ತಿರುಪತಿ 
ದೇಶ

ಹಿಂದೂಯೇತರರು ಎಂಬ ಆರೋಪ: ಟಿಟಿಡಿಯ ನಾಲ್ವರು ಸಿಬ್ಬಂದಿ ಅಮಾನತು

ಟಿಟಿಡಿ ತನ್ನ ನಾಲ್ವರು ಉದ್ಯೋಗಿಗಳನ್ನು ಇತರ ಧರ್ಮಗಳನ್ನು ಪಾಲಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಅಮಾನತುಗೊಳಿಸಿದೆ ಎಂದು ಶನಿವಾರ ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಆಡಳಿತ ಮಂಡಳಿ ತಿರುಪತಿಯ ವೆಂಕಟೇಶ್ವರ ದೇವಸ್ಥಾನದ ನಾಲ್ವರು ನೌಕರರನ್ನು, ಹಿಂದೂಗಳಲ್ಲ ಮತ್ತು ಇತರ ಧರ್ಮ ಪಾಲಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಅಮಾನತುಗೊಳಿಸಿವೆ.

ಟಿಟಿಡಿ, ಉಪ ಕಾರ್ಯನಿರ್ವಾಹಕ ಎಂಜಿನಿಯರ್(ಗುಣಮಟ್ಟ ನಿಯಂತ್ರಣ) ಬಿ ಎಲಿಜರ್, ಬಿಐಆರ್‌ಆರ್‌ಡಿ ಆಸ್ಪತ್ರೆಯ ಸ್ಟಾಫ್ ನರ್ಸ್ ಎಸ್ ರೋಸಿ, ಬಿಐಆರ್‌ಆರ್‌ಡಿ ಆಸ್ಪತ್ರೆಯ ಗ್ರೇಡ್ -1 ಫಾರ್ಮಸಿಸ್ಟ್ ಎಂ ಪ್ರೇಮಾವತಿ ಮತ್ತು ಎಸ್‌ವಿ ಆಯುರ್ವೇದ ಫಾರ್ಮಸಿಯ ಜಿ ಅಸುಂತ ಅವರನ್ನು ಅಮಾನತುಗೊಳಿಸಿದೆ.

ಟಿಟಿಡಿ ತನ್ನ ನಾಲ್ವರು ಉದ್ಯೋಗಿಗಳನ್ನು ಇತರ ಧರ್ಮಗಳನ್ನು ಪಾಲಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಅಮಾನತುಗೊಳಿಸಿದೆ ಎಂದು ಶನಿವಾರ ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಈ ನೌಕರರು ಸಂಸ್ಥೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಯನ್ನು ಪ್ರತಿನಿಧಿಸುವಾಗ ಮತ್ತು ಕೆಲಸ ಮಾಡುವಾಗ ತಮ್ಮ ಕರ್ತವ್ಯದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ನಂಬಲಾಗಿದೆ ಎಂದು ಟಿಟಿಡಿ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯಾರತ್ರ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ: ಯತೀಂದ್ರಗೆ ಡಿ.ಕೆ ಶಿವಕುಮಾರ್ ತಿರುಗೇಟು

ಚಿತ್ತಾಪುರದಲ್ಲಿ ಪಥ ಸಂಚಲನ: ಶಾಂತಿ ಸಭೆ ನಡೆಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ; RSSಗೆ ನಿರಾಸೆ

ಭಾರತ ಅಮೆರಿಕ ವ್ಯಾಪಾರ ಒಪ್ಪಂದ: 'ಬಹುತೇಕ ಎಲ್ಲ ಸಮಸ್ಯೆಗಳು ಇತ್ಯರ್ಥವಾಗಿವೆ': ಸರ್ಕಾರಿ ಮೂಲಗಳು!

ಕಾಶ್ಮೀರ: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಚ್ಚರಿಯ ಗೆಲುವು; 3 ಸ್ಥಾನಗಳಲ್ಲಿ ಗೆದ್ದು ಬೀಗಿದ NC

ಎಲ್ಲರ ವಾಟ್ಸಾಪ್ ಗುಂಪುಗಳ ಮೇಲೆ ನಿಗಾ: ಬಿಜೆಪಿ ನಾಯಕನ ಹೇಳಿಕೆಗೆ ವಿಪಕ್ಷ ನಾಯಕರು ಕೆಂಡ!

SCROLL FOR NEXT