Indigo flight 
ದೇಶ

ತಿರುಪತಿ-ಹೈದರಾಬಾದ್ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: 40 ನಿಮಿಷ ಆಗಸದಲ್ಲೇ ಗಿರಕಿ ಹೊಡೆದ ನಂತರ ಸುರಕ್ಷಿತ ಲ್ಯಾಂಡಿಂಗ್; ನಿಟ್ಟುಸಿರು ಬಿಟ್ಟ ಪ್ರಯಾಣಿಕರು

ಏರ್‌ಬಸ್ A321neo ವಿಮಾನ ಭಾನುವಾರ ಸಂಜೆ 7:42 ರ ಸುಮಾರಿಗೆ ತಿರುಪತಿ ವಿಮಾನ ನಿಲ್ದಾಣದಿಂದ ಹೊರಟಿತ್ತು. ಈ ವೇಳೆ, ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಹೈದರಾಬಾದ್:‌ ತಿರುಪತಿಯಿಂದ ಹೈದರಾಬಾದ್‌ಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ದಿಢೀರ್ ತಾಂತ್ರಿಕ ದೋಷ ಕಾರಣ ಸುಮಾರು 40 ನಿಮಿಷಗಳ ಕಾಲ ಆಕಾಶದಲ್ಲೇ ಗಿರಕಿ ಹೊಡೆದಿದ್ದು, ಈ ಬೆಳವಣಿಗೆ ಜನರಲ್ಲಿ ಆತಂಕ ಮೂಡಿಸಿತ್ತು.

ಏರ್‌ಬಸ್ A321neo ವಿಮಾನ ಭಾನುವಾರ ಸಂಜೆ 7:42 ರ ಸುಮಾರಿಗೆ ತಿರುಪತಿ ವಿಮಾನ ನಿಲ್ದಾಣದಿಂದ ಹೊರಟಿತ್ತು. ಈ ವೇಳೆ, ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಬಳಿಕ 40 ನಿಮಿಷಗಳ ಕಾಲ ವಿಮಾನ ಆಕಾಶದಲ್ಲೇ ಸುತ್ತಾಡಿ, ರಾತ್ರಿ 8:34ರ ಸುಮಾರಿಗೆ ತಿರುಪತಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ ಎಂದು ಏರ್ ಟ್ರಾಫಿಕ್ ಟ್ರ್ಯಾಕಿಂಗ್ ವೆಬ್‌ಸೈಟ್ Flightradar24 ತಿಳಿಸಿದೆ.

ಇದರ ಪರಿಣಾಮ ಹೈದರಾಬಾದ್‌ಗೆ ನಿಗದಿಪಡಿಸಲಾದ ಕೊನೆಯ ವಿಮಾನವನ್ನು ರದ್ದುಗೊಳಿಸಲಾಗಿದೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಘಿದೆ. ಘಟನೆಯ ಕುರಿತು ವಿಮಾನಯಾನ ಸಂಸ್ಥೆ ಇದೂವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬೆಂಗಳೂರಿನ ಐದು ಹೊಸ ಪಾಲಿಕೆಗಳಿಗೆ 368 ವಾರ್ಡ್ ರಚನೆ: ಪಶ್ಚಿಮ ಪಾಲಿಕೆಗೆ ಗರಿಷ್ಠ 111 ವಾರ್ಡ್

ಬಿಹಾರ SIR ನಂತರ ಚುನಾವಣಾ ಆಯೋಗದಿಂದ ಅಂತಿಮ ಮತದಾರರ ಪಟ್ಟಿ ಬಿಡುಗಡೆ

ಟ್ರೋಫಿ 'ಕಳ್ಳ' ಮೊಹ್ಸಿನ್ ನಖ್ವಿಗೆ ಸಂಕಷ್ಟ? ಏಷ್ಯಾ ಕಪ್ ಟ್ರೋಫಿ ಮರಳಿ ಪಡೆಯಲು ಅಖಾಡಕ್ಕೀಳಿದ BCCI; ಷರತ್ತು ಹಾಕಿದ ನಖ್ವಿ!

ರಾಜ್ಯ ಸರ್ಕಾರದಿಂದ "ಮಹಿಷಾಸುರ ಟ್ಯಾಕ್ಸ್" : ಬೆಂಗಳೂರು-ಮೈಸೂರು ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಬಿಜೆಪಿ ಕಿಡಿ!

Karur stampede: ದುರಂತದ ಬಳಿಕ ಕರೂರಿಗೆ ಭೇಟಿ ನೀಡಲಿಲ್ಲ ಏಕೆಂದರೆ...; ಡಿಎಂಕೆ ವಿರುದ್ಧ ನಟ ವಿಜಯ್ ವಾಗ್ದಾಳಿ

SCROLL FOR NEXT