ಪುಣೆ: ಕೊರಿಯರ್ ಡೆಲಿವರಿ ಏಜೆಂಟ್ ಹೆಸರಿನಲ್ಲಿ ಫ್ಲ್ಯಾಟ್ ಗೆ ನುಗ್ಗಿದ ಅಪರಿಚಿತ ಕಾಮುಕನೊಬ್ಬ ಯುವತಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಪುಣೆಯಲ್ಲಿ ನಡೆದಿದೆ. 22 ವರ್ಷದ ಯುವತಿ ಐಟಿ ಉದ್ಯೋಗಿಯಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮಹಾರಾಷ್ಟ್ರದ ಪುಣೆ ನಗರದ ಕೊಂಧ್ವಾ ಪ್ರದೇಶದ ಹೌಸಿಂಗ್ ಸೊಸೈಟಿಯಲ್ಲಿ ಬುಧವಾರ ರಾತ್ರಿ 7.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ನಗರದ ಕಾಲೇಜೊಂದರಲ್ಲಿ ಐಟಿ ವ್ಯಾಸಂಗ ಮಾಡಿದ್ದ ಸಂತ್ರಸ್ತೆ, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ಸಹೋದರ ಹೊರಗೆ ಹೋಗಿದ್ದರಿಂದ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬಳೇ ಇದ್ದಾಗ ಕೊರಿಯಲ್ ಕೊರಿಯರ್ ಡೆಲಿವರಿ ಏಜೆಂಟ್‌ನಂತೆ ಫ್ಲ್ಯಾಟ್ ಗೆ ಬಂದ ಅಪರಿಚಿತ ವ್ಯಕ್ತಿ, ದಾಖಲೆಗಳಿಗೆ ಸಹಿ ಮಾಡಲು ಪೆನ್ ಕೇಳಿದ್ದಾನೆ. ಆಕೆ ಆತನ ಕಡೆಗೆ ತಿರುಗುತ್ತಿದ್ದಂತೆಯೇ ಮನೆಯೊಳಗೆ ಬಂದು ಬಾಗಿಲು ಬಂದ್ ಮಾಡಿ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಸಂತ್ರಸ್ತೆಯ ಫೋನ್‌ನಲ್ಲಿ ಸೆಲ್ಫಿ ಕೂಡ ಕ್ಲಿಕ್ಕಿಸಿದ್ದಾನೆ, ಅದರಲ್ಲಿ ಆಕೆಯ ಬೆನ್ನು ಮತ್ತು ಅವನ ಮುಖ ಭಾಗಶಃ ಕಾಣಿಸುತ್ತಿದೆ. ಒಂದು ವೇಳೆ ಯಾರಿಗಾದರೂ ಬಾಯ್ಬಿಟ್ಟರೆ ಈ ಫೋಟೋಗಳನ್ನು ವೈರಲ್ ಮಾಡಿರುವುದಾಗಿ ಆಕೆಯ ಫೋನ್ ಗೆ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಮತ್ತೆ ಬರುವುದಾಗಿಯೂ ಹೇಳಿದ್ದಾನೆ ಎಂದು ಡಿಸಿಪಿ ರಾಜ್ ಕುಮಾರ್ ಶಿಂಧೆ ಮಾಹಿತಿ ನೀಡಿದ್ದಾರೆ.
ಆರೋಪಿಯು ಯುವತಿ ಮೇಲೆ ಪೆಪ್ಪರ್ ಸ್ಪ್ರೈ ಬಳಸಿ ಈ ಕೃತ್ಯ ಎಸಗಿದ್ದಾನೆಯೇ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಂಕಿತನ ಸ್ಕೆಚ್ ಬಿಡಿಸಲಾಗುತ್ತಿದ್ದು, ಹೌಸಿಂಗ್ ಸೂಸೈಟಿಯ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64( ಅತ್ಯಾಚಾರಕ್ಕೆ ಶಿಕ್ಷೆ) 352 (2) ಕ್ರಿಮಿನಲ್ ಬೆದರಿಕೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಕಾಲೇಜಿನಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಓದಿರುವ ಮತ್ತು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತೆ, ತನ್ನ ಸಹೋದರ ಪಟ್ಟಣದಿಂದ ಹೊರಗೆ ಹೋಗಿದ್ದರಿಂದ ತನ್ನ ಅಪಾರ್ಟ್ಮೆಂಟ್ನಲ್ಲಿ ಒಬ್ಬಂಟಿಯಾಗಿದ್ದಳು ಎಂದು ಅಧಿಕಾರಿ ಹೇಳಿದರು.
"ರಾತ್ರಿ 8.30 ರ ಸುಮಾರಿಗೆ ಮಹಿಳೆಗೆ ಪ್ರಜ್ಞೆ ಬಂದಿದ್ದರಿಂದ ಆಕೆಗೆ ಏನೂ ನೆನಪಿಲ್ಲ. ನಂತರ ಮಹಿಳೆ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಳು ಮತ್ತು ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು" ಎಂದು ಶಿಂಧೆ ಹೇಳಿದರು.
ಆರೋಪಿಯು ಅವಳನ್ನು ಪ್ರಜ್ಞೆ ಕಳೆದುಕೊಳ್ಳಲು ಯಾವುದೋ ವಸ್ತುವನ್ನು ಬಳಸಿರುವ ಸಾಧ್ಯತೆಯಿದೆ.