ಹಿಮಂತ ಬಿಸ್ವಾ ಶರ್ಮಾ-ಮಮತಾ ಬ್ಯಾನರ್ಜಿ 
ದೇಶ

ಅಸ್ಸಾಂನಲ್ಲಿ ಬಿಜೆಪಿಯ ವಿಭಜಕ ಅಜೆಂಡಾ ಎಲ್ಲಾ ಮಿತಿಗಳನ್ನು ಮೀರಿದೆ- ಮಮತಾ; 'ತುಷ್ಟೀಕರಣ' ಎಂದು ಹಿಮಂತ ತಿರುಗೇಟು

ಬಂಗಾಳಿ ಭಾಷಿಕರು “ಎಲ್ಲಾ ಭಾಷೆಗಳು ಮತ್ತು ಧರ್ಮಗಳನ್ನು ಗೌರವಿಸಿ ಶಾಂತಿಯುತವಾಗಿ ಸಹಬಾಳ್ವೆ ನಡೆಸಲು” ಬಯಸುತ್ತಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೋಲ್ಕತ್ತಾ: ಬಂಗಾಳಿ 'ಅಶ್ಮಿತೆ'(ಹೆಮ್ಮೆ)ಯನ್ನು ರಕ್ಷಿಸುವ ಏಕೈಕ ಪಕ್ಷ ಬಿಜೆಪಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈಶಾನ್ಯ ರಾಜ್ಯದಲ್ಲಿ ಬಂಗಾಳಿ ಮಾತನಾಡುವ ಜನರಿಗೆ "ಬೆದರಿಕೆ" ಹಾಕುತ್ತಿದ್ದಾರೆ ಎಂದು ಅಸ್ಸಾಂನ ಬಿಜೆಪಿ ಸರ್ಕಾರವನ್ನು ಶನಿವಾರ ತೀವ್ರ ತರಾಟೆಗೆ ತೆಗೆದುಕೊಂಡರು.

ಈ ಬಂಗಾಳಿ ಭಾಷಿಕರು “ಎಲ್ಲಾ ಭಾಷೆಗಳು ಮತ್ತು ಧರ್ಮಗಳನ್ನು ಗೌರವಿಸಿ ಶಾಂತಿಯುತವಾಗಿ ಸಹಬಾಳ್ವೆ ನಡೆಸಲು” ಬಯಸುತ್ತಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳು ಬಂಗಾಳಿ ಮಾತನಾಡುವ ವಲಸಿಗರನ್ನು ವ್ಯವಸ್ಥಿತವಾಗಿ “ಅಕ್ರಮ ಬಾಂಗ್ಲಾದೇಶಿ” ಅಥವಾ “ರೋಹಿಂಗ್ಯಾ” ಎಂದು ಹಣೆಪಟ್ಟಿ ಕಟ್ಟಿ ಗುರಿಪಡಿಸುತ್ತಿವೆ ಎಂದು ಪಶ್ಚಿಮ ಬಂಗಾಳ ಸಿಎಂ ಆರೋಪಿಸಿದ್ದಾರೆ.

“ದೇಶದಲ್ಲಿ ಎರಡನೇ ಅತಿ ಹೆಚ್ಚು ಮಾತನಾಡುವ ಭಾಷೆ ಬಾಂಗ್ಲಾ ಭಾಷೆಯಾಗಿದೆ. ಇದು ಅಸ್ಸಾಂನಲ್ಲೂ ಎರಡನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದೆ. ಎಲ್ಲಾ ಭಾಷೆಗಳು ಮತ್ತು ಧರ್ಮಗಳನ್ನು ಗೌರವಿಸಿ ಶಾಂತಿಯುತವಾಗಿ ಸಹಬಾಳ್ವೆ ನಡೆಸಲು ಬಯಸುವ ಬಂಗಾಳಿ ಭಾಷಿಕರನ್ನು ತಮ್ಮ ಮಾತೃಭಾಷೆಯನ್ನು ಎತ್ತಿಹಿಡಿದಿದ್ದಕ್ಕಾಗಿ ಕಿರುಕುಳ ನೀಡಿ, ಬೆದರಿಸುವುದು ತಾರತಮ್ಯ ಮತ್ತು ಅಸಾಂವಿಧಾನಿಕ. ಅಸ್ಸಾಂನಲ್ಲಿ ಬಿಜೆಪಿಯ ಈ ವಿಭಜಕ ಅಜೆಂಡಾ ಎಲ್ಲಾ ಮಿತಿಗಳನ್ನು ಮೀರಿದೆ ಮತ್ತು ಇದರ ವಿರುದ್ಧ ಅಸ್ಸಾಂ ಜನತೆ ಹೋರಾಡುತ್ತದೆ” ಎಂದು ಮಮತಾ ಬ್ಯಾನರ್ಜಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

