ಓಲಾ ಕ್ಯಾಬ್‌ 
ದೇಶ

ಆ್ಯಪ್ ಆಧಾರಿತ ಕ್ಯಾಬ್‌ಗಳು ಪೀಕ್ ಅವರ್​ನಲ್ಲಿ ದುಪ್ಪಟ್ಟು ಶುಲ್ಕ ವಿಧಿಸಲು ಕೇಂದ್ರ ಅಸ್ತು

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ತನ್ನ 'ಮೋಟಾರು ವಾಹನಗಳ ಅಗ್ರಿಗೇಟರ್ ಮಾರ್ಗಸೂಚಿ 2025'ರಲ್ಲಿ ಪೀಕ್ ಅವರ್ ಅಲ್ಲದ ಸಮಯದಲ್ಲಿ ಮೂಲ ದರದ ಕನಿಷ್ಠ ಶೇಕಡಾ 50 ಇರಬೇಕು ಎಂದು ಹೇಳಿದೆ.

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಉಬರ್, ಓಲಾ ಮತ್ತು ರ್ಯಾಪಿಡೊದಂತಹ ಆ್ಯಪ್ ಆಧಾರಿತ ಕ್ಯಾಬ್‌ಗಳಿಗೆ ಪೀಕ್ ಅವರ್​ನಲ್ಲಿ ಮೂಲ ದರದ ಎರಡು ಪಟ್ಟು ಶುಲ್ಕ ವಿಧಿಸಲು ಅವಕಾಶ ನೀಡಿದೆ. ಈ ಹಿಂದೆ ಒಂದೂವರೆ ಪಟ್ಟು ಮಾತ್ರ ಶುಲ್ಕ ವಿಧಿಸಲು ಅವಕಾಶ ಇತ್ತು.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ತನ್ನ 'ಮೋಟಾರು ವಾಹನಗಳ ಅಗ್ರಿಗೇಟರ್ ಮಾರ್ಗಸೂಚಿ 2025'ರಲ್ಲಿ ಪೀಕ್ ಅವರ್ ಅಲ್ಲದ ಸಮಯದಲ್ಲಿ ಮೂಲ ದರದ ಕನಿಷ್ಠ ಶೇಕಡಾ 50 ಇರಬೇಕು ಎಂದು ಹೇಳಿದೆ.

ಮೂಲ ದರಕ್ಕಿಂತ ಕನಿಷ್ಠ ಶೇಕಡಾ 50 ರಷ್ಟು ಕಡಿಮೆ ಇರಬೇಕು ಮತ್ತು ಪೀಕ್ ಅವರ್​ನಲ್ಲಿ ನಿರ್ದಿಷ್ಟಪಡಿಸಿದ ಮೂಲ ದರದ ಎರಡು ಪಟ್ಟು ಶುಲ್ಕ ವಿಧಿಸಲು ಅಗ್ರಿಗೇಟರ್‌ಗೆ ಅನುಮತಿ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದಲ್ಲದೆ, ಪ್ರಯಾಣಿಕರನ್ನು ಪಿಕ್ ಅಪ್ ಮಾಡಲು ತೆರಳಿದ ದೂರ ಮತ್ತು "ಡೆಡ್ ಮೈಲೇಜ್" ಅನ್ನು ಸರಿದೂಗಿಸಲು ವಿಧಿಸಬಹುದಾದ ಮೂಲ ದರವು ಕನಿಷ್ಠ ಮೂರು ಕಿಲೋಮೀಟರ್‌ಗಳಾಗಿರಬೇಕು.

ಮಾರ್ಗಸೂಚಿಗಳ ಪ್ರಕಾರ, ವಿವಿಧ ಮಾದರಿಯ ಮೋಟಾರು ವಾಹನಗಳಿಗೆ ರಾಜ್ಯ ಸರ್ಕಾರ ನಿಗದಿಪಡಿಸಿದ ದರವೇ ಅಗ್ರಿಗೇಟರ್‌ಗಳು ಗ್ರಾಹಕರಿಗೆ ವಿಧಿಸಬೇಕಾದ ಮೂಲ ದರವಾಗಿರುತ್ತದೆ ಎಂದು ತಿಳಿಸಲಾಗಿದೆ.

ರಾಜ್ಯಗಳು ಮೂರು ತಿಂಗಳೊಳಗೆ ಈ ಪರಿಷ್ಕೃತ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಸೂಚಿಸಿದೆ.

ರದ್ದತಿ ಸಂದರ್ಭದಲ್ಲಿ, ಅಗ್ರಿಗೇಟರ್ ಮಾನ್ಯವೆಂದು ಗುರುತಿಸಲಾದ ಕಾರಣವಿಲ್ಲದೆ ಬುಕ್ಕಿಂಗ್ ರದ್ದು ಮಾಡಿದರೆ, ಚಾಲಕನಿಗೆ 100 ರೂ. ಮೀರದ ಪ್ರಯಾಣ ದರದ ಶೇಕಡಾ 10 ರಷ್ಟು ದಂಡ ವಿಧಿಸಲಾಗುತ್ತದೆ. ಅಲ್ಲದೆ ಸೂಕ್ತ ಕಾರಣವಿಲ್ಲದೆ ಬುಕ್ಕಿಂಗ್ ರದ್ದು ಮಾಡುವ ಪ್ರಯಾಣಿಕರಿಗೆ ಇದೇ ರೀತಿಯ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ; ಸಿದ್ದರಾಮಯ್ಯ ಘೋಷಣೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT