ಗೋವಾ ಪೊಲೀಸರು ಎಸ್‌ಪಿ ಸುನೀಲಾ ಸಾವಂತ್ ಅವರನ್ನು ವೈರ್‌ಲೆಸ್ ಸಂದೇಶದ ಮೂಲಕ ವರ್ಗಾಯಿಸಿದರು.

ಈಗ ಮಾದಕ ದ್ರವ್ಯ ವಿರೋಧಿ ಘಟಕದ ಎಸ್‌ಪಿ ಟಿಕಮ್ ಸಿಂಗ್ ವರ್ಮಾ ಅವರನ್ನು ದಕ್ಷಿಣ ಗೋವಾದ ಹೊಸ ಎಸ್‌ಪಿಯಾಗಿ ನೇಮಿಸಲಾಗಿದೆ. ಸೋಮವಾರ ಬೆಳಿಗ್ಗೆ ಸುನೀತಾ ಸಾವಂತ್ ಕಳುಹಿಸಿದ ಸಂದೇಶದ ಆಧಾರದ ಮೇಲೆ, ಪೊಲೀಸ್ ಠಾಣೆಗಳು ಭಜರಂಗದಳ ನಾಯಕರು ಮತ್ತು ಸದಸ್ಯರ ಮಾಹಿತಿಯನ್ನು ಸಂಗ್ರಹಿಸಲು ಪ್ರಾರಂಭಿಸಿದವು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಷಯ ಬಜರಂಗದಳದ ಹಿರಿಯ ಕಾರ್ಯಕರ್ತರಿಗೆ ತಿಳಿದ ತಕ್ಷಣ, ಅವರನ್ನು ದಕ್ಷಿಣ ಗೋವಾದಿಂದ ಬೇರೆಡೆಗೆ ವರ್ಗಾಯಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು.

ಇದರಿಂದಾಗಿ ಗೋವಾ ಪೊಲೀಸರು ಸುನೀತಾ ಸಾವಂತ್ ಅವರನ್ನು ಕಚೇರಿ ಖಾಲಿ ಮಾಡುವಂತೆ ಕೇಳಿಕೊಂಡಿದ್ದು ಅವರ ವರ್ಗಾವಣೆ ಆದೇಶವನ್ನು ವೈರ್‌ಲೆಸ್ ಮೂಲಕ ತಿಳಿಸಲಾಗಿದೆ. ಇದಾದ ನಂತರ, ಸುನೀತಾ ಸಾವಂತ್ ಅವರಿಗೆ ಪೊಲೀಸ್ ಪ್ರಧಾನ ಕಚೇರಿಗೆ ವರದಿ ಮಾಡಿಕೊಳ್ಳಲು ಸೂಚಿಸಲಾಯಿತು. 2023ರಿಂದ ಬಜರಂಗದಳವು ರಾಜ್ಯದಲ್ಲಿ ಕ್ರಮೇಣ ಸಕ್ರಿಯವಾಗುತ್ತಿದೆ. ರಾಜ್ಯದಲ್ಲಿ ಬಜರಂಗದಳ ಸದಸ್ಯರ ಪ್ರತಿಭಟನೆಗಳು ಹಲವು ಬಾರಿ ನಡೆದಿವೆ. ಕ್ಯಾಲಂಗುಟ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ತೆಗೆದುಹಾಕುವುದರ ವಿರುದ್ಧ ಮೊದಲ ಬಾರಿಗೆ ಬಜರಂಗದಳ ಬಹಿರಂಗ ಪ್ರತಿಭಟನೆ ಮಾಡಿತ್ತು.

ಇದಲ್ಲದೆ, ಸುನೀತಾ ಸಾವಂತ್ ಅವರ ವರ್ಗಾವಣೆಗೆ ದಕ್ಷಿಣ ಗೋವಾದಲ್ಲಿ ಇತ್ತೀಚೆಗೆ ನಡೆದ ಘಟನೆಯೂ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ರಾತ್ರಿ ಪೊಲೀಸರು ವ್ಯಕ್ತಿಯೊಬ್ಬರನ್ನು ಬಂಧಿಸಲು ಆತನ ಮನೆಗೆ ಭೇಟಿ ನೀಡಿದ್ದರು. ಆ ವ್ಯಕ್ತಿಯ ವಿರುದ್ಧ ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಲಾಯಿತು. ಆದರೆ ಪೊಲೀಸರಿಗೆ ಆತನನ್ನು ಬಂಧಿಸಲು ಸಾಧ್ಯವಾಗಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT