ಏರ್ ಇಂಡಿಯಾ ವಿಮಾನದ ಅವಶೇಷಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು. 
ದೇಶ

Air India Plane Crash: 'ತನಿಖೆ ಇನ್ನೂ ಪ್ರಗತಿಯಲ್ಲಿದೆ... ಊಹೆ ಬೇಡ'; ಮಾಧ್ಯಮಗಳ ವರದಿ ಕುರಿತು NTSB ಟೀಕೆ

ಇಷ್ಟು ದೊಡ್ಡ ಘಟನೆ ಕುರಿತ ತನಿಖೆಗೆ ಸಮಯ ಬೇಕಾಗುತ್ತದೆ. ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ನೀಡಲಾಗಿಲ್ಲ.

ನವದೆಹಲಿ: ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿಗಳನ್ನು ಅಮೆರಿಕ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್‌ಟಿಎಸ್‌ಬಿ) ಟೀಕಿಸಿದೆ.

ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ದುರಂತ ಪ್ರಕರಣದ ತನಿಖೆಯ ಪ್ರಾಥಮಿಕ ವರದಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇಂಧನ ಹರಿವನ್ನು ನಿಯಂತ್ರಿಸುವ ಸ್ವಿಚ್‌ಗಳನ್ನು ಕ್ಯಾಪ್ಟನ್ ಎಳೆದಿರಬಹುದು ಎಂದು ಉಲ್ಲೇಖಿಸಲಾಗಿದೆ. ಇದರಿಂದಾಗಿ ಟೇಕ್-ಆಫ್ ಆದ ಸೆಕೆಂಡುಗಳಲ್ಲಿ ವಿಮಾನದ ಎರಡೂ ಎಂಜಿನ್‌ಗಳು ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾಧ್ಯಮಗಳು ಮಾಡಿರುವ ವರದಿಗಳನ್ನು ಅಮೆರಿಕ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ಅಧ್ಯಕ್ಷ ಜೆನ್ನಿಫರ್ ಹೋಮೆಂಡಿ ಅವರು ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಇಷ್ಟು ದೊಡ್ಡ ಘಟನೆ ಕುರಿತ ತನಿಖೆಗೆ ಸಮಯ ಬೇಕಾಗುತ್ತದೆ. ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ನೀಡಲಾಗಿಲ್ಲ. ಈ ಬಗ್ಗೆ ಮಾಧ್ಯಮಗಳ ವರದಿಯು ಆತುರವಾಗಿ ಮಾಡಲಾಗಿದ್ದು, ಊಹಾತ್ಮಕವಾಗಿದೆ ಎಂದು ಟೀಕೆ ಮಾಡಿದ್ದಾರೆ.

ಜೂನ್ 12ರಂದು ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾದ ಬೋಯಿಂಗ್ ಡ್ರೀಮ್‌ಲೈನರ್ 787-8 ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ 242 ರಲ್ಲಿ 241 ಜನರು ಸೇರಿದಂತೆ ಕನಿಷ್ಠ 270 ಜನರು ಸಾವನ್ನಪ್ಪಿದ್ದಾರೆ.

ಈ ಘಟನೆಯ ತನಿಖಾ ವರದಿ ಇತ್ತೀಚೆಗೆ ಬಿಡುಗಡೆಗೊಂಡಿದೆ. ಎನ್‌ಟಿಎಸ್‌ಬಿ ನೆರವಿನೊಂದಿಗೆ ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ ನೇತೃತ್ವದ ತನಿಖಾಧಿಕಾರಿಗಳು ಪುರಾವೆಗಳನ್ನು ಒಟ್ಟುಗೂಡಿಸಿದ್ದಾರೆ.

ಹಾಗೆಯೇ ತನಿಖೆ ನಡೆಯುತ್ತಿರುವಾಗ ಯಾವುದೇ ನಿರ್ಧಾರಕ್ಕೆ ಬರಬಾರದು ಎಂದು ಎಎಐಬಿ ಮತ್ತು ಏರ್ ಇಂಡಿಯಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾಂಪ್‌ಬೆಲ್ ವಿಲ್ಸನ್ ಸಹ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ದುರಂತದ ಪ್ರಾಥಮಿಕ ತನಿಖಾ ವರದಿ ಪ್ರಕಾರ ಟೇಕ್ ಆಫ್ ಆದ ಸೆಕೆಂಡುಗಳಲ್ಲಿ ವಿಮಾನದ ಎರಡು ಇಂಧನ ನಿಯಂತ್ರಣ ಸ್ವಿಚ್‌ಗಳು ತ್ವರಿತವಾಗಿ ‘ಕಟ್‌ಆಫ್’ ಸ್ಥಾನಕ್ಕೆ ಮರಳಿದೆ. ಎಂಜಿನ್‌ಗಳಿಗೆ ಇಂಧನ ಪೂರೈಕೆ ಕಡಿಮೆಯಾಗಿದ್ದು, ವಿಮಾನವು ಸಂಪೂರ್ಣ ಒತ್ತಡವನ್ನೂ ಕಳೆದುಕೊಂಡಿತ್ತು. ಅಂದರೆ ಎರಡೂ ಇಂಜಿನ್‌ಗಳು ಸ್ಥಗಿತಗೊಂಡಿತ್ತು.

ವಿಮಾನದಿಂದ ಬಂದ ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್‌ನಿಂದಾಗಿ ಪೈಲಟ್ ಕ್ಲೈವ್ ಕುಂದರ್ ಅವರು ಸಹ ಪೈಲಟ್‌ ಸುಮೀತ್ ಸಭರ್ವಾಲ್ ಅವರ ಬಳಿಕ ಸ್ವಿಚ್‌ಗಳನ್ನು ಏಕೆ ಸರಿಸಿದ್ದೀರಿ ಎಂದು ಕೇಳಿರುವುದು ತಿಳಿದುಬಂದಿದೆ. ಈ ವೇಳೆ ಸುಮೀತ್ ಸಭರ್ವಾಲ್ ತಾನು ಸ್ವಿಚ್‌ಗಳನ್ನು ಸರಿಸಿಲ್ಲ ಎಂದು ಉತ್ತರಿಸಿದ್ದಾರೆ.

ಇದೀಗ ಸ್ವಿಚ್‌ಗಳನ್ನು ಹೇಗೆ ಮತ್ತು ಏಕೆ ಆಫ್ ಮಾಡಲಾಗಿದೆ ಎಂಬುದು ತನಿಖಾಧಿಕಾರಿಗಳ ವಿಚಾರಣೆಯ ಪ್ರಮುಖ ವಿಷಯವಾಗಿದೆ. ಕೆಲವರು ಇದು ಪೈಲಟ್‌ನ ಅಜಾಗರೂಕತೆ ಎಂದು ಹೇಳಿದರೆ, ಇನ್ನು ಕೆಲವು ತಜ್ಞರು ಈ ರೀತಿ ಆಗಲು ಸಾಧ್ಯವೇ ಇಲ್ಲ, ಇದು ವಿಮಾನದ ಸಮಸ್ಯೆ ಎಂದು ಹೇಳಿದ್ದಾರೆ. ಈ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Women's World Cup 2025: ಜೆಮಿಮಾ ಭರ್ಜರಿ ಶತಕ, 5 ವಿಕೆಟ್ ಗಳಿಂದ ಆಸೀಸ್ ಸೋಲಿಸಿ, ಫೈನಲ್ ಗೆ ಲಗ್ಗೆ ಇಟ್ಟ ಭಾರತ!

ಮೋದಿ ಮತಕ್ಕಾಗಿ 'ಭರತ ನಾಟ್ಯ'ನೂ ಮಾಡ್ತಾರೆ: ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು!

ಸಂಪುಟ ಸಭೆಯಲ್ಲಿ ಸಚಿವರ ಜಟಾಪಟಿ: ಡಾ. ಹೆಚ್‌.ಸಿ. ಮಹಾದೇವಪ್ಪ- ಕೆಜೆ ಜಾರ್ಜ್ ಕಿತ್ತಾಡಿಕೊಂಡ್ರಾ?

ಚುನಾವಣಾ ಆಯೋಗದ SIR ಗೆ ಹೆದರಿ ಆತ್ಮಹತ್ಯೆಗೆ ಶರಣಾದ ಪಶ್ಚಿಮ ಬಂಗಾಳದ ವ್ಯಕ್ತಿ!

ಪ. ಜಾತಿಯಲ್ಲಿ ಒಳ ಮೀಸಲಾತಿ: ಸಮರ್ಪಕ ಅನುಷ್ಟಾನಕ್ಕೆ ಮುಂದಿನ ಕ್ಯಾಬಿನೆಟ್ ನಲ್ಲಿ ಬಿಲ್ ಮಂಡನೆ!

SCROLL FOR NEXT