ಜಗದಾಂಬಿಕಾ ಪಾಲ್ 
ದೇಶ

ವಕ್ಫ್(ತಿದ್ದುಪಡಿ) ಮಸೂದೆ ಕುರಿತ ಕರಡು ಅಂಗೀಕರಿಸಿದ ಜೆಪಿಸಿ; ಪ್ರಜಾಪ್ರಭುತ್ವ ವಿರೋಧಿ ಎಂದ ಪ್ರತಿಪಕ್ಷಗಳು

ಸಂಸದರು ಕರಡು ವರದಿಗೆ ತಮ್ಮ ಅಸಮ್ಮತಿಯನ್ನು ಸೂಚಿಸಲು ಸಂಜೆ 4 ಗಂಟೆಯವರೆಗೆ ಸಮಯ ನೀಡಲಾಗಿದೆ ಎಂದು ಜಗದಾಂಬಿಕಾ ಪಾಲ್ ಅವರು ತಿಳಿಸಿದ್ದಾರೆ.

ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸುತ್ತಿರುವ ಸಂಸತ್ ಜಂಟಿ ಸಮಿತಿ(ಜೆಪಿಸಿ)ಯು ಬುಧವಾರ ತನ್ನ ಕರಡು ವರದಿ ಮತ್ತು ಪ್ರಸ್ತಾವಿತ ಕಾನೂನಿನ ತಿದ್ದುಪಡಿ ಮಾಡಿದ ಆವೃತ್ತಿಯನ್ನು ಬಹುಮತದಿಂದ ಅಂಗೀಕರಿಸಿದೆ ಎಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಹೇಳಿದ್ದಾರೆ.

ಸಂಸದರು ಕರಡು ವರದಿಗೆ ತಮ್ಮ ಅಸಮ್ಮತಿಯನ್ನು ಸೂಚಿಸಲು ಸಂಜೆ 4 ಗಂಟೆಯವರೆಗೆ ಸಮಯ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಲ್ಲಿಯವರೆಗೆ ತೃಣಮೂಲ ಕಾಂಗ್ರೆಸ್ ಸಂಸದರಾದ ಕಲ್ಯಾಣ್ ಬ್ಯಾನರ್ಜಿ, ನದೀಮುಲ್ ಹಕ್, ಡಿಎಂಕೆ ಸಂಸದ ಎ ರಾಜಾ, ಎಎಪಿ ನಾಯಕ ಸಂಜಯ್ ಸಿಂಗ್ ಮತ್ತು ಶಿವಸೇನಾ (ಯುಬಿಟಿ)ಸಂಸದ ಅರವಿಂದ್ ಸಾವಂತ್ ಅವರು ಔಪಚಾರಿಕವಾಗಿ ತಮ್ಮ ಭಿನ್ನಾಭಿಪ್ರಾಯವನ್ನು ಸಲ್ಲಿಸಿದ್ದಾರೆ.

ವಿರೋಧ ಪಕ್ಷದ ಸಂಸದರು, ಈ ಕರಡು ವರದಿಗೆ ತಮ್ಮ ಅಸಮ್ಮತಿಯನ್ನು ಸೂಚಿಸಿದ್ದು, ಈ ಪ್ರಕ್ರಿಯೆಯು ಪ್ರಜಾಪ್ರಭುತ್ವ ವಿರೋಧಿ ಎಂದು ಟೀಕಿಸಿದ್ದಾರೆ. ಅಂತಿಮ ವರದಿಯನ್ನು ಅಧ್ಯಯನ ಮಾಡಲು ಮತ್ತು ತಮ್ಮ ಅಸಮ್ಮತಿಯ ಟಿಪ್ಪಣಿಗಳನ್ನು ಸಲ್ಲಿಸಲು ತಮಗೆ ಕಡಿಮೆ ಸಮಯ ನೀಡಲಾಗಿದೆ ಎಂದು ಹೇಳಿದ್ದಾರೆ.

ಶಿವಸೇನೆ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಅವರು ಎಲ್ಲಾ ವಿರೋಧ ಪಕ್ಷದ ಸದಸ್ಯರು ತಮ್ಮ ಅಸಮ್ಮತಿ ವ್ಯಕ್ತಪಡಿಸುತ್ತಾರೆ ಎಂದು ಹೇಳಿದ್ದಾರೆ.

ಈ ತಿದ್ದುಪಡಿಗಳು ವಕ್ಫ್ ಮಂಡಳಿಯ ಹಿತದೃಷ್ಟಿಯಿಂದ ಉತ್ತಮವಲ್ಲ ಎಂದು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

"ನಿನ್ನೆ ರಾತ್ರಿ 650 ಪುಟಗಳ ಬೃಹತ್ ವರದಿಗೆ ಸಹಿ ಹಾಕಲಾಗಿದೆ. ಎಲ್ಲಾ ಪುಟಗಳನ್ನು ಓದುವುದು ಮತ್ತು ಭಿನ್ನಾಭಿಪ್ರಾಯದ ವರದಿಯನ್ನು ಸಲ್ಲಿಸುವುದು ಪ್ರಾಯೋಗಿಕವಾಗಿ ಅಸಾಧ್ಯ. ಆದರೆ ಜಂಟಿ ಸಂಸದೀಯ ಸಮಿತಿಯ ಸಮಯದಲ್ಲಿ ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ನಮಗೆ ಕಂಡುಬಂದದ್ದು ಸ್ಪಷ್ಟವಾಗಿ ಹೇಳಿದ್ದೇವೆ. ಈ ತಿದ್ದುಪಡಿಗಳು ವಕ್ಫ್‌ನ ಹಿತದೃಷ್ಟಿಯಿಂದ ಉತ್ತಮವಾಗಿಲ್ಲ. ವಾಸ್ತವವಾಗಿ, ಅವು ವಕ್ಫ್ ಮಂಡಳಿಯನ್ನು ನಾಶಮಾಡುತ್ತವೆ" ಎಂದು ಓವೈಸಿ ಆರೋಪಿಸಿದ್ದಾರೆ.

ಪ್ರಸ್ತಾವಿತ ಕಾನೂನಿನ ತಿದ್ದುಪಡಿ ಮಸೂದೆಯ ಕರಡನ್ನು ಪಾಲ್ ಅವರು ಗುರುವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸುವ ಸಾಧ್ಯತೆಯಿದೆ.

ವಕ್ಫ್(ತಿದ್ದುಪಡಿ) ಮಸೂದೆ-2024 ಅನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ಮಂಡಿಸಿದ್ದರು. ಇದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮಸೂದೆಯನ್ನು 2024ರ ಆಗಸ್ಟ್ 8ರಂದು ಜಂಟಿ ಸಂಸದೀಯ ಸಮಿತಿಗೆ(ಜೆಪಿಸಿ) ಉಲ್ಲೇಖಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT