ಸೇಲಂ (ತಮಿಳುನಾಡು): ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಪ್ರತಿಮೆಗೆ ಕಪ್ಪು ಬಣ್ಣ ಸುರಿದ ಆರೋಪದ ಮೇಲೆ 70 ವರ್ಷದ ಇಎನ್‌ಟಿ ವೈದ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಶಂಕಿತನನ್ನು ಗುರುತಿಸಿ, ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಸ್ತಂಪಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಂಧಿತ ಶಂಕಿತ ವ್ಯಕ್ತಿಯು ಆ ಪ್ರದೇಶದಲ್ಲಿ ಇಎನ್‌ಟಿ ನರ್ಸಿಂಗ್ ಹೋಂ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.
ಜುಲೈ 15 ರಂದು ಅಣ್ಣಾ ಪಾರ್ಕ್ ಮುಂಭಾಗದಲ್ಲಿರುವ ಡಿಎಂಕೆ ಮಾಜಿ ಅಧ್ಯಕ್ಷರ 16 ಅಡಿ ಎತ್ತರದ ಕಂಚಿನ ಪ್ರತಿಮೆಗೆ 77 ವರ್ಷದ ವೈದ್ಯರು ಕೌಟುಂಬಿಕ ಸಮಸ್ಯೆಗಳಿಂದಾಗಿ ಮಾನಸಿಕ ಒತ್ತಡದಿಂದ ಕಪ್ಪು ಬಣ್ಣ ಸುರಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.