ಗುರುಗ್ರಾಮ: ಹೆತ್ತ ತಂದೆಯೇ ರಾಜ್ಯ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ಗುರುವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಶಾಂತ್ ಲೋಕ್‌ನಲ್ಲಿರುವ ಅವರ ಎರಡು ಅಂತಸ್ತಿನ ಮನೆಯಲ್ಲಿ ಅವರ ತಂದೆಯೇ ಅಡುಗೆ ಮಾಡುತ್ತಿದ್ದ 25 ವರ್ಷದ ಮಗಳಿಗೆ ಹಿಂದಿನಿಂದ ಗುಂಡು ಹಾರಿಸಿದ್ದು, ರಾಧಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಗಳನ್ನು ಹತ್ಯೆ ಮಾಡಿದ ತಂದೆ, 49 ವರ್ಷದ ದೀಪಕ್ ಯಾದವ್ ಅವರನ್ನು ಬಂಧಿಸಲಾಗಿದೆ ಮತ್ತು ಅವರ ಬಳಿಯಿದ್ದ .32 ಬೋರ್ ಪರವಾನಗಿ ಪಡೆದ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳ ಕೊಲೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಮಗಳ ಮೇಲೆ ತಂದೆ ಐದುಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ನಡೆದಾಗ ಹರಿಯಾಣ ಪರ ಟೆನಿಸ್ ಆಡುತ್ತಿದ್ದ ರಾಧಿಕಾ ಮೊದಲ ಮಹಡಿಯ ಅಡುಗೆಮನೆಯಲ್ಲಿದ್ದರೆ, ಅವರ ತಾಯಿ ನೆಲ ಮಹಡಿಯಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ನಾವು ಕುಟುಂಬ ಸದಸ್ಯರನ್ನು ಪ್ರಶ್ನಿಸುತ್ತಿದ್ದೇವೆ ಮತ್ತು ಪ್ರಕರಣದ ತನಿಖೆ ನಡೆಯುತ್ತಿದೆ" ಎಂದು ಸೆಕ್ಟರ್ 56 ಪೊಲೀಸ್ ಠಾಣೆಯ SHO ಇನ್ಸ್‌ಪೆಕ್ಟರ್ ವಿನೋದ್ ಕುಮಾರ್ ಹೇಳಿದ್ದಾರೆ.
ಕುಟುಂಬವು ಸುಶಾಂತ್ ಲೋಕ್-ಹಂತ 2, ಸೆಕ್ಟರ್ 57 ರಲ್ಲಿ ವಾಸಿಸುತ್ತಿದೆ. ತಂದೆ ವಜೀರಾಬಾದ್ ಗ್ರಾಮದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.