ಮುಂಬೈ: ಶಿವಸೇನೆ ಶಾಸಕ ಸಂಜಯ್ ಗಾಯಕವಾಡ್ ಅವರು MLA ಹಾಸ್ಟೆಲ್ ಕ್ಯಾಂಟೀನ್ ನೌಕರನ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಶಾಸಕರು ಬುಧವಾರ ವಿಧಾನ ಭವನದ ಹೊರಗೆ ಬನಿಯನ್ ಟವೆಲ್ ಪ್ರತಿಭಟನೆ ನಡೆಸಿದರು.
ತಮ್ಮ ಉಡುಪಿನ ಮೇಲೆ ಬನಿಯನ್ ಮತ್ತು ಟವೆಲ್ ಧರಿಸಿದ ಶಾಸಕರು, ಆಡಳಿತರೂಢ ಮೈತ್ರಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
MLA ಕ್ಯಾಂಟೀನ್‌ನಲ್ಲಿ ಗಾಯಕ್‌ವಾಡ್ ಹಲ್ಲೆ ನಡೆಸಿರುವುದು ಸರ್ಕಾರ ಕೂಡ ಇಂತಹ ದಾಳಿಗಳನ್ನು ಬೆಂಬಲಿಸುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ರಾಜ್ಯ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
MLA ಹಾಸ್ಟೆಲ್ ಕ್ಯಾಂಟೀನ್‌ನಲ್ಲಿ ಹಳಸಿದ ಆಹಾರವನ್ನು ನೀಡಿದ್ದಕ್ಕಾಗಿ ನೌಕರನಿಗೆ ಕಪಾಳಮೋಕ್ಷ ಮಾಡಿದ ಮತ್ತು ಗುದ್ದುವ ವಿಡಿಯೋ ವೈರಲ್ ಆದ ನಂತರ ಗಾಯಕ್‌ವಾಡ್ ಅವರು ಸರ್ಕಾರ ಮತ್ತು ವಿರೋಧ ಪಕ್ಷದವರಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದ್ದಾರೆ.
ಗಾಯಕ್‌ವಾಡ್, ತನ್ನ ಸೊಂಟಕ್ಕೆ ಬಟ್ಟೆ ಮತ್ತು ಟವೆಲ್ ಅನ್ನು ಸುತ್ತಿಕೊಂಡು, ಕ್ಯಾಂಟೀನ್ ಗುತ್ತಿಗೆದಾರನಿಗೆ ಕಪಾಳಮೋಕ್ಷ ಮತ್ತು ಗುದಿಯುವ ವಿಡಿಯೋ ವೈರಲ್ ಆಗಿದೆ. ಇದಕ್ಕೂ ಮುನ್ನಾ ಬೆಳೆ ಇರುವ ಪ್ಯಾಕೆಟ್ ನ್ನು ಮೂಸಿ ನೋಡುವಂತೆ ಶಾಸಕರು ಒತ್ತಾಯಿಸಿದ್ದಾರೆ.