“ತಮ್ಮ ಭಾಷೆ ಮತ್ತು ಗುರುತಿನ ಘನತೆಗಾಗಿ ಹಾಗೂ ತಮ್ಮ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪ್ರತಿಯೊಬ್ಬ ನಾಗರಿಕನೊಂದಿಗೆ ನಾನು ನಿಲ್ಲುತ್ತೇನೆ” ಎಂದು ಪಶ್ಚಿಮ ಬಂಗಾಳ ಸಿಎಂ ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿಯಿಂದ 'ತುಷ್ಟೀಕರಣ'

ಪಶ್ಚಿಮ ಬಂಗಾಳ ಸಿಎಂ ಆರೋಪವನ್ನು ನಿರಾಕರಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಬ್ಯಾನರ್ಜಿ ಒಂದು ನಿರ್ದಿಷ್ಟ ಸಮುದಾಯದ "ಅಕ್ರಮ ಅತಿಕ್ರಮಣವನ್ನು ಪ್ರೋತ್ಸಾಹಿಸುತ್ತಿದ್ದಾರೆ" ಮತ್ತು ಮತಕ್ಕಾಗಿ 'ತುಷ್ಟೀಕರಣ' ರಾಜಕಾರಣ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

“ಮಮತಾ ಬ್ಯಾನರ್ಜಿ ಬಂಗಾಳಿಗಳನ್ನು ಇಷ್ಟಪಡುತ್ತಾರೋ ಅಥವಾ ಮುಸ್ಲಿಂ-ಬಂಗಾಳಿಗಳನ್ನು ಮಾತ್ರ ಇಷ್ಟಪಡುತ್ತಾರೋ ಎಂಬುದು ಪ್ರಶ್ನೆಯಾಗಿದೆ. ಇದಕ್ಕೆ ನನ್ನ ಉತ್ತರವೇನೆಂದರೆ ಅವರು ಮುಸ್ಲಿಂ-ಬಂಗಾಳಿಗಳನ್ನು ಮಾತ್ರ ಇಷ್ಟ ಪಡುತ್ತಾರೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಓಪನ್ನಾಗಿ ಹೇಳ್ತಿದ್ದೀನಿ, ಯಾರೂ ಬಿ ಖಾತಾದಿಂದ ಎ ಖಾತಾಗೆ ದುಡ್ಡು ಕಟ್ಟಬೇಡಿ, ಇದು ಸರ್ಕಾರದ ಬಹುದೊಡ್ಡ ಲೂಟಿ': ಹೆಚ್ ಡಿ ಕುಮಾರಸ್ವಾಮಿ

3ನೇ ಏಕದಿನ: 'ರೋ-ಕೋ' ಭರ್ಜರಿ ಕಮ್ ಬ್ಯಾಕ್, ಸಿಡ್ನಿಯಲ್ಲಿ ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ

3ನೇ ಏಕದಿನ: ರೋ'ಹಿಟ್' ಶರ್ಮಾ, ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್, ಕ್ರಿಕೆಟ್ ಇತಿಹಾಸದ ಹಲವು ದಾಖಲೆಗಳು ಪತನ

ಇಂದೋರ್‌ನಲ್ಲಿ ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

ಧರ್ಮಸ್ಥಳ ಬುರುಡೆ ಕೇಸ್​: ನಿರ್ಣಾಯಕ ಘಟ್ಟದಲ್ಲಿ SIT ತನಿಖೆ, ತಿಮರೋಡಿ ಸೇರಿ ನಾಲ್ವರಿಗೆ ನೋಟಿಸ್! ಕಾರಣವೇನು?

SCROLL FOR NEXT