ಎಫ್-35ಬಿ ಫೈಟರ್ ಜೆಟ್ 
ದೇಶ

ಜಗತ್ತಿನ ಬಲಿಷ್ಠ ಫೈಟರ್ ಜೆಟ್‌ಗೆ ಏನಾಯ್ತು? F-35 ಅನ್ನು ಬಿಡಿಭಾಗಗಳಾಗಿ ಬಿಚ್ಚಿ ಭಾರತದಿಂದ ಬ್ರಿಟನ್‌ಗೆ ಏರ್ ಲಿಫ್ಟ್!

ಬ್ರಿಟಿಷ್ ರಾಯಲ್ ನೇವಿಯ ಎಫ್-35ಬಿ ಫೈಟರ್ ಜೆಟ್ ಅನ್ನು ಬಿಡಿಭಾಗಗಳಾಗಿ ಬಿಚ್ಚಿ ಮಿಲಿಟರಿ ಸರಕು ವಿಮಾನದ ಮೂಲಕ ಯುನೈಟೆಡ್ ಕಿಂಗ್‌ಡಮ್‌ಗೆ ಏರ್ ಲಿಫ್ಟ್ ಮಾಡಲಾಗುತ್ತದೆ.

ನವದೆಹಲಿ: ಕಳೆದ ಜೂನ್ 14ರಂದು ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ್ದ ಬ್ರಿಟಿಷ್ ರಾಯಲ್ ನೇವಿಯ ಎಫ್-35ಬಿ ಫೈಟರ್ ಜೆಟ್ ಅನ್ನು ಬಿಡಿಭಾಗಗಳಾಗಿ ಬಿಚ್ಚಿ ಮಿಲಿಟರಿ ಸರಕು ವಿಮಾನದ ಮೂಲಕ ಯುನೈಟೆಡ್ ಕಿಂಗ್‌ಡಮ್‌ಗೆ ಏರ್ ಲಿಫ್ಟ್ ಮಾಡುವ ಸಾಧ್ಯತೆಯಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಐದನೇ ತಲೆಮಾರಿನ ಸ್ಟೆಲ್ತ್ ಜೆಟ್ ಅನ್ನು ಸ್ಥಳದಲ್ಲಿಯೇ ದುರಸ್ತಿ ಮಾಡಲು ಹಲವು ಬಾರಿ ಪ್ರಯತ್ನಿಸಿದರೂ ರಿಪೇರಿಯಾಗುತ್ತಿಲ್ಲ. ತಾಂತ್ರಿಕ ದೋಷದಿಂದಾಗಿ ವಿಮಾನವು ಕೇರಳದಲ್ಲಿಯೇ ಉಳಿದಿದೆ ಎಂದು ವರದಿ ತಿಳಿಸಿದೆ. ಜೆಟ್‌ನ ಹಾರಾಟದ ಸಿದ್ಧತೆಯನ್ನು ಪುನಃಸ್ಥಾಪಿಸಲು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಅಗತ್ಯ ದುರಸ್ತಿ ನಡೆಸಲು ಸುಮಾರು 30 ಎಂಜಿನಿಯರ್‌ಗಳು ತಿರುವನಂತಪುರಂಗೆ ಬರುವ ನಿರೀಕ್ಷೆಯಿದ್ದರೂ, ಯುನೈಟೆಡ್ ಕಿಂಗ್‌ಡಮ್‌ನಿಂದ ಯಾವುದೇ ಎಂಜಿನಿಯರಿಂಗ್ ತಂಡ ಇನ್ನೂ ಭಾರತಕ್ಕೆ ಬಂದಿಲ್ಲ ಎಂದು ವರದಿ ಗಮನಿಸಿದೆ.

