ದೇಶ

2024-25ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್; ಶೇ.6.3 ರಿಂದ ಶೇ.6.8 GDP ಬೆಳವಣಿಗೆ ಅಂದಾಜು

ಮೊದಲ ಆರ್ಥಿಕ ಸಮೀಕ್ಷೆಯು 1950-51ರಲ್ಲಿ ಅಸ್ತಿತ್ವಕ್ಕೆ ಬಂದಿತು, ಅದು ಬಜೆಟ್ ದಾಖಲೆಗಳ ಭಾಗವಾಗಿತ್ತು.

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಆರಂಭ ದಿನವಾದ ಇಂದು ಶುಕ್ರವಾರ ರಾಷ್ಟ್ರಪತಿಗಳ ಭಾಷಣ ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನ ಉಭಯ ಸದನಗಳಲ್ಲಿ 2024-25ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು, ಈ ಸಮೀಕ್ಷೆಯು 2025-26ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 6.3 ಮತ್ತು ಶೇಕಡಾ 6.8ರ ನಡುವೆ ಇರಬಹುದೆಂದು ಅಂದಾಜಿಸಿದೆ.

ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರ ​​ಮಾರ್ಗದರ್ಶನದಲ್ಲಿ ಹಣಕಾಸು ಸಚಿವಾಲಯ ಸಿದ್ಧಪಡಿಸಿದ ವಾರ್ಷಿಕ ವರದಿಯಾದ ಈ ಸಮೀಕ್ಷೆಯು, ಪ್ರಸಕ್ತ ವರ್ಷದ ಭಾರತದ ಆರ್ಥಿಕತೆಯ ಒಳನೋಟ ನೀಡುತ್ತದೆ ಮತ್ತು ಕೇಂದ್ರ ಬಜೆಟ್‌ಗೆ ಮುಂಚಿತವಾಗಿ ನೀತಿ ನಿರೂಪಕರಿಗೆ ಒಂದು ದಿಕ್ಸೂಚಿ ನೀಡುತ್ತದೆ.

ನಿಧಾನಗತಿಯ ಜಿಡಿಪಿ ಬೆಳವಣಿಗೆ, ದುರ್ಬಲ ಬಳಕೆ ಮತ್ತು ಖಾಸಗಿ ಹೂಡಿಕೆ ಮತ್ತು AI ಮತ್ತು ಆಟೋಮೇಶನ್ ಏರಿಕೆಯ ನಡುವೆ ಉದ್ಯೋಗ ಸೃಷ್ಟಿಯಲ್ಲಿನ ತೊಂದರೆಗಳು ಇತ್ಯಾದಿ ಆರ್ಥಿಕತೆ ಸವಾಲುಗಳನ್ನು ಎದುರಿಸುತ್ತಿರುವುದರಿಂದ - ಆರ್ಥಿಕ ಸಮೀಕ್ಷೆಯು ಈ ಕೆಲವು ಸಮಸ್ಯೆಗಳನ್ನು ಪರಿಹರಿಸುವ ನಿರೀಕ್ಷೆಯಿದೆ.

ಹಣಕಾಸು ಸಚಿವಾಲಯ ಮತ್ತು ಅದರ ಅಧಿಕಾರಿಗಳು ಆರ್ಥಿಕ ಸಮೀಕ್ಷೆಯನ್ನು ಸ್ವತಂತ್ರವಾಗಿ ತಯಾರಿಸುತ್ತಾರೆ. ಅದು ಬಜೆಟ್ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಹೇಳಿಕೊಂಡರೂ, ಮುಂಬರುವ ಸಂಭಾವ್ಯ ಬೆಳವಣಿಗೆಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ.

ಮೊದಲ ಆರ್ಥಿಕ ಸಮೀಕ್ಷೆಯು 1950-51ರಲ್ಲಿ ಅಸ್ತಿತ್ವಕ್ಕೆ ಬಂದಿತು, ಅದು ಬಜೆಟ್ ದಾಖಲೆಗಳ ಭಾಗವಾಗಿತ್ತು. 1960 ರ ದಶಕದಲ್ಲಿ, ಇದನ್ನು ಕೇಂದ್ರ ಬಜೆಟ್‌ನಿಂದ ಬೇರ್ಪಡಿಸಿ ಬಜೆಟ್ ಮಂಡನೆಗೆ ಒಂದು ದಿನ ಮೊದಲು ಮಂಡಿಸಲಾಯಿತು. 2025-26 ರ ಕೇಂದ್ರ ಬಜೆಟ್ ನ್ನು ಹಣಕಾಸು ಸಚಿವರು ನಾಳೆ ಮಂಡಿಸಲಿದ್ದಾರೆ.

ಕಳೆದ ವರ್ಷ, ಆರ್ಥಿಕ ಸಮೀಕ್ಷೆಯು ಶೇಕಡಾ 6.5ರಿಂದ ಶೇಕಡಾ 7ರಷ್ಟು ಕಡಿಮೆ ಬೆಳವಣಿಗೆಯ ದರವನ್ನು ಮುನ್ಸೂಚಿಸಿತ್ತು, ಇದು ಆರ್ ಬಿಐ ಯೋಜಿಸಿದ ಶೇಕಡಾ 7.2ಕ್ಕಿಂತ ಕಡಿಮೆಯಾಗಿದೆ. ಸಮೀಕ್ಷೆಯ ವಿಷಯ ಆರ್ಥಿಕ ಸ್ಥಿತಿಸ್ಥಾಪಕತ್ವ ಮತ್ತು 2024 ರ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ನೀತಿಗಳಿಗೆ ಅನ್ವಯಿಸಿತ್ತು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೆಹಲಿಯಲ್ಲಿ ಮುಂಬರುವ 2025-26 ರ ಕೇಂದ್ರ ಬಜೆಟ್‌ಗೆ ಸಂಬಂಧಿಸಿದಂತೆ ಪಾಲುದಾರರು ಮತ್ತು ಕಾರ್ಮಿಕ ಸಂಘಗಳ ಪ್ರತಿನಿಧಿಗಳೊಂದಿಗೆ ಎಂಟನೇ ಬಜೆಟ್ ಪೂರ್ವ ಸಮಾಲೋಚನೆಯ ಅಧ್ಯಕ್ಷತೆ ವಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT