ಸೂರತ್: ಸೂರತ್‌ನಿಂದ ಜೈಪುರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ಹೊರಡುವ ಮೊದಲು ವಿಮಾನದ ಲಗೇಜ್ ವಿಭಾಗದ ಬಾಗಿಲಿನ ಮೇಲೆ ಜೇನುನೊಣಗಳ ಗುಂಪೊಂದು ಕಾಣಿಸಿಕೊಂಡ ನಂತರ ಸುಮಾರು 45 ನಿಮಿಷಗಳ ಕಾಲ ವಿಳಂಬವಾದ ಘಟನೆ ವರದಿಯಾಗಿದೆ.
ಸೋಮವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ ಎಂದು ಸೂರತ್ ವಿಮಾನ ನಿಲ್ದಾಣದ ನಿರ್ದೇಶಕ ಎ.ಎನ್. ಶರ್ಮಾ ಹೇಳಿದ್ದಾರೆ.
"ವಿಮಾನವನ್ನು ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದಾಗ, ವಿಮಾನದಲ್ಲಿ ಲಗೇಜ್ ನ್ನು ಲೋಡ್ ಮಾಡುವಾಗ ತೆರೆದಿದ್ದ ಸರಕು ಬಾಗಿಲಿನ ಅಂಚಿನಲ್ಲಿ ಜೇನುನೊಣಗಳು ಸೇರಿರುವುದನ್ನು ನೆಲದ ಸಿಬ್ಬಂದಿ ಗಮನಿಸಿದರು" ಎಂದು ಅವರು ಹೇಳಿದರು.
"ಎಚ್ಚರಿಕೆಯ ನಂತರ, ನಮ್ಮ ಅಗ್ನಿಶಾಮಕ ವಾಹನ ಸ್ಥಳಕ್ಕೆ ಬಂದು ನೀರನ್ನು ಸಿಂಪಡಿಸುವ ಮೂಲಕ ತೆರೆದ ಬಾಗಿಲಿನ ಅಂಚಿನಿಂದ ಜೇನುನೊಣಗಳನ್ನು ತೆಗೆದುಹಾಕಿತು. ಈ ಘಟನೆಯು ಸೂರತ್-ಜೈಪುರ ವಿಮಾನದ ನಿರ್ಗಮನವನ್ನು ಸುಮಾರು 45 ನಿಮಿಷಗಳ ಕಾಲ ವಿಳಂಬಗೊಳಿಸಿತು" ಎಂದು ಶರ್ಮಾ ಹೇಳಿದರು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಹೇಳಿದರು.
ಎಲ್ಲಾ ಪ್ರಯಾಣಿಕರು ಅದಾಗಲೇ ವಿಮಾನ ಹತ್ತಿದ್ದರು, ಮತ್ತು ವಿಮಾನದಲ್ಲಿದ್ದವರಲ್ಲಿ ಒಬ್ಬರು ತಮ್ಮ ಮೊಬೈಲ್ ಫೋನ್‌ನಲ್ಲಿ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ, ಅದರ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಶರ್ಮಾ ಪ್ರಕಾರ, ಈ ರೀತಿಯ ಘಟನೆ ಮೊದಲ ಬಾರಿಗೆ ಸೂರತ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ.
"ಜೇನುನೊಣಗಳು ಮಳೆಗಾಲದಲ್ಲಿ ಇಂತಹ ವರ್ತನೆಯನ್ನು ಪ್ರದರ್ಶಿಸುತ್ತವೆ, ಈ ಹಿಂದೆ ಇತರ ವಿಮಾನ ನಿಲ್ದಾಣಗಳಲ್ಲಿಯೂ ಇದೇ ರೀತಿಯ ಘಟನೆಗಳು ನಡೆದಿವೆ. ಆದಾಗ್ಯೂ, ಸೂರತ್ ವಿಮಾನ ನಿಲ್ದಾಣದಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲು" ಎಂದು ಅವರು ಹೇಳಿದರು.