ನಿರ್ದಿಷ್ಟ ಸಮಯದಲ್ಲಿ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆಯೇ ಎಂಬ ಅನುಮಾನಗಳಿವೆ. ಹೀಗಾಗಿ ಬ್ರಿಟಿಷ್ ಅಧಿಕಾರಿಗಳು ಈಗ ವಿಮಾನವನ್ನು ಹಿಂದಕ್ಕೆ ತರಿಸಿಕೊಳ್ಳಲು ಪರ್ಯಾಯ ಯೋಜನೆಗಳನ್ನು ಪರಿಗಣಿಸುತ್ತಿದ್ದಾರೆ. ವರದಿಯ ಪ್ರಕಾರ, ಜೆಟ್ ಅನ್ನು ಬಿಡಿಭಾಗಗಳಾಗಿ ಬಿಚ್ಚಿ ಮಿಲಿಟರಿ ಸಾರಿಗೆಯ ಮೂಲಕ ಅದನ್ನು ಹಿಂದಕ್ಕೆ ತರಿಸಿಕೊಳ್ಳವುದೇ ಬ್ರಿಟನ್ ಮುಂದಿರುವ ಕೊನೆಯ ಆಯ್ಕೆಯಾಗಿದೆ.

HMS ಪ್ರಿನ್ಸ್ ಆಫ್ ವೇಲ್ಸ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್‌ನ ಭಾಗವಾಗಿದ್ದ F-35B ಕೇರಳದ ಕರಾವಳಿಯಿಂದ ಸುಮಾರು 100 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಆದರೆ ಕೆಟ್ಟ ಹವಾಮಾನ ಮತ್ತು ಕಡಿಮೆ ಇಂಧನದ ಕಾರಣದಿಂದಾಗಿ ಅದನ್ನು ತಿರುವನಂತಪುರಕ್ಕೆ ತಿರುಗಿಸಬೇಕಾಯಿತು. ಭಾರತೀಯ ವಾಯುಪಡೆಯು ತುರ್ತು ಲ್ಯಾಂಡಿಂಗ್ ಗೆ ಅವಕಾಶ ನೀಡಿದ್ದು ತಕ್ಷಣದ ಲಾಜಿಸ್ಟಿಕಲ್ ವ್ಯವಸ್ಥೆಯನ್ನು ಕಲ್ಪಿಸಿತ್ತು.

ಆದಾಗ್ಯೂ, ಜೆಟ್ ತನ್ನ ವಾಹಕಕ್ಕೆ ಹಿಂತಿರುಗುವ ಮೊದಲು ನಿರ್ಗಮನ ಪೂರ್ವ ತಪಾಸಣೆಯ ಸಮಯದಲ್ಲಿ, ಹೈಡ್ರಾಲಿಕ್ ವೈಫಲ್ಯ ಪತ್ತೆಯಾಗಿದೆ. ಈ ಅಸಮರ್ಪಕ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಾರಣ ಇದು ಜೆಟ್‌ ಅನ್ನು ಸುರಕ್ಷಿತವಾಗಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡುವ ವೇಳೆ ಉಪಾಯ ಉಂಟಾಗಬಹುದು. ಮೂವರು ತಂತ್ರಜ್ಞರನ್ನು ಒಳಗೊಂಡ ಒಂದು ಸಣ್ಣ ರಾಯಲ್ ನೇವಿ ತಂಡವು ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿತು. ಆದರೆ ದೋಷದ ಸಂಕೀರ್ಣತೆಯಿಂದಾಗಿ ದುರಸ್ತಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಫೈಟರ್ ಜೆಟ್ ಅನ್ನು ವಿಮಾನ ನಿಲ್ದಾಣದ ಬೇ 4ರಲ್ಲಿ ನಿಲ್ಲಿಸಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಭದ್ರತೆ ನೀಡಿದೆ. ಆರಂಭದಲ್ಲಿ, ಕೇರಳದಲ್ಲಿ ನಡೆಯುತ್ತಿರುವ ಮಾನ್ಸೂನ್ ಮಳೆಯ ಹೊರತಾಗಿಯೂ ಜೆಟ್ ಅನ್ನು ಹ್ಯಾಂಗರ್‌ಗೆ ಸ್ಥಳಾಂತರಿಸಲು ಏರ್ ಇಂಡಿಯಾದಿಂದ ಬಂದ ಪ್ರಸ್ತಾಪವನ್ನು ರಾಯಲ್ ನೇವಿ ನಿರಾಕರಿಸಿತ್ತು. ಆದರೆ ನಂತರ ಸ್ಥಳಾಂತರಕ್ಕೆ ಒಪ್ಪಿಕೊಂಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

SCROLL FOR NEXT