ಸಾಂದರ್ಭಿಕ ಚಿತ್ರ 
ದೇಶ

ಘಾಜಿಯಾಬಾದ್‌: ಇನ್‌ಸ್ಟಾಗ್ರಾಂ ಪರಿಚಯ ತಂದ ಕುತ್ತು; ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ನಾಲ್ವರು ಬಾಲಕರ ವಿರುದ್ಧ ದೂರು

ನಾಲ್ವರಲ್ಲಿ ಮೂವರು ಬಾಲಕರು ಸಂತ್ರಸ್ತೆಯ ಶಾಲೆಯಲ್ಲೇ ಓದುತ್ತಿದ್ದು, ಪರಿಚಿತರಾಗಿದ್ದಾರೆ. ಭಾನುವಾರ ಬೆಳಿಗ್ಗೆ ಘಟನೆ ನಡೆದಿದ್ದು, ಆ ಸಂದರ್ಭದಲ್ಲಿ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು.

ಘಾಜಿಯಾಬಾದ್‌: ದೆಹಲಿಯ ಘಾಜಿಯಾಬಾದ್‌ನಲ್ಲಿ 9 ತರಗತಿ ವಿದ್ಯಾರ್ಥಿನಿಯ ಮೇಲೆ ಆಕೆ ಮನೆಯಲ್ಲೇ ಅತ್ಯಾಚಾರ ಎಸಗಿದ ಆರೋಪದಡಿ ನಾಲ್ವರು ಬಾಲಕರ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನಾಲ್ವರಲ್ಲಿ ಮೂವರು ಬಾಲಕರು ಸಂತ್ರಸ್ತೆಯ ಶಾಲೆಯಲ್ಲೇ ಓದುತ್ತಿದ್ದು, ಪರಿಚಿತರಾಗಿದ್ದಾರೆ. ಭಾನುವಾರ ಬೆಳಿಗ್ಗೆ ಘಟನೆ ನಡೆದಿದ್ದು, ಆ ಸಂದರ್ಭದಲ್ಲಿ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು. ತಾಯಿ ಮಾರುಕಟ್ಟೆಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಬಾಲಕನಿಗೆ ಸಂತ್ರಸ್ತೆ ಆಗಾಗ್ಗ ಸಂದೇಶ ಕಳುಹಿಸುತ್ತಿದ್ದಳು. ಭಾನುವಾರ ಬೆಳಿಗ್ಗೆ 11.30ಕ್ಕೆ ಆತ ಇವರ ಮನೆಗೆ ಬಂದು ಬಾಗಿಲು ಬಡಿದಿದ್ದಾನೆ. ಜತೆಗೆ ತನ್ನೊಂದಿಗೆ ಇತರ ಮೂವರನ್ನೂ ಕರೆದುಕೊಂಡು ಬಂದಿದ್ದಾನೆ. ಬಾಲಕಿಯನ್ನು ಬಲವಂತವಾಗಿ ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾರುಕಟ್ಟೆಗೆ ಹೋಗಿದ್ದ ತಾಯಿ ಮನೆಗೆ ಮರಳಿದ್ದಾರೆ. ಬಾಗಿಲು ತೆರೆದಿದ್ದನ್ನು ಕಂಡು ಗಾಬರಿಯಾದ ಅವರು, ನೇರವಾಗಿ ಕೋಣೆಗೆ ಹೋಗಿದ್ದಾರೆ. ಅಲ್ಲಿ ಬಾಲಕಿಯೊಂದಿಗೆ ನಾಲ್ವರು ಹುಡುಗರನ್ನು ಕಂಡ ಅವರು, ತಕ್ಷಣ ಕೊಠಡಿಯ ಬಾಗಿಲು ಹಾಕಿ ಬೀಗ ಹಾಕಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸರು ಮನೆಗೆ ಬರುವುದರೊಳಗಾಗಿ ವಸತಿ ಸಮುಚ್ಚಯದ ಆಡಳಿತ ಮಂಡಳಿಯ ಸದಸ್ಯರು ಬಾಲಕಿ ಮನೆಗೆ ತೆರಳಿ, ಬಾಲಕರನ್ನು ಬಿಡಿಸಿ ಹೊರಕ್ಕೆ ಕಳುಹಿಸಿದ್ದಾರೆ. ಬಾಲಕಿಯ ತಂದೆ ನಾಲ್ವರು ಹುಡುಗರ ವಿರುದ್ಧ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿತ ಬಾಲಕರು 11, 10 ಹಾಗೂ 9 ನೇ ತರಗತಿಯವರಾಗಿದ್ದಾರೆ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ. ಹೇಳಿಕೆಯನ್ನು ಈವರೆಗೂ ದಾಖಲಿಸಿಕೊಂಡಿಲ್ಲ. ಆರೋಪಿತರ ಬಂಧನ ಈವರೆಗೂ ಆಗಿಲ್ಲ. ಪ್ರಕರಣ ತನಿಖೆಯ ಹಂತದಲ್ಲಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಮತ್ತೆ ಸುಪ್ರೀಂ ಕೋರ್ಟ್ ಶಾಕ್‌; ʻದಾಸʼನಿಗೆ 1 ವರ್ಷ ಜೈಲೇ ಗತಿ!

ಅಕ್ರಮವಾಗಿ ಮಸೀದಿಗಳಲ್ಲಿ SIR: ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು; ವಿಡಿಯೋ ರಿಲೀಸ್‌

ದಾವಣಗೆರೆ: ಕಲ್ಲಿನಿಂದ ತಲೆ ಜಜ್ಜಿ ಬರ್ಬರವಾಗಿ ಪತಿ ಹತ್ಯೆಗೈದ ಪತ್ನಿ; ಸಾಥ್​ ನೀಡಿದ ಪುತ್ರ! ಇಲ್ಲಿದೆ ಕಾರಣ...

ಶಾಂತಿ ಮಾತುಕತೆಗೆ ಅಡ್ಡಿ: Iran ಸಂಧಾನಕಾರರ ಹತ್ಯೆಗೆ Israel ಭಾರೀ ಸಂಚು; ಮಧ್ಯಪ್ರಾಚ್ಯ ರಾಷ್ಟ್ರಗಳ ಮೂಲಕ ಎಚ್ಚರಿಕೆ ರವಾನಿಸಿದ ಅಮೆರಿಕಾ..!

Voter ID, PAN.. ಪೌರತ್ವ ಸಾಬೀತಿಗೆ ಸಲ್ಲಿಸಿದ್ದ 16 ದಾಖಲೆಗಳನ್ನೂ ತಿರಸ್ಕರಿಸಿದ ಹೈಕೋರ್ಟ್: ನ್ಯಾಯಾಧೀಶರು ಹೇಳಿದ್ದೇನು?