T20 World Cup 2026: ಗಾಯಗೊಂಡ ರಾಣಾ ಬದಲಿಗೆ ಭಾರತ ತಂಡ ಸೇರಲಿದ್ದಾರೆ ಸಿರಾಜ್

ಹರ್ಷಿತ್ ರಾಣಾ ಅವರನ್ನು ಗಾಯದ ಕಾರಣದಿಂದಾಗಿ 2026ರ ಟಿ20 ವಿಶ್ವಕಪ್‌ನಿಂದ ಹೊರಗಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
Mohammed Siraj to replace injured Harshit Rana in T20 WC squad
ಮೊಹಮ್ಮದ್ ಸಿರಾಜ್
Updated on

2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯವಳಿ ಆರಂಭಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗಲೇ ಟೀಂ​ ಇಂಡಿಯಾಗೆ ದೊಡ್ಡ ಆಘಾತವಾಗಿದ್ದು, ಭಾರತ ತಂಡದ ಯುವ ವೇಗಿ ಹರ್ಷಿತ್ ರಾಣಾ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ರಾಣಾ ಅವರ ಸ್ಥಾನದಲ್ಲಿ ಮತ್ತೊಬ್ಬ ವೇಗಿ ಮೊಹಮ್ಮದ್ ಸಿರಾಜ್ ಆಡುವ ಸಾಧ್ಯತೆ ಇದೆ.

ಹರ್ಷಿತ್ ರಾಣಾ ಅವರನ್ನು ಗಾಯದ ಕಾರಣದಿಂದಾಗಿ 2026ರ ಟಿ20 ವಿಶ್ವಕಪ್‌ನಿಂದ ಹೊರಗಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಭ್ಯಾಸ ಪಂದ್ಯದ ವೇಳೆ ರಾಣಾ ಮೊಣಕಾಲು ಗಾಯಕ್ಕೆ ತುತ್ತಾಗಿದ್ದು ಸಕಾಲದಲ್ಲಿ ಚೇತರಿಸಿಕೊಳ್ಳಲು ವಿಫಲರಾದ ಕಾರಣ ತಂಡದಿಂದ ಹೊರಬಿದ್ದಿದ್ದಾರೆ. ಇದರೊಂದಿಗೆ ರಾಣಾ ಅವರ ವಿಶ್ವಕಪ್​ ಆಡುವ ಕನಸು ಭಗ್ನಗೊಂಡಿದೆ.

Mohammed Siraj to replace injured Harshit Rana in T20 WC squad
T20 World Cup 2026: ಟೀಂ ಇಂಡಿಯಾಗೆ ಸಂಕಷ್ಟ; ಪಂದ್ಯಾವಳಿಯಿಂದಲೇ ಹೊರಗುಳಿದ ಹರ್ಷಿತ್ ರಾಣಾ!

ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ ನಡೆದ ಟೀಮ್ ಇಂಡಿಯಾದ ಟಿ20 ವಿಶ್ವಕಪ್ 2026 ರ ಅಭ್ಯಾಸ ಪಂದ್ಯದ ಸಮಯದಲ್ಲಿ ಹರ್ಷಿತ್ ರಾಣಾ ಗಾಯಗೊಂಡಿದ್ದರು. ಅಭ್ಯಾಸ ಪಂದ್ಯದ ಸಮಯದಲ್ಲಿ ಹರ್ಷಿತ್ ಕುಂಟುತ್ತಾ ಮೈದಾನದಿಂದ ಹೊರನಡೆದಿದ್ದರು ಮತ್ತು ಅವರು ಕೀಲು ನೋವಿನಿಂದ ಬಳಲುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದ ನಂತರ ನಡೆದ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರು, ಫೆಬ್ರುವರಿ 7ರಿಂದ ಆರಂಭವಾಗುವ ಪಂದ್ಯಾವಳಿಯಲ್ಲಿ ಭಾರತವು ಮೊದಲ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಆಡಲಿದೆ. 'ಹರ್ಷಿತ್ ಉತ್ತಮವಾಗಿ ಕಾಣುತ್ತಿಲ್ಲ. ಈ ಬಗ್ಗೆ ಇಂದು ನಮಗೆ ತಿಳಿಯುತ್ತಿದೆ' ಎಂದು ಹೇಳಿದ್ದರು.

ರಾಣಾ ಬದಲಿಗೆ ಟೀಮ್ ಇಂಡಿಯಾದ ಮತ್ತೊಬ್ಬ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಭಾರತೀಯ ತಂಡದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com