ತಿರುವನಂತಪುರಂ: ಕೇರಳ ಮಾಜಿ ಮುಖ್ಯಮಂತ್ರಿ ಮತ್ತು ಕಮ್ಯುನಿಸ್ಟ್ ಪಕ್ಷದ ಖ್ಯಾತ ನಾಯಕ ವಿ.ಎಸ್. ಅಚ್ಯುತಾನಂದನ್ ಅವರು ಸೋಮವಾರ ನಿಧನರಾಗಿದ್ದಾರೆ.
ಕಳೆದ ಜೂನ್ 23 ರಂದು ಬೆಳಗ್ಗೆ ಹೃದಯಾಘಾತಕ್ಕೀಡಾಗಿದ್ದ 101 ವರ್ಷದ ಅಚ್ಯುತಾನಂದನ್ ಅವರನ್ನು ರಾಜಧಾನಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.
2019 ರಲ್ಲಿ ಪಾರ್ಶ್ವವಾಯುವಿಗೆ ಒಳಗಾದ ನಂತರ ಹಾಸಿಗೆ ಹಿಡಿದಿದ್ದ ಅಚ್ಯುತಾನಂದನ್ ಅವರಿಗೆ ಇತ್ತೀಚಿಗೆ ಹೃದಯಾಘಾತ ಸಂಭವಿಸಿ ಉಸಿರಾಟದ ತೊಂದರೆ ಉಂಟಾಗಿತ್ತು. ಹೀಗಾಗಿ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು.
ಭಾರತದ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಸ್ಥಾಪಕ ನಾಯಕ ವಿ.ಎಸ್. ಅಚ್ಯುತಾನಂದನ್ ಕಳೆದ ಅಕ್ಟೋಬರ್‌ನಲ್ಲಿ 101 ವರ್ಷ ಕಾಲಿಟ್ಟಿದ್ದರು. 1964 ರಲ್ಲಿ ನಡೆದ ಐತಿಹಾಸಿಕ ಸಿಪಿಐ ರಾಷ್ಟ್ರೀಯ ಮಂಡಳಿ ಸಭೆಯಿಂದ ಹೊರನಡೆದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸ್ಥಾಪಿಸಿದ್ದರು.
ಭಾರತದ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಸ್ಥಾಪಕ ನಾಯಕ ವಿ.ಎಸ್. ಅಚ್ಯುತಾನಂದನ್ ಕಳೆದ ಅಕ್ಟೋಬರ್‌ನಲ್ಲಿ 101 ವರ್ಷ ಕಾಲಿಟ್ಟಿದ್ದರು. 1964 ರಲ್ಲಿ ನಡೆದ ಐತಿಹಾಸಿಕ ಸಿಪಿಐ ರಾಷ್ಟ್ರೀಯ ಮಂಡಳಿ ಸಭೆಯಿಂದ ಹೊರನಡೆದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸ್ಥಾಪಿಸಿದ್ದರು.
ಶತಾಯುಷಿಯಾದ ಅಚ್ಯುತಾನಂದನ್ (101), ಕೇರಳ ರಾಜಕಾರಣದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ವ್ಯಕ್ತಿಯಾಗಿದ್ದಾರೆ. ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅಚ್ಯುತಾನಂದನ್, 2006ರಿಂದ 2011ರರವರೆಗೆ ಕೇರಳ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಅವರು ಒಟ್ಟು 10 ಚುನಾವಣೆಗಳನ್ನು ಎದುರಿಸಿದ್ದಾರೆ.
ಅಕ್ಟೋಬರ್ 20, 1923 ರಂದು ಶಂಕರನ್ ಮತ್ತು ಅಕ್ಕಮ್ಮ ದಂಪತಿಗಳ ಮಗನಾಗಿ ಜನಿಸಿದ ವಿಎಸ್, ನಾಲ್ಕನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡರು. ನಂತರ ಕಷ್ಟಕರವಾದ ಬಾಲ್ಯವನ್ನು ಕಳೆದ ವಿಎಸ್, ಟೈಲರಿಂಗ್ ಅಂಗಡಿಯಲ್ಲಿ ತಮ್ಮ ಸಹೋದರನಿಗೆ ಸಹಾಯ ಮಾಡಿದರು ಮತ್ತು ನಂತರ ತೆಂಗಿನಕಾಯಿ ಕಾರ್ಖಾನೆಯ ಕೆಲಸಗಾರರಾದರು. ಪಿ ಕೃಷ್ಣ ಪಿಳ್ಳೈ ಅವರಿಂದ ರಾಜ್ಯದ ರಾಜಕೀಯ ಚಳುವಳಿಗೆ ಪಾದಾರ್ಪಣೆ ಮಾಡಿದ ಅವರು, 1938 ರಲ್ಲಿ ಕುಟ್ಟನಾಡಿನಲ್ಲಿ ಕೃಷಿ ಕಾರ್ಮಿಕರನ್ನು ಸಂಘಟಿಸುವ ಮೂಲಕ ತಮ್ಮ ಆರಂಭಿಕ ರಾಜಕೀಯ ಜೀವನವನ್ನು ಆರಂಭಿಸಿದರು.