ಹೈದರಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ವೇಳೆ 'ಐದು ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ' ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ ನಂತರ, ಬಿಜೆಪಿ ರಾಷ್ಟ್ರೀಯ ವಕ್ತಾರ ಸಿಆರ್ ಕೇಶವನ್ ಭಾನುವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ರಾಹುಲ್ ಗಾಂಧಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
'ರಾಹುಲ್ ಗಾಂಧಿ ಅವರು LoP ತರಹ ಮಾತನಾಡುತ್ತಿದ್ದಾರೆ. Leader of Opposition ಆಗಿ ಮಾತನಾಡದೆ, Leader of Pakistan ಆಗಿದ್ದಾರೆ. ಪಾಕಿಸ್ತಾನ ಪರವಾದ ವಿಷಕಾರಿ ನಿರೂಪಣೆಯನ್ನು ಹರಡುತ್ತಿದ್ದಾರೆ. ಭಾರತ ಮತ್ತು ನಮ್ಮ ಸೇನೆಯ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದ್ದಾರೆ' ಎಂದು ಕೇಶವನ್ ಸುದ್ದಿಸಂಸ್ಥೆ ANIಗೆ ತಿಳಿಸಿದರು.
ರಾಹುಲ್ ಗಾಂಧಿಯವರ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು 'ವಿನಾಶಕಾರಿ ಮತ್ತು ವಿಷಕಾರಿ' ಎಂದು ಕರೆದ ಕೇಶವನ್, ಈ ಟ್ವೀಟ್ ಕಾಂಗ್ರೆಸ್ ನಾಯಕರಿಗೆ ಭಾರತೀಯ ಸಶಸ್ತ್ರ ಪಡೆಗಳ ಮೇಲಿನ ನಂಬಿಕೆಯ ಕೊರತೆಯನ್ನು ಪ್ರದರ್ಶಿಸುತ್ತದೆ ಎಂದು ಹೇಳಿದರು.
'ರಾಹುಲ್ ಗಾಂಧಿಯವರ ಹಾನಿಕಾರಕ, ವಿಷಕಾರಿ ಟ್ವೀಟ್ ಅವರಿಗೆ ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಮೇಲೆ ನಂಬಿಕೆ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ರಾಹುಲ್ ಗಾಂಧಿಯವರ ನಿಷ್ಠೆ ಭಾರತದ ಮೇಲೆ ಇಲ್ಲ ಎಂಬುದನ್ನು ಟ್ವೀಟ್ ಸ್ಪಷ್ಟವಾಗಿ ತೋರಿಸುತ್ತದೆ. ರಾಹುಲ್ ಗಾಂಧಿ ನಮ್ಮ ಧೈರ್ಯಶಾಲಿ ಸೇನೆಯನ್ನು ಅವಮಾನಿಸುವಲ್ಲಿ ಮತ್ತು ನಮ್ಮ ದೇಶದ ಮಾನಹಾನಿ ಮಾಡುವಲ್ಲಿ ಬಹಳ ವಿಕೃತ ಆನಂದವನ್ನು ಪಡೆಯುತ್ತಿದ್ದಾರೆಂದು ತೋರುತ್ತದೆ. ಭಾರತೀಯ ಸೇನೆಯ ಘನತೆಗೆ ಅವಮಾನ ಮಾಡಿದ ಆರೋಪದ ಮೇಲೆ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಸದ್ಯ ಜಾಮೀನು ಸಿಕ್ಕಿದೆ ಮತ್ತು ಈಗ ಅವರು ನಮ್ಮ ಸಶಸ್ತ್ರ ಪಡೆಗಳ ಮೇಲೆ ಕೃತಜ್ಞತೆಯಿಲ್ಲದ ಅಪಮಾನವನ್ನು ಮಾಡುವುದನ್ನು ಮುಂದುವರೆಸಿದ್ದಾರೆ...' ಎಂದು ಹೇಳಿದರು.
'ಅಮೆರಿಕ ಅಧ್ಯಕ್ಷ ಟ್ರಂಪ್ ಮಾಡಿದ ಟ್ವೀಟ್‌ನಲ್ಲಿ ಭಾರತದ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ರಾಹುಲ್ ಗಾಂಧಿ ಭಾರತೀಯ ಸೇನೆಯ ನಿಸ್ವಾರ್ಥ ಶೌರ್ಯವನ್ನು ತಿರುಚಿದ್ದಾರೆ ಮತ್ತು ಅವಮಾನಿಸಲು ಪ್ರಯತ್ನಿಸಿದ್ದಾರೆ... ಅವರಿಗೆ ನಮ್ಮ ಸಶಸ್ತ್ರ ಪಡೆಗಳ ಮೇಲೆ ನಂಬಿಕೆ ಇಲ್ಲ. ಅವರ ನಡವಳಿಕೆ ಖಂಡನೀಯ. ಅವರ ಅಪಾಯಕಾರಿ ಭಾರತ ವಿರೋಧಿ ಅಭಿಯಾನ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ...' ಎಂದು ಕೇಶವನ್ ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಇಂತಹ 'ಭಾರತ ವಿರೋಧಿ ಅಭಿಯಾನಗಳು' ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿವೆ ಮತ್ತು 'ಭಾರತದ ಜನರು ರಾಹುಲ್ ಗಾಂಧಿಗೆ ಪಾಠ ಕಲಿಸುತ್ತಾರೆ...' ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿ ಬಳಿಕ ಭಾರತ-ಪಾಕಿಸ್ತಾನ ನಡುವೆ ಏರ್ಪಟ್ಟ ಸಂಘರ್ಷದ ವೇಳೆ ಐಧು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗದೆ. ಕದನ ವಿರಾಮ ಘೋಷಣೆ ಬಳಿಕ ಪರಸ್ಥಿತಿ ತಿಳಿಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.
ಶ್ವೇತಭವನದಲ್ಲಿ ರಿಪಬ್ಲಿಕನ್ ಪಕ್ಷದ ಶಾಸಕರಿಗೆ ಏರ್ಪಡಿಸಿದ್ದ ಔತಣಕೂಟದ ಸಂದರ್ಭದಲ್ಲಿ ಟ್ರಂಪ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಆದರೆ, ಹೊಡೆದುರುಳಿಸಲಾದ ಯುದ್ಧ ವಿಮಾನಗಳು ಯಾವ ದೇಶದವು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.