ಸಂಗ್ರಹ ಚಿತ್ರ 
ದೇಶ

ದೆಹಲಿ-NCRನಲ್ಲಿ ಪ್ರಬಲ ಭೂಕಂಪನ: ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲು; ಜನರಲ್ಲಿ ಆತಂಕ

ಬೆಳಗ್ಗೆ 9 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಈ ವೇಳೆ ಜನರು ಭಯಭೀತರಾಗಿ ಮನೆ-ಕಚೇರಿಗಳಿಂದ ಹೊರಗೆ ಓಡಿಬಂದಿದ್ದಾರೆ.

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗುರುವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ.

ಆರಂಭಿಕ ಮಾಹಿತಿಯ ಪ್ರಕಾರ, ಭೂಕಂಪದ ಕೇಂದ್ರಬಿಂದು ಹರಿಯಾಣದ ಜಜ್ಜರ್‌ನಿಂದ ಈಶಾನ್ಯಕ್ಕೆ 4 ಕಿ.ಮೀ ದೂರದಲ್ಲಿದ್ದು, 14 ಕಿ.ಮೀ ಆಳದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬೆಳಗ್ಗೆ 9 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಈ ವೇಳೆ ಜನರು ಭಯಭೀತರಾಗಿ ಮನೆ-ಕಚೇರಿಗಳಿಂದ ಹೊರಗೆ ಓಡಿಬಂದಿದ್ದಾರೆ.

ದೆಹಲಿ, ನೋಯ್ಡಾ, ಗುರುಗ್ರಾಮ್, ಗಾಜಿಯಾಬಾದ್ ಗಳಲ್ಲಿ ಭೂಕಂಪದ ಅನುಭವವಾಗಿದೆ. ಹರಿಯಾಣದ ರೋಹ್ಟಕ್‌ನಲ್ಲೂ ಪರಿಣಾಮ ಎದುರಿಸಲಾಗಿದ್ದು, ರಸ್ತೆಗಳಲ್ಲಿ ವಾಹನಗಳು ಅಲುಗಾಡಿದ ಅನುಭವವಾಗಿದೆ.

ಹರಿಯಾಣದ ಜಿಂದ್ ಮತ್ತು ಬಹದ್ದೂರ್‌ಗಢ ಹೊರತುಪಡಿಸಿ, ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಪ್ರದೇಶಗಳು ಸಹ 10 ಸೆಕೆಂಡುಗಳ ಕಾಲ ಕಂಪನವನ್ನು ಅನುಭವಿಸಿದವು.

ಕಳೆದ ಆರು ತಿಂಗಳಲ್ಲಿ ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಇದು ಮೂರನೇ ಭೂಕಂಪವಾಗಿದೆ. ಇದಕ್ಕೂ ಮೊದಲು, ಏಪ್ರಿಲ್ 19 ಮತ್ತು ಫೆಬ್ರವರಿ 17 ರಂದು ಸಹ ಭೂಕಂಪಗಳು ಸಂಭವಿಸಿದ್ದವು.

ಭೂಕಂಪನದ ಜೊತೆಗೆ ದೆಹಲಿ ಮತ್ತು ಎನ್'ಸಿಆರ್ ನಲ್ಲಿ ಬುಧವಾರ ಸಂಜೆಯಿಂದ ಮಳೆಯಾಗುತ್ತಿದೆ. ಈ ಮಳೆ ಈ ಮಾನ್ಸೂನ್‌ನಲ್ಲಿ ಅತ್ಯಂತ ಹೆಚ್ಚಿನ ಮಳೆಯಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಈ ರಣಮಳೆ ಸುರಿದಿದೆ. ಮಳೆಯ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ಲೆಕ್ಕಾಚಾರವೇ ತಲೆಕೆಳಗೆ: Iran ನಿಂದ ವೇಗವಾಗಿ ಶಸ್ತ್ರಾಸ್ತ್ರ ನೆಲೆಗಳ ಪುನರ್‌ನಿರ್ಮಾಣ, ಈಗಾಗಲೇ ಡ್ರೋನ್ ಉತ್ಪಾದನೆ ಆರಂಭ: ವರದಿ

No police, No court: ಅಕ್ರಮ ಬಾಂಗ್ಲಾ ವಲಸಿಗರು ಇನ್ನು ಮುಂದೆ ನೇರ BSF ವಶಕ್ಕೆ: CM ಸುವೇಂದು ಅಧಿಕಾರಿ ಸೂಚನೆ

IPL 2026: ಕೊನೆಗೂ 13 ವರ್ಷಗಳ ಹಳೆಯ Chris Gayle ದಾಖಲೆ ಮುರಿದ Sai Sudharsan

IPL 2026: CSK ಫ್ಲೇಆಫ್ ಕನಸು ಛಿದ್ರ, GT ವಿರುದ್ಧ 89 ರನ್ ಗಳ ಹೀನಾಯ ಸೋಲು, Dhoni ಇಲ್ಲದೇ ಅಭಿಯಾನ ಮುಕ್ತಾಯ!

ಗೋವು ಬಲಿ ಈದ್‌ ಆಚರಣೆಗೆ ಕಡ್ಡಾಯವಲ್ಲ: ಗೋಹತ್ಯೆ ನಿಷೇಧ ಎತ್ತಿಹಿಡಿದ ಕೋಲ್ಕತ್ತಾ ಹೈಕೋರ್ಟ್

SCROLL FOR NEXT