ಅಪಾಚೆ ಹೆಲಿಕಾಪ್ಟರ್‌ 
ದೇಶ

Apache Choppers: ಭಾರತೀಯ ಸೇನೆಗೆ ದೈತ್ಯ ಶಕ್ತಿಯ ಆಗಮನ: ಆಕ್ರಮಣಕಾರಿ ಕಾರ್ಯಾಚರಣೆಯ ಸಾಮರ್ಥ್ಯ ಇನ್ನಷ್ಟು ಬಲಿಷ್ಠ; Video

Apache Choppers ಸೇನೆಯ ಆಕ್ರಮಣ ಮತ್ತು ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸುತ್ತದೆ.

ನವದೆಹಲಿ: ಭಾರತೀಯ ಸೇನೆಗೆ ಅಮೆರಿಕಾದಿಂದ ಮೂರು ಅಪಾಚೆ ಹೆಲಿಕಾಪ್ಟರ್‌ಗಳ (Apache Choppers) ಮೊದಲ ಬ್ಯಾಚ್ ಆಗಮಿಸಿದೆ.

Apache Choppers ಸೇನೆಯ ಆಕ್ರಮಣ ಮತ್ತು ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸುತ್ತದೆ.ಡೆಸರ್ಟ್ ಕ್ಯಾಮೊ ಬಣ್ಣದಲ್ಲಿರುವ ಅತ್ಯಾಧುನಿಕ ಚಾಪರ್‌ಗಳು ಅಮೆರಿಕದಿಂದ ಆಂಟೋನೋವ್ ಸಾರಿಗೆ ವಿಮಾನದಲ್ಲಿ ಆಗಮಿಸಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.

ಭಾರತೀಯ ಸೇನೆ ಅಪಾಚೆ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುವುದು ಇದೇ ಮೊದಲಾಗಿದೆ. ಇದು ನಿಸ್ಸಂದೇಹವಾಗಿ ವಿಶ್ವದ ಅತ್ಯುತ್ತಮ ಫೈಟರ್ ಚಾಪರ್‌ಗಳಲ್ಲಿ ಒಂದಾಗಿದೆ. ಭಾರತೀಯ ವಾಯುಪಡೆ ಈಗಾಗಲೇ 22 ಭಾರೀ ದಾಳಿ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತಿದೆ.

"ಸೇನಾ ವಾಯುಯಾನಕ್ಕಾಗಿ ಮೊದಲ ಬ್ಯಾಚ್ ಅಪಾಚೆ ಹೆಲಿಕಾಪ್ಟರ್‌ಗಳು ಇಂದು ಭಾರತಕ್ಕೆ ಆಗಮಿಸುತ್ತಿರುವುದರಿಂದ ಭಾರತೀಯ ಸೇನೆಗೆ ಇದು ಮೈಲಿಗಲ್ಲು ದಾಖಲಿಸಿದ ಕ್ಷಣವಾಗಿದೆ. ಈ ಅತ್ಯಾಧುನಿಕ ಹೆಲಿಕಾಪ್ಟರ್ ಗಳು ಭಾರತೀಯ ಸೇನೆಯ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ" ಎಂದು ಭಾರತೀಯ ಸೇನೆಯು ಭಾರತದಲ್ಲಿನ ಹೆಲಿಕಾಪ್ಟರ್‌ಗಳ ಮೊದಲ ಫೋಟೋಗಳನ್ನು ಹಂಚಿಕೊಂಡಿದೆ.

ಈ ಹೊಸ ಚಾಪರ್‌ಗಳನ್ನು ಪಾಕಿಸ್ತಾನದ ಪಶ್ಚಿಮ ಗಡಿಯ ಬಳಿಯ ಜೋಧ್‌ಪುರದಲ್ಲಿ ನಿಯೋಜಿಸಲಾಗುತ್ತದೆ ಮತ್ತು ಲೇಹ್-ಲಡಾಖ್ ಪ್ರದೇಶಕ್ಕೂ ಹೋಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ಮಹಿಳೆಯರು ಅಸ್ವಸ್ಥ; ಪುತ್ತೂರಿನಲ್ಲಿ ಆಗಿದ್ದೇನು?

'ಶೋಲೆ' ಖ್ಯಾತಿಯ ಬಾಲಿವುಡ್ ನಟ ಗೋವರ್ಧನ್ ಅಸ್ರಾನಿ ವಿಧಿವಶ

Israel ಸೈನಿಕರ ಹತ್ಯೆಯ ನಂತರ ಮುರಿದುಬಿದ್ದ ಕದನ ವಿರಾಮ: ಗಾಜಾದ ಮೇಲೆ ಇಸ್ರೇಲ್ ವಾಯುದಾಳಿಯಲ್ಲಿ 45 ಮಂದಿ ಸಾವು!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಗೆಲುವಿನ ಸಂಭ್ರಮದ ಬಳಿಕ ಹೃದಯಾಘಾತವಾಗಿ ಮಾಜಿ ಅಧ್ಯಕ್ಷ ಸಾವು

10,000 ಅಡಿ ದಿಢೀರ್ ಕುಸಿದ 737 ಬೋಯಿಂಗ್ ವಿಮಾನ; ಮಾರ್ಗ ಮಧ್ಯೆ ವಿಂಡ್ ಶೀಲ್ಡ್ ಗೆ ಹಾನಿ; ಪೈಲೆಟ್, ಪ್ರಯಾಣಿಕರು ಬದುಕಿದ್ದೇ ಪವಾಡ!

SCROLL FOR NEXT