ಜಗದಾಂಬಿಕಾ ಪಾಲ್ 
ದೇಶ

ವಕ್ಫ್ ತಿದ್ದುಪಡಿ ಮಸೂದೆ ಕುರಿತ ವರದಿಯನ್ನು ಲೋಕಸಭಾ ಸ್ಪೀಕರ್‌ಗೆ ಸಲ್ಲಿಸಿದ ಜೆಪಿಸಿ

ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಇಂದು ಓಂ ಬಿರ್ಲಾ ಅವರನ್ನು ಸಂಸತ್ ಭವನದ ಸ್ಪೀಕರ್ ಕಚೇರಿಯಲ್ಲಿ ಭೇಟಿಯಾಗಿ. ಪ್ರಸ್ತಾವಿತ ಕಾನೂನಿನ ತಿದ್ದುಪಡಿ ಮಸೂದೆಯ ಕರಡನ್ನು ಹಸ್ತಾಂತರಿಸಿದರು.

ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸುತ್ತಿರುವ ಸಂಸತ್ ಜಂಟಿ ಸಮಿತಿ(ಜೆಪಿಸಿ)ಯು ತನ್ನ ಕರಡು ವರದಿ ಮತ್ತು ಪ್ರಸ್ತಾವಿತ ಕಾನೂನಿನ ತಿದ್ದುಪಡಿ ಮಾಡಿದ ಆವೃತ್ತಿಯನ್ನು ಗುರುವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಿದೆ.

ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಇಂದು ಓಂ ಬಿರ್ಲಾ ಅವರನ್ನು ಸಂಸತ್ ಭವನದ ಸ್ಪೀಕರ್ ಕಚೇರಿಯಲ್ಲಿ ಭೇಟಿಯಾಗಿ. ಪ್ರಸ್ತಾವಿತ ಕಾನೂನಿನ ತಿದ್ದುಪಡಿ ಮಸೂದೆಯ ಕರಡನ್ನು ಹಸ್ತಾಂತರಿಸಿದರು.

ಆಡಳಿತಾರೂಢ ಬಿಜೆಪಿ ಸದಸ್ಯರು ಸೂಚಿಸಿದ ಬದಲಾವಣೆಗಳನ್ನು ಒಳಗೊಂಡಿರುವ ಜೆಪಿಸಿ ವರದಿಯನ್ನು ಸಮಿತಿಯು ಬುಧವಾರ ಬಹುಮತದ ಮತದಿಂದ ಅಂಗೀಕರಿಸಿತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷಗಳು, ಈ ಪ್ರಕ್ರಿಯೆಯು ಪ್ರಜಾಪ್ರಭುತ್ವ ವಿರೋಧಿ ಎಂದು ಟೀಕಿಸಿದ್ದಾರೆ.

ವಕ್ಫ್(ತಿದ್ದುಪಡಿ) ಮಸೂದೆ-2024 ಅನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಕಳೆದ ವರ್ಷ ಆಗಸ್ಟ್ ನಲ್ಲಿ ಲೋಕಸಭೆಯಲ್ಲಿ ಮಂಡಿಸಿದ್ದರು. ಇದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮಸೂದೆಯನ್ನು 2024ರ ಆಗಸ್ಟ್ 8ರಂದು ಜಂಟಿ ಸಂಸದೀಯ ಸಮಿತಿಗೆ(ಜೆಪಿಸಿ) ಉಲ್ಲೇಖಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಜೆಪಿಗೆ ಬಿಗ್ ಶಾಕ್: 'ಮರುಎಣಿಕೆ' ಫಲಿತಾಂಶಕ್ಕೆ ಸುಪ್ರೀಂ ತಡೆ; ಶೃಂಗೇರಿ ಶಾಸಕರಾಗಿ ರಾಜೇಗೌಡ ಮುಂದುವರಿಕೆ, ಜೀವರಾಜ್ ಕಥೆ ಏನು?

Indian Stock Market: ಮುಗಿಯದ ಮಧ್ಯ ಪ್ರಾಚ್ಯ ಯುದ್ಧ, Sensex 1300 ಅಂಕ ಕುಸಿತ, 6 ಲಕ್ಷ ಕೋಟಿ ರೂ ನಷ್ಟ

TCS ಕಾರ್ಪೋರೆಟ್ ಜಿಹಾದ್ ಪ್ರಕರಣ: ಆರೋಪಿ Nida Khanಗೆ ನ್ಯಾಯಾಂಗ ಬಂಧನ!

VIDEO: ಖಜಾನೆ ಖಾಲಿ ಹೇಳಿಕೆ ಬೆನ್ನಲ್ಲೇ ನಿಕಟಪೂರ್ವ ಸಿಎಂ ಸ್ಟಾಲಿನ್ ಭೇಟಿ ಮಾಡಿದ ನೂತನ CM ವಿಜಯ್

ಬಂಗಾಳದಲ್ಲಿ ಬದಲಾವಣೆಯ ಪರ್ವ: ಗಡಿ ಸುರಕ್ಷತೆಗೆ ಆದ್ಯತೆ: BSFಗೆ ಭೂಮಿ ಹಸ್ತಾಂತರಿಸಲು ಸುವೇಂದು ಸರ್ಕಾರ ಅಸ್ತು, ಮೊದಲ ಸಂಪುಟ ಸಭೆಯಲ್ಲೇ ಮಹತ್ವದ ನಿರ್ಧಾರ..!

SCROLL FOR NEXT